ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಪೊವಾಯಿ ಎಸ್. ಎಂ. ಶೆಟ್ಟಿ ವಿಜ್ಞಾನ, ವಾಣಿಜ್ಯ ಹಾಗೂ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜು ಇಂಡಸ್ ಫೌಂಡೇಶನ್ ಹೈದರಾಬಾದ್ ಹಾಗೂ ನ್ಯೂಜೆರ್ಸಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಪ್ರತಿಷ್ಠಿತ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್-2017 ಅನ್ನು ಪಡೆದುಕೊಂಡಿದೆ.
ಜು. 17ರಂದು ಹೊಟೇಲ್ ಲಲಿತ್ ಮುಂಬಯಿ ಇಲ್ಲಿ ಜರಗಿದ ಇಂಡೋ-ಗ್ಲೋಬಲ್ ಎಜುಕೇಶನ್ ಸಮಿಟ್ ಆ್ಯಂಡ್ ಎಕ್ಸ್‌ಪೋ-2017 (ಇಂಡೋ ಗ್ಲೋಬಲ್ ಶೈಕ್ಷಣಿಕ ಶಿಖರ ಸಭೆ ಹಾಗೂ ಪ್ರದರ್ಶನ-2017 ಸಮಾರಂಭದಲ್ಲಿ ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ ಎನ್. ಶೆಟ್ಟಿ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ ಶೆಟ್ಟಿ ಇವರು ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ-2017ನ್ನು ಸ್ವೀಕರಿಸಿದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇಂದ್ರ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಪಿ. ಅರ್ಹಾ ಐಎಎಸ್, ಮಹಾರಾಷ್ಟ್ರ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಸ್ವಾಧೀನ್ ಕ್ಷತ್ರಿಯಾ ಐಎಎಸ್, ಒರಿಸ್ಸಾ ಸರಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಆದಿತ್ಯ ಪ್ರಸಾದ್, ಐಎಎಸ್ ಅವರು ಉಪಸ್ಥಿತರಿದ್ದರು.
ಪೊವಾಯಿ ಎಸ್. ಎಂ. ಶೆಟ್ಟಿ ಕಾಲೇಜಿನ ಕಳೆದ ಒಂಭತ್ತು ವರ್ಷಗಳ ವಿವಿಧ ಅಭಿವೃದ್ಧಿ ಹಾಗೂ ಸಾಧನೆಗಾಗಿ ಈ ಪ್ರಶಸ್ತಿ ಘೋಷಿಸಲಾಗಿದೆ. ಸದ್ಯ ಕಾಲೇಜಿನಲ್ಲಿ 6 ಯುಜಿ ಕೋರ್ಸ್ ಮತ್ತು 2 ಪಿಜಿ ಕೋರ್ಸ್‌ಗಳಿದ್ದು, ಜೊತೆಗೆ ಮುಂಬಯಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ವಾಣಿಜ್ಯ ವಿಭಾಗದ ಪಿಎಚ್‌ಡಿ ಸಂಶೋಧನ ಕೋರ್ಸ್‌ನ್ನು ಹೊಂದಿದೆ. ಕಳೆದ ವರ್ಷ ಕಾಲೇಜಿಗೆ ಪ್ರಥಮ ಹಂತದಲ್ಲೇ ಎನ್‌ಎಎಸಿ ನ್ಯಾಕ್ ಎ ಗ್ರೇಡ್ ಪ್ರಶಸ್ತಿ ದೊರೆತಿದೆ.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು