Advertisement
ಪೊವಾಯಿಯ ಮಂತ್ರಾ ಡೈನಿಂಗ್‌ನ ಬಾಂಕ್ವೆಟ್ ಹಾಲ್‌ನಲ್ಲಿ ಜರಗಿದ ಆಟಿಡೊಂಜಿ ದಿನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ ಎಸ್. ಪಯ್ಯಡೆ, ಉಪಾಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ಸಂಜೀವ ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ರಂಜನಿ ಸುಧಾಕರ ಹೆಗ್ಡೆ, ಜೊತೆ ಕಾರ್ಯದರ್ಶಿ ಮನೋರಮಾ ಎನ್. ಬಿ. ಶೆಟ್ಟಿ, ಜೊತೆ ಕೋಶಾಧಿಕಾರಿ ರತ್ನಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಂಟರ ಸಂಘದ ಕೋಶಾಧಿಕಾರಿ ಸಿಎ ಪ್ರವೀಣ್ ಭೋಜ ಶೆಟ್ಟಿ ಅವರು ಮಾತನಾಡಿ, ನಮ್ಮ ಒಂಭತ್ತು ಪ್ರಾದೇಶಿಕ ಸಮಿತಿಗಳು ಬಂಟರ ಸಂಘದ ಆದಾರ ಸ್ಥಂಭಗಳಿದ್ದಂತೆ. ಬಂಟರ ಸಂಘವನ್ನು ನಮ್ಮ ಹಿರಿಯರು ಹುಟ್ಟುಹಾಕಿದ ಉದ್ದೇಶವನ್ನು ವಿವರಿಸುತ್ತಾ ಅವರು ಬಂಟ್ಸ್ ಎನ್ನುವ ಪದವೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ಆಗಿದೆ. ಇದ್ದವರು ಇರದವರ ಕಷ್ಟಕ್ಕೆ ಸ್ಪಂದಿಸುವುದೇ ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಬೇಕು. ಜೊತೆಜೊತೆಯಲ್ಲಿ ಇಂತಹ ನಮ್ಮ ಸಂಸ್ಕಾರವನ್ನು ಬಿಂಬಿಸುವ ಕಾರ್ಯಕ್ರಮಗಳೂ ನಡೆಯಬೇಕು. ಅದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಅವರು ನುಡಿದರು.
ಪ್ರಾದೇಶಿಕ ಸಮಿತಿಗಳ ಸಂಚಾಲಕರಾದ ಡಾ| ಪ್ರಭಾಕರ ಶೆಟ್ಟಿ ಅವರು ಮಾತನಾಡಿ, ನನಗೆ ಈ ಸಮಿತಿಯ ಮೇಲೆ ವಿಶೇಷ ಮಮಕಾರ. ಕಾರಣ ನಾನು ಆರಂಭದಲ್ಲಿ ಮಹೇಶ್ ಶೆಟ್ಟಿ ಅವರುಅ ಕಾರ್ಯಾವ ಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೆ. ಈ ಸಮಿತಿಯ ಕಾರ್ಯವೈಖರಿಯನ್ನು ಕಂಡರೆ ನನಗೆ ತುಂಬಾ ಖುಷಿಯಾಗುತ್ತದೆ. ಇಂದು ಇಲ್ಲಿ ಆಟಿ ವಿಶೇಷವಾಗಿ ಮನೆಯಲ್ಲಿ ಮಾಡಿ ತಂದ ವಿಶೇಷ ಖಾದ್ಯಗಳೇ ನಿಮ್ಮೆಲ್ಲರ ನಡುವೆ ಇರುವ ಪ್ರೀತಿ, ಒಗ್ಗಟ್ಟಿಗೆ ಸಾಕ್ಷಿ ಎಂದು ನುಡಿದು ಶುಭ ಹಾರೈಸಿದರು.
Related Articles
Advertisement
ಸಮಿತಿಯ ಯುವ ವಿಭಾಗ ಕಾರ್ಯಾಧ್ಯಕ್ಷರಾದ ರಕ್ಷಿತ ಶೆಟ್ಟಿ ಅವರು ಮಾತನಾಡಿ, ಹಿಂದೆ ಆಟಿ ತಿಂಗಳ ದಿನಗಳನ್ನು ನೆನೆಸುವುದೆಂದರೆ ಭಯ. ಬಡತನ, ಕಾಯಿಲೆ ಇವೆಲ್ಲವನ್ನು ಬಹಳ ಕಷ್ಟದಿಂದ ಕಳೆಯುತ್ತಿದ್ದ ನೆನಪುಗಳು ಎಲ್ಲರಲ್ಲಿ ಇರುತ್ತದೆ. ಸುಖದ ದಿನದಲ್ಲೂ ಆ ನೆನಪುಗಳೇ ಈಗ ಆಚರಿಸುವ ಆಟಿ ವಿಶೇಷ ಎನ್ನಬಹುದು. ಪಾಲೆದ ಕೆತ್ತೆಯ ಕಷಾಯ ಕುಡಿದರೆ ವರ್ಷ ಪೂರ್ತಿ ಬರುವ ಕಾಯಿಲೆಯಿಂದ ದೂರವಿಡಬಹುದು ಎಂಬ ನಂಬಿಕೆ ನಮ್ಮ ಪೂರ್ವಜರಲ್ಲಿ ಇತ್ತು ಎಂದರು.ಸಮಿತಿಯ ಉಪಾಧ್ಯಕ್ಷರಾದ ನ್ಯಾಯವಾದಿ ಆರ್. ಜಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಶೆಟ್ಟಿ ಅವರು ವರದಿ ವಾಚನ ಮಾಡಿದರು. ಬಂಟರ ಸಂಘದ ಮಹಿಳಾ ವಿಭಾಗದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರಶಾಂತಿ ದಿವಾಕರ ಶೆಟ್ಟಿ ಪ್ರಾರ್ಥನೆ ಹಾಡಿದರು. ಸಮಿತಿಯ ಮಹಿಳಾ ವಿಭಾಗದ ಉಪಾಧ್ಯಕ್ಷರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕರುಣಾಕರ ಶೆಟ್ಟಿ ಅವರು ವಂದಿಸಿದರು. ಪ್ರಶಾಂತಿ ಡಿ. ಶೆಟ್ಟಿ, ಜಯಂತಿ ಡಿ. ಕೆ. ಶೆಟ್ಟಿ, ವನಿತಾ ನೋಂಡಾ, ಅನಿತಾ ಆರ್. ಕೆ. ಶೆಟ್ಟಿ, ಗೀತಾ ಶೆಟ್ಟಿ, ಸುಜಾತಾ ಗುಣಪಾಲ ಶೆಟ್ಟಿ, ಹರ್ಷಲತಾ ಅಪ್ಪಣ್ಣ ಶೆಟ್ಟಿ, ಶೋಭಾ ರಮೇಶ್ ಸರಿ, ಶೋಭಾ ಶಂಕರ ಶೆಟ್ಟಿ, ವಜ್ರಾ ಪಿ. ಪೂಂಜಾ, ಸವಿತಾ ಕರುಣಾಕರ ಶೆಟ್ಟಿ, ಶೈಲಾ ಎಸ್. ಶೆಟ್ಟಿ, ಗೀತಾ ಆರ್. ಶೆಟ್ಟಿ, ಸುಜಾತಾ ಆರ್. ಶೆಟ್ಟಿ, ನಿಧಿ ವಿ. ಶೆಟ್ಟಿ, ಉಷಾ ವಿ. ಕೆ. ಶೆಟ್ಟಿ, ಸುಚಿತ್ರಾ ಶೆಟ್ಟಿ, ಅನಿತಾ ಯು. ಶೆಟ್ಟಿ, ತ್ರಿವೇಣಿ ಶೆಟ್ಟಿ, ಲಕ್ಷ¾ಣ ಶೆಟ್ಟಿ, ಚಿತ್ರಾ ವಿಶ್ವನಾಥ ಶೆಟ್ಟಿ ಪೇತ್ರಿ, ಸೂರಜ್ ಶೆಟ್ಟಿ, ಮರಾಠ ಸುಧಾಮ ಶೆಟ್ಟಿ ಮೊದಲಾದವರು ವಿವಿಧ ಖಾದ್ಯಗಳನ್ನು ತಯಾರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಾಗಿರುವ ಡಾ| ಆರ್. ಕೆ. ಶೆಟ್ಟಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವವರು. ಅವರು ತಮ್ಮ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಸಮಾಜ ಸೇವೆಯ ಸದುದ್ದೇಶದಿಂದ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಅನೇಕ ವರ್ಷಗಳಿಂದ ಬಂಟರ ಸಂಘದಲ್ಲಿ ಸಕ್ರಿಯರಾಗಿರುವ ಅವರು ಈ ಸಮಿತಿಗೆ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಿಜಕ್ಕೂ ಅಭಿಮಾನದ ವಿಷಯ. ಈ ಸಮಿತಿಯಲ್ಲಿ ತುಂಬಾ ಮಂದಿ ಪ್ರತಿಭಾವಂತರಿದ್ದಾರೆ. ಬೇರೆ ಬೇರೆ ಕ್ಷೇತ್ರದ ಸಾಧಕರಿದ್ದಾರೆ. ಎಲ್ಲರೂ ಜೊತೆಯಾಗಿ ಬಹಳ ಖುಷಿಯಿಂದ ಕೆಲಸ ಮಾಡುತ್ತಿರುವುದನ್ನು ಕಂಡಾಗ ನಮಗೂ ಸಂತೋಷವಾಗುತ್ತದೆ.
ಮಹೇಶ್ ಎಸ್. ಶೆಟ್ಟಿ ,
ಜತೆ ಕಾರ್ಯದರ್ಶಿ : ಬಂಟರ ಸಂಘ ಮುಂಬಯಿ.