Advertisement

ಶಿಕ್ಷಣ ಕ್ಷೇತ್ರದಲ್ಲಿ ಬಂಟರ ಸಂಘ ಇತಿಹಾಸ ನಿರ್ಮಿಸಿದೆ: ಪಯ್ಯಡೆ

01:10 PM Jun 26, 2018 | |

ಮುಂಬಯಿ: ಬಂಟ ಸಮಾಜದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದರೊಂದಿಗೆ, ವಿದ್ಯಾರ್ಜನೆಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸುವ  ಉದ್ದೇಶದಿಂದ ಹಲವು ಯೋಜನೆಗಳನ್ನು ಸಂಘವು ಹಮ್ಮಿಕೊಂಡಿದೆ.  

Advertisement

ಕಷ್ಟದಲ್ಲಿರುವ ಬಂಟ ಬಂಧುಗಳು ಇದರ ಪ್ರಯೋಜನವನ್ನು ಪಡೆಯುವಂತಾಗಬೇಕು. ಸಂಘವು ಶಿಕ್ಷಣ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.

ಜೂ. 16 ರಂದು ನಲಸೋಪರ ಪೂರ್ವದ ರೀಜೆನ್ಸಿ ಬ್ಯಾಂಕ್ವೆಟ್‌ ಸಭಾಗೃಹದಲ್ಲಿ ಬಂಟರ ಸಂಘ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ವತಿಯಿಂದ ನಡೆದ ಸ್ಥಳೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತೀ ವರ್ಷ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಸುಮಾರು ಐದು ಕೋಟಿ ರೂಪಾಯಿಯನ್ನು ವಿತರಿಸಲಾಗುತ್ತಿದೆ. ವಸಾಯಿಯಿಂದ ಡಹಾಣು ತನಕದ ಅರ್ಹ ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಅಂಗೀಕರಿಸಿ ನೆರವು ನೀಡಲಾಗಿದೆ. ಬಂಟ ಸಮಾಜದ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗದಂತೆ ಸಂಘವು ರಕ್ಷಣೆ ನೀಡುತ್ತಿದೆ ಎಂದು ನುಡಿದರು.
ಬಂಟರ ಸಂಘದ ಟ್ರಷ್ಟಿ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ,  ಈ ಪರಿಸರದ ಸಮಾಜ ಬಾಂಧವರ ಕಷ್ಟಗಳಿಗೆ ಸಂಘವು ಸಹಕರಿಸುತ್ತಾ ಬಂದಿದೆ. ವಿದ್ಯಾರ್ಥಿಗಳು ಮುಂದೆ ಉತ್ತಮ ಬದುಕನ್ನು ರೂಪಿಸುವಂತಾಗಲಿ ಎಂದು ಶುಭ ಹಾರೈಸಿದರು.

ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಶೆಟ್ಟಿಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಇಂದಿನ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ನಡೆದಿದೆ. ಕಷ್ಟ ಎಲ್ಲರಿಗೂ ಬರುತ್ತದೆ. ಬಡತನ ಎಲ್ಲರಿಗೂ ವಿವಿಧ ರೀತಿಯಲ್ಲಿದೆ. ವಿದ್ಯಾರ್ಥಿಗಳು ಆರ್ಥಿಕ ನೆರವನ್ನು ಪಡೆಯಲು ಹಿಂಜರಿಯಬಾರದು. ಮಕ್ಕಳು ಉತ್ತಮ ಪ್ರಜೆಯಾಗಿ ಮುಂದೆ ಸಂಘದ ಸೇವೆ ಮಾಡಲು ಮರೆಯಬಾರದು ಎಂದರು.
ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಭಾಸ್ಕರ ವೈ. ಶೆಟ್ಟಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಉತ್ತಮ ಭವಿಷ್ಯವಿದ್ದು ಸಂಘವು ನಿಮ್ಮೊಂದಿಗಿದೆ ಎಂದರು.  ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಕರ್ನೂರು ಶಂಕರ ಆಳ್ವ ಮಾತನಾಡಿ, ಸಮಾಜದಲ್ಲಿ ಉಳ್ಳವರು ಇತರರಿಗೆ ಸಹಕರಿಸಿದರೆ ಬಡತನ ನಿವಾರಣೆ ಸಾಧ್ಯ. ಮಕ್ಕಳು ಉತ್ತಮ ಶಿಕ್ಷಣ ದಿಂದ ಉತ್ತಮ ಸಾಧನೆ ಮಾಡಬೇಕು. ಸಾಧನೆ ನಮ್ಮನ್ನು ಉನ್ನತ ಮಟ್ಟಕ್ಕೇರಿಸುತ್ತದೆ ಎಂದರು.

ಪ್ರಾದೇಶಿಕ ಸಮಿತಿಯ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಎ. ಶೆಟ್ಟಿ ಮಾತನಾಡಿ, ಹಿಂದಿನ ಕಾಲದ ಬಡತನಕ್ಕು ಇಂದಿನ ಬಡತನಕ್ಕೂ ವ್ಯತ್ಯಾಸವಿದ್ದು, ಈಗಿನ ವಿದ್ಯಾರ್ಥಿಗಳಿಗೆ ಬಹಳ ಸಹಕಾರ ಸಿಗುತ್ತಿದೆ. ಅಗತ್ಯವಿದ್ದವರು ಮಾತ್ರ ಆರ್ಥಿಕ ನೆರವನ್ನು ಪಡೆಯಬೇಕು ಎಂದರು. ಬಂಟರ ಸಂಘ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್‌ ಆರ್‌. ಪಕ್ಕಳ ಸ್ವಾಗತಿಸಿದರು.
ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ವಿಜಯ ಶೆಟ್ಟಿ, ಜೊತೆ ಕಾರ್ಯದರ್ಶಿ ಜಗನ್ನಾಥ ಡಿ. ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಾ ಎ. ಶೆಟ್ಟಿ, ನಾರಾಯಣ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

Advertisement

ಸಮಾಜದ ಮಕ್ಕಳಿಗೆ ಆರ್ಥಿಕ ನೆರವು, ವಿಧವೆಯರಿಗೆ ಮತ್ತು ವಿಕಲಚೇತನರಿಗೆ ಆರ್ಥಿಕ ನೆರವನ್ನು ವಿತರಿಸಲಾಯಿತು. ಗೌರವ ಕಾರ್ಯದರ್ಶಿ ಪ್ರವೀಣ್‌ ಶೆಟ್ಟಿ ಕಣಂಜಾರು ಕಾರ್ಯಕ್ರಮವನ್ನು ನಿರೂಪಿಸಿದ್ದು ನಾರಾಯಣ ಶೆಟ್ಟಿ ವಂದಿಸಿದರು. 

ಬಂಟ ಸಮಾಜದ ಮಕ್ಕಳೂ ವಿದ್ಯೆ
ಯಿಂದ ವಂಚಿತರಾಗದಂತೆ ಎÇÉಾ ಸಮಿತಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತಿದ್ದು, ಸಂಘವು ಇಂತಹ ಕಾರ್ಯಕ್ರಮಕ್ಕೆ ವಿಶೇಷ ಪ್ರಾಧಾ ನ್ಯತೆಯನ್ನು ನೀಡುತ್ತಿದೆ. ಮಕ್ಕಳು ಮುಂದೆ ಉನ್ನತ ಮಟ್ಟಕ್ಕೇರಿ ಸಂಘಕ್ಕೆ ಸೇವೆ ಮಾಡುವಂತೆ ಪಾಲಕರು ಪ್ರೋತ್ಸಾಹಿಸಬೇಕು 
-ಡಾ| ಪ್ರಭಾಕರ ಶೆಟ್ಟಿ, ಸಮನ್ವಯಕರು, ಪಶ್ಚಿಮ ವಿಭಾಗ ಪ್ರಾದೇಶಿಕ ಸಮಿತಿಗಳು

ಶೈಕ್ಷಣಿಕ ನೆರವಿಗೆ ದಾನಿಗಳು ದೊಡ್ಡ ಮಟ್ಟದ ದೇಣಿಗೆ ನೀಡಿದ್ದು, ಉತ್ತಮ ಮೊತ್ತವನ್ನು ಈ ಸಲ ವಿತ ರಿಸುವಂತಾಗಿದೆ. ಮುಂದಿನ ವರ್ಷ 500 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿ ಸುವ ಉದ್ದೇಶ ಸಂಘ¨ªಾಗಿದ್ದು, ಅಗತ್ಯವಿದ್ದವರು ಸಂಘದಿಂದ ಆರ್ಥಿಕ ನೆರವನ್ನು ಸ್ವೀಕರಿಸಬೇಕು. 
-ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಕಾರ್ಯಾಧ್ಯಕ್ಷರು, ಬಂಟರ ಸಂಘ ಶಿಕ್ಷಣ, ಸಮಾಜ ಕಲ್ಯಾಣ ಸಮಿತಿ

ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸಂಘವು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ವಿದ್ಯಾವಂತರನ್ನಾಗಿ ಮಾಡಿ ಮುಂದೆ ಅವರು ತಮ್ಮ ಕುಟುಂಬವನ್ನು ನಡೆಸಬಲ್ಲರು. ನಲಸೋಪರದಲ್ಲಿ ಕಾಲೇಜು ಸ್ಥಾಪಿಸು ವುದು ನಮ್ಮ ಉದ್ದೇಶವಾಗಿದೆ.
-ಶಶಿಧರ ಕೆ. ಶೆಟ್ಟಿ, ಸಂಚಾಲಕರು,ವಸಾಯಿ ಡಹಾಣೂ ಪ್ರಾದೇಶಿಕ ಸಮಿತಿ
ಚಿತ್ರ-ವರದಿ : ಈಶ್ವರ ಎಂ. ಐಲ್‌

Advertisement

Udayavani is now on Telegram. Click here to join our channel and stay updated with the latest news.

Next