Advertisement

ಬಂಟರ ಸಂಘ ಅಹ್ಮದಾಬಾದ್‌ ಬೆಳ್ಳಿ ಹಬ್ಬದ ಸಂಭ್ರಮ

05:02 PM Nov 24, 2018 | Team Udayavani |

ಅಹ್ಮದಾಬಾದ್‌: ಗುಜ ರಾತ್‌ನಲ್ಲಿರುವ ಬಂಟ ಸಮಾಜ ಬಾಂಧವರನ್ನು ಒಗ್ಗೂಡಿಸಿಕೊಂಡು ಸಾಂಸ್ಕೃತಿಕ, ಸಾಮಾಜಿಕ ಕಾರ್ಯ ಗಳನ್ನು ಹಮ್ಮಿಕೊಂಡು ಬೆಳ್ಳಿ ಹಬ್ಬ ಆಚರಿಸುತ್ತಿರುವ  ಅಹ್ಮದಾಬಾದ್‌ ಬಂಟರ ಸಂಘವು ಮಾಡುತ್ತಿರುವ ಕಾರ್ಯ ಅಭಿನಂದನೀಯ. ಸಂಘವು ಸಮಾಜ ಬಾಂಧವರ ಆಶೋತ್ತರ ಪರಿ ಗಣಿಸಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಪ್ರಾಮಾಣಿಕವಾಗಿ ತೊಡಗಿಸಿಕೊಂಡಾಗ ಸಂಘಟನೆ ಬಲಗೊಳ್ಳಲು ಸಾಧ್ಯ. ಸಮಾಜದಲ್ಲಿ ರುವ ಶ್ರೀಮಂತರು ಸಮಾಜದ ಬಡ ಬಂಟರನ್ನು ಗುರುತಿಸಿ ಸಹಾಯ ಹಸ್ತವನ್ನು ನೀಡಿ ಬಡತನ ಮುಕ್ತ ಸಮಾಜಕ್ಕಾಗಿ ಶ್ರಮಿಸಬೇಕಾಗಿದೆ. ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ತೊಡಗಿಸಿ ಕೊಳ್ಳಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ  ಶೆಟ್ಟಿ ನುಡಿದರು.

Advertisement

ನ. 18ರಂದು ಅಹ್ಮದಾಬಾದ್‌ನಲ್ಲಿರುವ ದೀನದಯಾಳ್‌ ಆಡಿಟೋರಿಯಂನಲ್ಲಿ ನಡೆದ ಬಂಟರ ಸಂಘ ಅಹ್ಮದಾಬಾದ್‌ ಇದರ ಬೆಳ್ಳಿಹಬ್ಬದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಭವಿಷ್ಯದಲ್ಲಿ ಸಂಘವು ಉತ್ತರೋತ್ತರ ಯಶಸ್ಸು ಕಾಣಲಿ. ಸಂಘಟನೆಯನ್ನು ಮಾಡುವುದು ಬಹಳ ಸುಲಭ. ಆದರೆ ಅದನ್ನು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಬೆಳೆಸಿಕೊಂಡು ಹೋಗುವುದು ಬಹಳ ಕಷ್ಟ. ದೂರದ ಗುಜರಾತ್‌ನಲ್ಲಿ ನೀವೆಲ್ಲರೂ ಮಾಡು

ತ್ತಿರುವ ಸೇವೆ ಕಂಡಾಗ ಸಂತೋಷ ವಾಗುತ್ತಿದೆ. ಸಂಘಟನೆ ಯನ್ನು ಇನ್ನಷ್ಟು ಬಲಪಡಿಸಿ ಸಮಾಜ ಬಾಂಧವರಿಗೆ ಸಹಕರಿಸಬೇಕು ಎಂದರು.

ಸಂಘದ ಅಧ್ಯಕ್ಷ ಅಪ್ಪು ಪಿ. ಶೆಟ್ಟಿ ಮಾತನಾಡಿ, ನಮ್ಮ ಸಂಘವು ಬೆಳ್ಳಿ ಹಬ್ಬದ ಸಂಭ್ರಮವನ್ನು ಆಚರಿಸುತ್ತಿರುವುದಕ್ಕೆ ಆನಂದವಾಗುತ್ತಿದೆ. ತನ್ನ ಅಧ್ಯ ಕ್ಷತೆಯ ಅವಧಿಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರೆಲ್ಲರೂ  ಸಹಕಾರ ನೀಡಿ ಬೆಂಬಲಿಸಿ¨ªಾರೆ. ಎಲ್ಲರಿಗೂ  ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಮುಂದೆಯೂ ಸಂಘದ ಅಭಿವೃದ್ಧಿಗಾಗಿ  ಸಹಕಾರ ನೀಡಿ ಬೆಂಬಲಿಸಿ ಎಂದರು.

 ಕರ್ನಾಟಕ ಸಂಘ ಅÖ¾‌ದಾಬಾದ್‌ ಇದರ ಮಾಜಿ ಅಧ್ಯಕ್ಷ ಸುರತ್ಕಲ್‌ ಜಯರಾಮ್‌ ಶೆಟ್ಟಿ, ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ, ಸೂರತ್‌ನ ಹೊಟೇಲ್‌ ಉದ್ಯಮಿ ರಾಧಾಕೃಷ್ಣ ಶೆಟ್ಟಿ, ಮುಂಬಯಿ ಬಂಟರ ಸಂಘದ ಸಾಂಸ್ಕೃತಿಕ ಸಮಿತಿ ಕಾರ್ಯಾ ಧ್ಯಕ್ಷ ಕರ್ನೂರು ಮೋಹನ್‌ ರೈ ಉಪಸ್ಥಿತರಿದ್ದರು.  ಪವಿತ್ರಾ ಎಸ್‌. ಶೆಟ್ಟಿ ಬೆಳ್ಳಿಹಬ್ಬದ ವಿಶೇಷ ಪ್ರಾರ್ಥನೆ ಹಾಡಿದರು. ಸಂಘದ ಪದಾಧಿ ಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next