Advertisement
ಫೆ. 2ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘದ ಮುಖ್ಯವಾಣಿ ಬಂಟರವಾಣಿ ಸಮಿತಿ ಆಯೋಜಿಸಿದ ಚಿಣ್ಣರ ಚಿಲಿಪಿಲಿ-3 ಪ್ರತಿಭಾ ಸ್ಪರ್ಧೆ ಹಾಗೂ ನೃತ್ಯ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
Related Articles
Advertisement
ಗೌವರ ಅತಿಥಿ ಗೋಲ್ಡನ್ ಫೋರ್ಕ್ಸ್ ಹಾಸ್ಟಿಟಾಲಿಟಿ ಪ್ರೈ.ಲಿ. ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಆದರ್ಶ್ ಶೆಟ್ಟಿ ಮಾತನಾಡಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಮತ್ತು ಸಮಿತಿ ಸಂಘದವರ ಪರಿಶ್ರಮದೊಂದಿಗೆ ಮೂಡಿಬಂದಿರುವ ಚಿಣ್ಣರ ಚಿಲಿಪಿಲಿ ಫ್ಯಾಶನ್ ಶೋ ಹಾಗೂ ನೃತ್ಯ ಕಾರ್ಯಕ್ರಮವು ಅದ್ಭುತವಾಗಿತ್ತೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಂಟರ ಸಮಾಜದ ಮುಂದಿನ ಪೀಳಿಗೆಯ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳನ್ನು ಬಂಟ ಸಂಘ ಸಂಸ್ಥೆಗಳು ಹಮ್ಮಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾಗಿ ಸಾರ್ಥಕ ಸೇವೆ ಗೈದಿರುವ ಸುಜಯಾ ಆರ್. ಶೆಟ್ಟಿ, ಆಶಾ ಎಂ. ಹೆಗ್ಡೆ, ಲತಾ ಜೆ. ಶೆಟ್ಟಿ ಇವರನ್ನು ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಅಧ್ಯಕ್ಷರು, ಅತಿಥಿ ಗಣ್ಯರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ಶಾಲು ಹೊದಿಸಿ, ಸ್ಮರಣಿಕೆ ಸಮ್ಮಾನ ಪತ್ರ ಹಾಗೂ ಪುಷ್ಪ ಗುತ್ಛದೊಂದಿಗೆ ಸಮ್ಮಾನಿಸಿದರು. ಶಶಿಕಲಾ ಎಸ್. ಪೂಂಜ, ಅಮಿತಾ ಎಸ್. ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.
ಬಂಟರ ಸಂಘದ ಯುವ ವಿಭಾಗದ ಸ್ಥಾಪಕಾಧ್ಯಕ್ಷ ಚಲನಚಿತ್ರ ಹಾಗೂ ಧಾರಾವಾಹಿ ನಟರಾಗಿ ಖ್ಯಾತಿ ಹೊಂದಿರುವ ಹರೀಶ್ ವಾಸು ಶೆಟ್ಟಿ ಇವರನ್ನು ಸಮಿತಿಯ ಪದಾಧಿಕಾರಿಗಳು ಹಾಗೂ ಅತಿಥಿ ಗಣ್ಯರು ಶಾಲು ಹೊದೆಸಿ, ಸಮ್ಮಾನ ಪತ್ರ, ಸ್ಮರಣಿಕೆ ಹಾಗೂ ಪುಷ್ಪ ಗುತ್ಛ ನೀಡಿ ಸಮ್ಮಾನಿಸಿದರು. ಸಮ್ಮಾನಿತರು ಕ್ರಮವಾಗಿ ಮಾತನಾಡುತ್ತ ಸಮ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಯುವ ವಿಭಾಗದ ತೇಜಸ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆ ಯಾಗಿ ಪುಟಾಣಿಗಳ ಮನ ಸೆಳೆದ ತಾರಕ್ ಮೆಹ¤ ಉಲ್ಟಾ ಚಷ್ಮಾ ಧಾರಾವಾಹಿಯ ಮೋನಿಕಾ, ಭಾಡೋರಿಯಾ (ಬಾಬಿಜೀ), ಸಿಐಡಿ ಧಾರಾವಾಹಿಯ ಅಜಯ್ ನಾಗ್‌ರಥ್ (ಪಂಕಜ್), ಅಂಶಾ ಸಯ್ಯದ್ (ಪೂರ್ವಿ), ಡಾನ್ಸ್ ಇಂಡಿಯಾ ಡಾನ್ಸ್ ಖ್ಯಾತಿಯ ಕೊರಿಯೋಗ್ರಾಫರ್ ತುಷಾರ್ ಶೆಟ್ಟಿ ಇವರನ್ನು ಸತ್ಕರಿಸಲಾಯಿತು. ತುಷಾರ್ ಶೆಟ್ಟಿ ವೇದಿಕೆಯಲ್ಲಿ ನೃತ್ಯಮಾಡುವ ಮೂಲಕ ಎಲ್ಲರ ಕಣ್ಸೆಳೆದರು.
ಇದೇ ಸಂದರ್ಭದಲ್ಲಿ ಸತತ ಮೂರನೇ ವರ್ಷ ಚಿಣ್ಣರ ಚಿಲಿಪಿಲಿ ಫ್ಯಾಶನ್ ಶೋ ಹಾಗೂ ನೃತ್ಯ ಸ್ಪರ್ಧೆ ಆಯೋಜನೆಗೆ ಕಾರಣರಾದ ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರನ್ನು ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಪದಾಧಿಕಾರಿಗಳು, ಉದ್ಘಾಟಕ ಐಕಳ ಹರೀಶ್ ಶೆಟ್ಟಿ, ಅತಿಥಿ ಗಣ್ಯರು ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ, ಸಂಪಾದಕ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ಸಂಪಾದಕ ಮಂಡಳಿಯ ಸದಸ್ಯರ ಪರವಾಗಿ ಡಾ| ಸುನೀತಾ ಶೆಟ್ಟಿ ಅವರು ಒಟ್ಟಾಗಿ ಹೃದಯ ಸ್ಪರ್ಶಿ ಸಮ್ಮಾನ ನೀಡಿದ್ದು ಔಚಿತ್ಯಪೂರ್ಣವಾಗಿತ್ತು.ಆರಂಭದಲ್ಲಿ ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ವಿಭಾಗದ ಮನೋರಮಾ ಎನ್. ಬಿ. ಶೆಟ್ಟಿ ಪಾರ್ಥಿಸಿದರು. ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರು ಅತಿಥಿ ಗಣ್ಯರನ್ನು, ಸಭಿಕರನ್ನು ಸ್ವಾಗತಿಸಿ ಮಾತನಾಡುತ್ತ, ಬಂಟರ ಸಂಘದ ಮುಂದಿನ ಭವಿಷ್ಯವಾಗಿರುವ ಬಂಟ ಪುಟಾಣಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಬಂಟರವಾಣಿ ಚಿಣ್ಣರ ಚಿಲಿಪಿಲಿಯ 3ನೇ ವರ್ಷದ ಫ್ಯಾಶನ್ ಶೋ ಹಾಗೂ ನೃತ್ಯ ಸ್ಪರ್ಧೆಯನ್ನು ಆಯೋಜಿಸಿದೆ. ಇಂತಹ ಅಭೂತ ಪೂರ್ವ ಕಾರ್ಯಕ್ರಮದ ಆಯೋಜನೆ ಅಷ್ಟೊಂದು ಸುಲಭದ ಮಾತಲ್ಲ. ಕಳೆದ ಮೂರು ತಿಂಗಳನಿಂದ ನಾವು ಪಟ್ಟ ಪರಿಶ್ರಮ ಸಾರ್ಥಕವಾಗಬೇಕೆಂಬ ಬಯಕೆ ನಮ್ಮದಾಗಿದೆ ಎಂದರು. ಅಧ್ಯಕ್ಷಕರು, ಪದಾಧಿಕಾರಿಗಳು, ವಿಶ್ವಸ್ತರು, ಮಾಜಿ ಅಧ್ಯಕ್ಷರು, ಉಪಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಸಂಘದ ಒಂಬತ್ತು ಪ್ರಾದೇಶಿಕ ವಿಭಾಗಗಳ ಸಹಕಾರದಿಂದ ಇವೆಲ್ಲವೂ ಸಾಧ್ಯವಾಗಿದೆ. ಇದರ ಶ್ರೇಯ ಅವರಿಗೆ ಸಲ್ಲಬೇಕು ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಬಂಟರ ವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಬಂಟರವಾಣಿ ಸಂಪಾದಕ ಪ್ರೇಮನಾಥ ಶೆಟ್ಟಿ ಮುಂಡ್ಕೂರು ವಂದಿಸಿದರು. ವೇದಿಕೆಯಲ್ಲಿ ಬಂಟರವಾಣಿಯ ಪ್ರಕಾಶಕ ಸಿಎ ಸಂಜೀವ ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಗೌರವ ಸಂಪಾದಕ ಅಶೋಕ್ ಪಕ್ಕಳ, ಸಂಪಾದಕ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ಪ್ರಭಾಕರ ಶೆಟ್ಟಿ, ಸಂಘದ ಇತರ ಪದಾಧಿಕಾರಿಗಳಾದ ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಜಯ ಎ. ಶೆಟ್ಟಿ, ಎಂ. ಜಿ. ಶೆಟ್ಟಿ, ವಿಟuಲ್ ಎಸ್. ಆಳ್ವ, ಅಶೋಕ್ ಅಡ್ಯಂತಾಯ, ವಸಂತ್ ಶೆಟ್ಟಿ ಪಲಿಮಾರು, ಜಯಪ್ರಕಾಶ್ ಶೆಟ್ಟಿ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ನಿಟ್ಟೆ ಮುದ್ದಣ್ಣ ಜಿ. ಶೆಟ್ಟಿ, ಪ್ರಕಾಶ್ ಶೆಟ್ಟಿ, ಡಾ| ಸುನೀತಾ ಎಂ. ಶೆಟ್ಟಿ, ಮನೋರಮಾ ಎನ್. ಬಿ. ಶೆಟ್ಟಿ, ರತ್ನಾ ಶೆಟ್ಟಿ ಉಪಸ್ಥಿತರಿದ್ದರು. ಚಿತ್ರ-ವರದಿ: ಪ್ರೇಮನಾಥ ಶೆಟ್ಟಿ ಮುಂಡ್ಕೂರು