Advertisement
ಡಿ. 9ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಮುಲುಂಡ್ ಬಂಟ್ಸ್‌ನ 12 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಬಂಟರಿಗೆ ಇಂದು ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ. ಬಂಟರಲ್ಲಿ ಸಾಧಿಸುವ ಛಲವಿದೆ. ಆದರೆ ನಮಗೆ ಯಾವತ್ತೂ ಹಣವೇ ಮುಖ್ಯವಲ್ಲ. ನೈತಿಕತೆ ಎಂಬುವುದು ಇದೆ. ಅದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ಮೂಲ ಸಂಸ್ಕೃತಿಯ ಬಗ್ಗೆ ನಾವು ಮೊದಲು ಅರಿಯಬೇಕು. ಮುಲುಂಡ್ ಬಂಟ್ಸ್‌ಗೆ ನಾನು ಇದು ಎರಡನೇ ಬಾರಿ ಅತಿಥಿಯಾಗಿ ಬರುತ್ತಿದ್ದೇನೆ. ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳನ್ನು ಚೆನ್ನಾಗಿ ಅರಿತುಕೊಂಡಿದ್ದೇನೆ. ಉತ್ಸಾಹಿ ಕಾರ್ಯಕರ್ತರು ಮುಲುಂಡ್ ಬಂಟ್ಸ್ ನಲ್ಲಿದ್ದಾರೆ. ಇವರಿಂದ ಸಮಾಜದಲ್ಲಿ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯಬೇಕು. ಮುಖ್ಯವಾಗಿ ಯುವಪೀಳಿಗೆಯಲ್ಲಿ ಮರೆಯಾಗುತ್ತಿರುವ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸಿ, ಅವರನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯಲು ಪ್ರೇರೇಪಿಸುವ ಮುಲುಂಡ್ ಬಂಟ್ಸ್ ನ ಇಂತಹ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿದೆ ಎಂದು ನುಡಿದರು.
Related Articles
Advertisement
ಸಂಸ್ಥೆಯ ಉಪಾಧ್ಯಕ್ಷ ವಸಂತ್ ಎನ್. ಶೆಟ್ಟಿ ಪಲಿಮಾರು ಹಾಗೂ ಗೌರವ ಕೋಶಾಧಿಕಾರಿ ಎ. ಹರ್ಷವರ್ಧನ್ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿದರು. ಸಮಾರಂಭದಲ್ಲಿ ರಂಗನಟ ಕೃಷ್ಣರಾಜ್ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಉದಯ ಎನ್. ಶೆಟ್ಟಿ ಅವರು ಸಂಸ್ಥೆಯ ವಾರ್ಷಿಕ ವರದಿ ಮಂಡಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನುತಾ ಎಸ್. ಶೆಟ್ಟಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ಮೋಹಿತ್ ಎಂ. ಶೆಟ್ಟಿ ಅವರು ಆಯಾಯ ವಿಭಾಗದ ವಾರ್ಷಿಕ ವರದಿ ವಾಚಿಸಿದರು.
ವೇದಿಕೆಯಲ್ಲಿ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವೇಣುಗೋಪಾಲ್ ಎಂ. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಸುಧಾಕರ ಆರ್. ಶೆಟ್ಟಿ ಮತ್ತು ಎನ್. ಹರಿಪ್ರಸಾದ್ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ ಅವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ವೇಣುಗೋಪಾಲ್ ಎಂ. ಶೆಟ್ಟಿ ವಂದಿಸಿದರು. ವಿನೋದಾ ಚೌಟ ಅವರು ಪ್ರಾರ್ಥನೆಗೈದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವರ್ಷಾ ಕಾರ್ತಿಕ್ ಶೆಟ್ಟಿ ಹೆಗ್ಡೆ ಮತ್ತು ಶ್ರುತಿ ಅಡಪ ಅವರು ನಿರ್ವಹಿಸಿದರು.
ಸಭಾ ಕಾರ್ಯಕ್ರಮವನ್ನು ಸಿಎ ಕರುಣಾಕರ ಶೆಟ್ಟಿ ಮತ್ತು ಮಮತಾ ಶೆಟ್ಟಿ ಅವರು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ಸದಸ್ಯರು, ಮಕ್ಕಳು, ಮಹಿಳಾ ವಿಭಾಗದವರಿಂದ, ಯುವ ವಿಭಾಗದವರಿಂದ ನೃತ್ಯ ವೈವಿಧ್ಯ, ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಬಿಂಬಿಸುವ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡವು. ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಬಂಟರ ಸಂಘ ಮುಂಬಯಿ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ದಾನಿಗಳು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮುಲುಂಡ್ ಬಂಟ್ಸ್‌ನ ಪದಾಧಿಕಾರಿಗಳು, ಯುವ ವಿಭಾಗ, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು-ಸದಸ್ಯೆಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಭೋಜನದ ವ್ಯವಸೆœಯನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಗುತ್ತುದ ಇಲ್É ಎಂದೇ ಪ್ರಸಿದ್ಧಿಯನ್ನು ಪಡೆದ ಮುಲುಂಡ್ ಬಂಟ್ಸ್ ನ ವಾರ್ಷಿಕೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುವುದೇ ಒಂದು ರೀತಿಯ ಕಣ್ಣಿಗೆ ಹಬ್ಬ. ಪ್ರತೀ ವರ್ಷ ವೇದಿಕೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಅಲಂಕರಿಸಿ ಸಾಂಸ್ಕೃತಿಕ ವೈಭವವನ್ನು ಸಾರುವ ಮುಲುಂಡ್ ಬಂಟ್ಸ್‌ನ ಪ್ರಸ್ತುತ ವರ್ಷದ ಸಂಭ್ರಮದಲ್ಲಿ ವೇದಿಕೆಯು ಪಾಲ್ಗೊಂಡ ಸಮಾಜ ಬಾಂಧವರ ಕಣ್ಣು ಕುಕ್ಕುವಂತಿತ್ತು. ವಿವಿಧ ಹೂವುಗಳಿಂದ ಹಾಗೂ ನಾಡಿನ ಸಂಸ್ಕೃತಿಯನ್ನು ಸಾರುವ ಪ್ರತಿಕೃತಿಗಳಿಂದ ವೇದಿಕೆಯು ಕಂಗೊಳಿಸಿ, ರಾಜರ ಆಸ್ಥಾನವನ್ನು ನೆನಪಿಸುವಂತಿತ್ತು. ಅದಕ್ಕೆ ತಕ್ಕಂತೆ ಸದಸ್ಯ ಬಾಂಧವರಿಂದ ವೈವಿಧ್ಯಮಯ ಜಾನಪದ, ಪೌರಾಣಿಕ ನೃತ್ಯಗಳು, ವಿವಿಧ ವಿನೋದಾವಳಿಗಳು ಸಮಾಜ ಬಾಂಧವರನ್ನು ರಂಜಿಸಿದವು. ಒಟ್ಟಿನಲ್ಲಿ ಮುಲುಂಡ್ ಬಂಟ್ಸ್ ಬಂಟ ಸಮಾಜದ ಗುತ್ತುದ ಇಲ್É ಎಂಬುವುದನ್ನು ಮತ್ತೂಮ್ಮೆ ಸಾಬೀತುಪಡಿಸಿತು.
ಮುಲುಂಡ್ ಬಂಟ್ಸ್ ಕಳೆದ 12 ವರ್ಷಗಳಿಂದ ಸಮಾಜಪರ ಕಾರ್ಯಕ್ರಮಗಳನ್ನು ಮಾಡುತ್ತಾ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಸಂಸ್ಥೆಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳ ಶ್ರಮದಿಂದಾಗಿ ಮುಂಬಯಿಯಲ್ಲಿ ಒಂದು ಪ್ರತಿಷ್ಠಿತ ಮತ್ತು ಮಾದರಿ ಸಂಸ್ಥೆಯಾಗಿ ಮುಲುಂಡ್ ಬಂಟ್ಸ್ ಗುರುತಿಸಿಕೊಂಡಿದೆ. ಪರಿಸರದ ಸಮಾಜ ಬಾಂಧವರನ್ನು ಒಂದುಗೂಡಿಸಿ ಅವರಕಷ್ಟ-ಸುಖಗಳಲ್ಲಿ ಭಾಗವಹಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ನಮ್ಮ ಮಕ್ಕಳಿಗೆ ನಮ್ಮ ಸಮಾಜದ ಬಗ್ಗೆ ತಿಳಿಯಬೇಕಾದ ಅಗತ್ಯತೆಯಿದ್ದು, ಅವರು ಅಂತರ್ ಜಾತೀಯ ವಿವಾಹಕ್ಕೆ ಬಲಿಯಾಗದಂತೆ ನಾವು ಎಚ್ಚರಿಕೆ ವಹಿಸಬೇಕು. ನಮ್ಮ ಸಮಾಜದ ಸಂಸ್ಕೃತಿ, ಸಂಸ್ಕಾರಗಳು, ಆಚಾರ-ವಿಚಾರಗಳು ಇಂದು ಮರೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಮಾಜದ ಸಂಘಟನೆಗಳು ಎಚ್ಚರಿಕೆ ವಹಿಸಬೇಕು. ಸಂಸ್ಥೆಯ ಮುಂದಿನ ಎಲ್ಲಾ ಯೋಜನೆ-ಯೋಚನೆಗಳಿಗೆ ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ –ಪ್ರಕಾಶ್ ಶೆಟ್ಟಿ ಹುಂತ್ರಿಕೆ (ಅಧ್ಯಕ್ಷರು: ಮುಲುಂಡ್ ಬಂಟ್ಸ್). ಚಿತ್ರ-ವರದಿ : ಸುಭಾಷ್ ಶಿರಿಯಾ