Advertisement
ಸೆ. 16ರಂದು ಕಾಂದಿವಲಿ ಠಾಕೂರ್‌ಕಾಂಪ್ಲೆಕ್ಸ್ ನ ಅವೆನ್ಯೂ ಹೊಟೇಲ್ ಸಭಾಂಗಣದಲ್ಲಿ ನಡೆದ ಬಂಟರ ಸಂಘ ಜೋಗೇ ಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ 11ನೇ ವಾರ್ಷಿಕೋತ್ಸವ ಸಂಭ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಸ್ತುತ ಪಶ್ಚಿಮ ವಿಭಾಗದಲ್ಲಿ ನಮ್ಮ ಸಮಾಜದ ಶೈಕ್ಷಣಿಕ ಸಂಸ್ಥೆಯ ಕೊರತೆ ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಸಂಘವು ಸಿದ್ಧತೆ ಮಾಡಬೇಕು. ಪ್ರಾದೇಶಿಕ ವಲಯಗಳ ಸ್ಥಾಪನೆಯ ಯೋಚನೆ ಇಂದು ಉತ್ತಮವಾಗಿ, ಫಲಪ್ರದವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಯೋಜನೆ ಗಳಿಗೆ ಸಹಕಾರಿಯಾಗಲಿದೆ. ಬಂಟರ ಮಾತೃ ಸಂಘದಲ್ಲಿ ಪ್ರಾರಂಭದ ದಿನಗಳಿಂದಲೂ ಪಯ್ಯಡೆ ಕುಟುಂಬದ ಅಪೂರ್ವ ಕೊಡುಗೆ, ಅವಿನಾಭಾವ ಸಂಬಂಧವಿದ್ದು, ಪದ್ಮನಾಭ ಪಯ್ಯಡೆ ಅವರಂತಹ ಪ್ರಾಂಜಲ ಮನಸ್ಸಿನ ವ್ಯಕ್ತಿ ಮುಂಬರುವ ದಿನಗಳಲ್ಲಿ ಸಂಘದಲ್ಲಿ ಪ್ರಮುಖ ಸ್ಥಾನದ ಕಲಶವಾಗಬೇಕು ಎಂದು ಹೇಳಿದರು.
Related Articles
Advertisement
ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಅವರು ಮಾತನಾಡಿ, ಮಕ್ಕಳನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯತ್ತ ಕೊಂಡೊಯ್ಯವಲ್ಲಿ ಪಾಲಕರು ಸಹಕರಿಸಬೇಕು. ಪ್ರಾದೇಶಿಕ ಸಮಿತಿಗಳಲ್ಲಿ ಮಹಿಳೆಯರು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಭಿನಂದನೀಯ ಮತ್ತು ಉತ್ತಮ ಸಂಕೇತವಾಗಿದೆ ಎಂದು ಹೇಳಿದರು.ರಜನಿ ಆರ್. ಶೆಟ್ಟಿ ಪ್ರಾರ್ಥನೆಗೈದರು. ಬಂಟ ಗೀತೆಯೊಂದಿಗೆ ಗಣ್ಯರು ಸಮಾರಂಭಕ್ಕೆ ಚಾಲನೆ ನೀಡಿದರು. ಗೌರವ ಕಾರ್ಯದರ್ಶಿ ನಿಟ್ಟೆ ಎಂ. ಜಿ. ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ ಮಹಿಳಾ ವಿಭಾಗದ ವರದಿ ವಾಚಿಸಿದರು. ಅತಿಥಿ-ಗಣ್ಯರನ್ನು ಸಮಿತಿಯ ಪದಾಧಿಕಾರಿಗಳು ಗೌರವಿಸಿದರು. ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಬಿ. ಶೆಟ್ಟಿ, ಸಂಚಾಲಕ ಮನೋಹರ ಎನ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಗೌರವ ಕೋಶಾಧಿಕಾರಿ ಕೆ. ಪ್ರೇಮನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಎಂ. ಜಿ. ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು.
ವಿವಿಧ ಕ್ಷೇತ್ರಗಳ ಸಾಧಕರನ್ನು, ಸಮಿತಿಯ ಹಿತ ಚಿಂತಕರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಬೆಳಗಾವಿ ರಾಮ್‌ದೇವ್ ಹೊಟೇಲ್‌ನ ರಘುರಾಮ ಶೆಟ್ಟಿ, ಹರೀಶ್ ಶೆಟ್ಟಿ ಗುರ್ಮೆ ಹೊಟೇಲ್ ಮಂಥನ್, ಆದಾಯತೆರಿಗೆ ಅಧಿಕಾರಿ ಜಯಶೀಲ ಶೆಟ್ಟಿ, ಬಂಟರ ಸಂಘದ ಪದಾಧಿಕಾರಿಗಳಾದ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಸ್ಥಳೀಯ ಸಮಿತಿಯ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷೆ ಸುಚರಿತಾ ಶೆಟ್ಟಿ ಅವರು ಕ್ರೀಡಾ ಸ್ಪರ್ಧೆಯ ವಿಜೇತರ ಯಾದಿಯನ್ನು ವಾಚಿಸಿದರು. ಸ್ಥಳೀಯ ಸಮಿತಿಯ ಜತೆ ಕಾರ್ಯದರ್ಶಿ ಗಂಗಾಧರ ಎ. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಕಾಶ್ ಎ. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ವಿಜಯ ಎನ್. ಶೆಟ್ಟಿ, ವೈದ್ಯಕೀಯ ಸಮಿತಿಯ ವಿಕಾಸ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ವಿನೋದಾ ಎ. ಶೆಟ್ಟಿ, ಕಾರ್ಯದರ್ಶಿ ಶೈಲಜಾ ಎ. ಶೆಟ್ಟಿ, ಜತೆ ಕಾರ್ಯದರ್ಶಿ ಸುನಿತಾ ಎನ್. ಹೆಗ್ಡೆ, ಸಾಂಸ್ಕೃತಿಕ ವಿಭಾಗದ ಸರಿತಾ ಎಂ. ಶೆಟ್ಟಿ, ಸಲಹೆಗಾರ್ತಿ ಪದ್ಮಾವತಿ ಬಿ. ಶೆಟ್ಟಿ, ಸಂಚಾಲಕಿ ಸವಿತಾ ಸಿ. ಶೆಟ್ಟಿ, ಕೋಶಾಧಿಕಾರಿ ರೇಖಾ ವೈ. ಶೆಟ್ಟಿ, ಜತೆ ಕೋಶಾಧಿಕಾರಿ ಜ್ಯೋತಿ ಪಿ. ಶೆಟ್ಟಿ, ಸದಸ್ಯತ್ವ ನೋಂದಾವಣೆ ಸಮಿತಿಯ ಸುಲತಾ ಎಸ್. ಶೆಟ್ಟಿ, ಸದಸ್ಯರು, ಸಲಹೆಗಾರರು, ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಘುನಾಥ ಎನ್. ಶೆಟ್ಟಿ, ಅಶೋಕ್ ವಿ. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಆರ್. ಶೆಟ್ಟಿ ವಂದಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಮಾಜ ಬಾಂಧವರು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಅಡ್ಡದಾರಿ, ಕೆಡುಕು ಕೆಲಸಗಳು ನಮ್ಮ ಸಮಾಜಕ್ಕೆ ಮಾರಕ. ಮಾತಾಪಿತರ ಸೇವೆಯ ಮೂಲಕ ತೀರ್ಥಯಾತ್ರೆಯ ಫಲ ದೊರೆಯುತ್ತದೆ. ಮನುಷ್ಯನಿಗೆ ಸೌಂದರ್ಯ ಮುಖ್ಯವಲ್ಲ. ಗುಣ, ಬುದ್ಧಿ, ವಿದ್ಯಾಶಕ್ತಿ ನಮ್ಮನ್ನು ಪ್ರಜ್ಞಾವಂತರನ್ನಾಗಿಸುತ್ತದೆ. ಸಮಾಜ ಬಾಂಧವರು ವಿವಾಹ ವಿಚ್ಛೇಧನದಂತಹ ಸಾಮಾಜಿಕ ಪಿಡುಗಿಗೆ ಬಲಿಯಾಗಬಾರದು. ಇದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಅನೀತಿ, ಅನ್ಯಾಯದ ಸಂಪಾದನೆಯಿಂದ ದೂರವಿದ್ದು, ಸನ್ಮಾರ್ಗದ ಸಂಪಾದನೆಯ ಮೂಲಕ ಸಮಾಜದ ಒಳಿತಿಗಾಗಿ ಸಹಕರಿಸಬೇಕು. ಇದರಿಂದ ಆತ್ಮತೃಪ್ತಿ ಲಭಿಸುತ್ತದೆ
– ಮುಂಡಪ್ಪ ಎಸ್. ಪಯ್ಯಡೆ, ಸಮನ್ವಯಕರು
ಪ್ರಾದೇಶಿಕ ಸಮಿತಿಗಳು ಪಶ್ಚಿಮ ವಿಭಾಗ. ಇದೊಂದು ಬಂಟರ ಹಬ್ಬವಾಗಿದೆ. ಸಮಿತಿಯ ಪದಾಧಿಕಾರಿಗಳ ಕಾರ್ಯಕ್ರಮಗಳು ಮೆಚ್ಚುವಂಥದ್ದು. ಮಾತೃ ಸಂಸ್ಥೆಯಲ್ಲಿ ಬಂದ ಅಧ್ಯಕ್ಷರೆಲ್ಲರೂ ಸಂಘದ ರೂಪುರೇಷೆಗಳಿಗೆ ಬದಲಾವಣೆ ತಂದಿದ್ದಾರೆ. ಒಂಭತ್ತು ಪ್ರಾದೇಶಿಕ ಸಮಿತಿಗಳು ಬಂಟರ ಸಂಘಕ್ಕೆ ಆಧಾರಸ್ತಂಭಗಳಂತಿದ್ದು, ಪಯ್ಯಡೆ ಸಹೋದರರ ಮಾರ್ಗದರ್ಶನ ಉತ್ತಮ ಸಮಾಜ ಸೇವೆಗೆ ಅವಕಾಶ ನೀಡಿದಂತಾಗಿದೆ. ಮನಸ್ಸಿನಲ್ಲಿ ವೇದನೆ ಸಲ್ಲದು, ಭೇದ-ಭಾವ ತೊರೆದು ಒಗ್ಗಟ್ಟಿನಿಂದ ಸಮಾಜ ಸೇವೆಯಲ್ಲಿ ತೊಡಗೋಣ
– ಪ್ರಭಾಕರ ಎಲ್. ಶೆಟ್ಟಿ ಅಧ್ಯಕ್ಷರು, ಬಂಟರ ಸಂಘ ಮುಂಬಯಿ. ಹಿಂದಿನ ಕಾರ್ಯಾಧ್ಯಕ್ಷರುಗಳ ಉತ್ತಮ ಅಡಿಪಾಯ ನನ್ನ ಕಾರ್ಯಾವಧಿಯಲ್ಲಿ ಸಹಕಾರಿಯಾಯಿತು. ಮೂರು ವರ್ಷದ ಸಮಿತಿಯ ಸಮಾಜ ಸೇವೆ ಆತ್ಮತೃಪ್ತಿ ತಂದಿದೆ. ಸಮಿತಿಯ ಎಲ್ಲಾ ಹಿರಿ-ಕಿರಿಯ ಪದಾಧಿಕಾರಿಗಳ ಉತ್ತಮ ಸಹಕಾರ ನನಗೆ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಮಹಿಳಾ ವಿಭಾಗ, ಯುವ ವಿಭಾಗ, ಉಪಸಮಿತಿಗಳ ಸಹಕಾರವನ್ನು ಮರೆಯುವಂತಿಲ್ಲ
– ವಿಜಯ ಆರ್. ಭಂಡಾರಿ ಕಾರ್ಯಾಧ್ಯಕ್ಷರು, ಬಂಟರ ಸಂಘ ಜೋಗೇಶ್ವರಿ-ದಹಿಸರ್ ಸಮಿತಿ. ಚಿತ್ರ-ವರದಿ: ರಮೇಶ್ ಉದ್ಯಾವರ