Advertisement
ಸಂಜೆ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು. ಕಾಲೇಜು ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಮುಲುಂಡ್ ಆರ್. ಝಡ್ ಕಾಲೇಜಿನ ಸೌಂದರ್ಯಾ ಗೌಡ ಪ್ರಥಮ, ಥಾಣೆ ನವೋದಯ ಕನ್ನಡ ಜ್ಯೂನಿಯರ್ ಕಾಲೇಜಿನ ದಿವ್ಯಾ ಗೌಡ ದ್ವಿತೀಯ, ಮುಲುಂಡ್ ವಿಪಿಎಂ ಜ್ಯೂನಿಯರ್ ಕಾಲೇಜಿನ ಚೇತನ್ ಗೌಡ ತೃತೀಯ ಬಹುಮಾನ ಗಳಿಸಿದರು. ಭಾವಗೀತೆ ಸ್ಪರ್ಧೆಯಲ್ಲಿ ಯುಕೆಎಸ್ ಕಾಲೇಜು ಬಂಟರ ಸಂಘ ಕುರ್ಲಾ ಇದರ ಸನತ್ ಶೆಟ್ಟಿ ಪ್ರಥಮ, ಅಣ್ಣಲೀಲಾ ಕಾಲೇಜು ಬಂಟರ ಸಂಘ ಕುರ್ಲಾ ಇದರ ಚೈತ್ರೇಶ್ ಶೆಟ್ಟಿ ದ್ವಿತೀಯ, ಥಾಣೆ ನವೋದಯ ಕನ್ನಡ ಜ್ಯೂನಿಯರ್ ಕಾಲೇಜಿನ ದಿಶಾ ಶೆಟ್ಟಿ ತೃತೀಯ ಬಹುಮಾನ ಗಳಿಸಿದರು.
Related Articles
Advertisement
ಸಮೂಹ ಗೀತೆ ಸ್ಪರ್ಧೆಯಲ್ಲಿ ಗುರುನಾರಾಯಣ ರಾತ್ರಿ ಶಾಲೆಯ ಲಕ್ಷ್ಮೀ ಮತ್ತು ಬಳಗ ಪ್ರಥಮ, ಥಾಣೆ ನವೋದಯ ಹೈಸ್ಕೂಲ್‌ನ ಧ್ಯಾನ್ ಶೆಟ್ಟಿ ಮತ್ತು ಬಳಗ ದ್ವಿತೀಯ, ಮುಲುಂಡ್ ವಿಪಿಎಂ ಹೈಸ್ಕೂಲ್‌ನ ರೇಷ್ಮಾ ಗುಡಿಕಾರ ಮತ್ತು ಬಳಗ ತೃತೀಯ ಬಹುಮಾನ ಪಡೆದರು. ಬಂಟರ ಸಂಘ ಸುವರ್ಣ ಮಹೋತ್ಸವ ಚಲಿತ ಫಲಕವನ್ನು ಥಾಣೆ ನವೋದಯ ಹೈಸ್ಕೂಲ್ ಪಡೆಯಿತು. ಶಾಂತಾ ವಿಠಲ್ ಶೆಟ್ಟಿ ಚಲಿತ ಫಲಕವನ್ನು ಗುರುನಾರಾಯಣ ಹೈಸ್ಕೂಲ್ ಮತ್ತು ಡಾ| ಸುನೀತಾ ಎಂ. ಶೆಟ್ಟಿ ಚಲಿತ ಫಲಕವನ್ನು ಮುಲುಂಡ್ ವಿಪಿಎಂ ಹೈಸ್ಕೂಲ್ ಪಡೆಯಿತು.
ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಮುಖ್ಯ ಅತಿಥಿಗಳಾದ ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ಪಲಿಮಾರು ವಸಂತ್ ಶೆಟ್ಟಿ, ಥಾಣೆ ಬಂಟ್ಸ್‌ನ ಅಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ, ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾ ರಾಮ ಬಿ. ಶೆಟ್ಟಿ, ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ, ಸಂಘದ ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟರ ಸಂಘ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಎಸ್. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಉಪಾಹಾರ ಮತ್ತು ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಬಂಟರವಾಣಿಯ ಸಂಪಾದಕ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು ವಂದಿಸಿದರು. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ, ಬಂಟ ರವಾಣಿ ಸಂಪಾದಕ ಮಂಡಳಿಯ ಡಾ| ಸುನೀತಾ ಎಂ. ಶೆಟ್ಟಿ, ಲತಾ ಸಂತೋಷ್ ಶೆಟ್ಟಿ ಇವರು ಸ್ಪರ್ಧೆಯ ಮೇಲ್ವಿಚಾರಕರಾಗಿ ಸಹಕರಿಸಿದರು. ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಸಹಕರಿಸಿದ ಜಯ ಎ. ಶೆಟ್ಟಿ, ದಾಮೋದರ ಶೆಟ್ಟಿ ಇರುವೈಲು, ನವೀನ್ ಶೆಟ್ಟಿ ಇನ್ನಬಾಳಿಕೆ, ರಮ್ಯಾ ಉದಯ್ ಶೆಟ್ಟಿ ಇವರು ಉಪಸ್ಥಿತರಿದ್ದರು.