Advertisement

ಬಂಟ್ಸ್‌ ಫೋರಂ ಮೀರಾ-ಭಾಯಂದರ್‌: ಯಕ್ಷಗಾನ ತಾಳಮದ್ದಳೆ

05:17 PM Aug 28, 2018 | Team Udayavani |

ಮುಂಬಯಿ: ಬಂಟ್ಸ್‌ ಫೋರಂ ಮೀರಾ-ಭಾಯಂದರ್‌ ಇದರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಜೆಕಾರು ಕಲಾಭಿಮಾನಿ ಬಳಗದ ತವರೂರಿನ ಪ್ರಸಿದ್ಧ ಕಲಾವಿದರುಗಳಿಂದ ಯಕ್ಷಗಾನ ತಾಳಮದ್ದಳೆಯು ಆ. 21 ರಂದು ಸಂಜೆ ಮೀರಾರೋಡ್‌ ಪೂರ್ವದ ಕನಕಿಯ ನಗರದ ಹೊಟೇಲ್‌ ಶುಭಂ ಸಭಾಗೃಹದಲ್ಲಿ ನಡೆಯಿತು.

Advertisement

ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಮೀರಾಗಾಂವ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾರ್ದನ ಭಟ್‌ ಅವರು, ವಿವಿಧ ಸಮುದಾಯದ ಜನರನ್ನು ಒಗ್ಗೂಡಿಸಿ ವೇದಿಕೆಯಲ್ಲಿ ಗೌರವಿಸುವ ಮೀರಾ-ಭಾಯಂದರ್‌ ಬಂಟ್ಸ್‌ ಫೋರಂ ನಾವೆಲ್ಲರು ಸಮಾನರು ಎಂಬ ಸಂದೇಶವನ್ನು ರೂವಾನಿಸಿದೆ. ಇವರ ಪ್ರತಿಯೊಂದು ಯೋಜನಾಬದ್ಧ ಕೆಲಸಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.

ಬಂಟ್ಸ್‌ ಫೋರಂ ಮೀರಾ-ಭಾಯಂದರ್‌ ಇದರ ಗೌರವಾಧ್ಯಕ್ಷ ಸಂತೋಷ್‌ ರೈ ಬೆಳ್ಳಿಪ್ಪಾಡಿ ಇವರು ಮಾತನಾಡಿ, ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರು ಯಕ್ಷಗಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದು ಕಲಾವಿದರಿಗೆ ಉದ್ಯೋಗ ಸೃಷ್ಟಿಸಿದ್ದಾರೆ. ಉದಯೋನ್ಮುಖ ಕಲಾವಿದರನ್ನು ಕೈ ಹಿಡಿದು ಬೆಳೆಸಿದ್ದಾರೆ. ಇವರ ಯಕ್ಷಗಾನದ ವಾತ್ಸಲ್ಯ ಇತರರಿಗೆ ಮಾದರಿಯಾಗಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟ್ಸ್‌ ಫೋರಂನ ಅಧ್ಯಕ್ಷ ಜಯಪ್ರಕಾಶ್‌ ಭಂಡಾರಿ ಇವರು ಮಾತನಾಡಿ, ವಿವಿಧ ಸಂಸ್ಕೃತಿಗಳ ಪ್ರತಿಬಿಂಬ ಯಕ್ಷಗಾನದಲ್ಲಿ ರಾರಾಜಿಸುತ್ತದೆ. ಸಾಗರದಷ್ಟು ಆಳವಾದ, ಆಕಾಶದಷ್ಟು ವಿಸ್ತಾರವಾದ ಯಕ್ಷಗಾನ ಮಾನವತ್ವದಿಂದ ದೈವತ್ವಕ್ಕೆ ಕೊಂಡೊಯ್ಯುವ ಮಾಧ್ಯಮ. ಇದನ್ನ ಉಳಿಸಲು ಕನ್ನಡ ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದರು.

ಸಮಾರಂಭದಲ್ಲಿ ಉದ್ಯಮಿಗಳಾದ ಪ್ರಕಾಶ್‌ ಶೆಟ್ಟಿ, ಮಧುಕರ ಶೆಟ್ಟಿ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿದರು. ಲೇಖಕ ಅರುಣ್‌ ಕುಮಾರ್‌ ಶೆಟ್ಟಿ ಎರ್ಮಾಳ್‌ ಕಾರ್ಯಕ್ರಮ ನಿರ್ವಹಿಸಿ ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಉದ್ಯಮಿಗಳಾದ ಶಿವರಾಮ ಶೆಟ್ಟಿ, ಅರುಣೋದಯ ರೈ, ಕಾಶಿಮೀರಾ ಭಾಸ್ಕರ್‌ ಶೆಟ್ಟಿ, ಶೇಖರ ಪಿ. ಶೆಟ್ಟಿ, ಐಕಳ ಆನಂದ ಶೆಟ್ಟಿ, ಬಂಟ್ಸ್‌ ಫೋರಂನ ಉಪಾಧ್ಯಕ್ಷ ದಿವಾಕರ ಎಂ. ಶೆಟ್ಟಿ, ಆನಂದ ಎನ್‌. ಶೆಟ್ಟಿ ಕುಕ್ಕುಂದೂರು, ಕಾರ್ಯದರ್ಶಿ ಹರ್ಷಕುಮಾರ್‌ ಡಿ. ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ, ಜತೆ ಕೋಶಾಧಿಕಾರಿ ವಿಜಯಲಕ್ಷ್ಮೀ ಶೆಟ್ಟಿ, ಜತೆ ಕಾರ್ಯದರ್ಶಿ ಶರ್ಮಿಳಾ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಶೆಟ್ಟಿ, ಭಜನ ಸಮಿತಿಯ ಸುಖಾವಾಣಿ ಡಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಮಾಸೆಬೈಲು ಸೀತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಕರ್ಣಪರ್ವ ಯಕ್ಷಗಾನ ತಾಳಮದ್ದಳೆ ನಡೆಯಿತು. 

Advertisement

ಚಿತ್ರ-ವರದಿ : ರಮೇಶ್‌ ಅಮೀನ್‌.

Advertisement

Udayavani is now on Telegram. Click here to join our channel and stay updated with the latest news.

Next