ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಸಿಟಿ ಪ್ರಾದೇಶಿಕ ಸಮಿತಿಯ ಏಳನೇ ವಾರ್ಷಿಕೋತ್ಸವ ಸಮಾರಂಭವು ಅ. 8ರಂದು ಅಪರಾಹ್ನ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಿಟಿ ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿರುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈಯುತ್ತಿರುವ ಸಾಧಕರಾದ ಮೇಘ ದರ್ಶನ್ ಹೊಟೇಲ್ ರಾಜಾ ದಾದರ್ ಇದರ ಮಾಲಕ ಸಾಧು ಎಸ್. ಶೆಟ್ಟಿ ಕಾಲೋಟುಗುತ್ತು ಮತ್ತು ಲಕ್ಷ್ಮೀ ಎಸ್. ಶೆಟ್ಟಿ ದಂಪತಿ, ಬಂಟರ ಸಂಘ ಮುಂಬಯಿ ಮಾಜಿ ಕೋಶಾಧಿಕಾರಿ ಪ್ರಭಾಕರ ಬಿ. ಶೆಟ್ಟಿ ಎಫ್‌ಸಿಎ ಮತ್ತು ಪುಷ್ಪಲತಾ ಪಿ. ಶೆಟ್ಟಿ ದಂಪತಿ, ಕಾಸೆ¾ಟಿಕ್ ಆ್ಯಂಡ್ ಅಸೆಥೆಟಿಕ್ ಡೆಂಟಿಸ್ಟ್ ಡಾ| ಉದಯ್ ಬಿ. ಶೆಟ್ಟಿ ದಂಪತಿ, ಆಲ್ ಸೀಸನ್ಸ್ ಬ್ಯಾಂಕ್ವೆಟ್ ನಿರ್ದೇಶಕ ಕಿರಣ್ ಶೆಟ್ಟಿ ಮತ್ತು ವಿದ್ಯಾ ಕೆ. ಶೆಟ್ಟಿ ದಂಪತಿಯನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.
ಕಟೀಲು ಎಸ್‌ಡಿಪಿಟಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಶೆಟ್ಟಿ, ಅತಿಥಿ ಆರ್ಟ್ ಆಫ್ ಲಿವಿಂಗ್ ಆರ್ಗನೈಜೇಶನ್ ಅಂತಾರಾಷ್ಟ್ರೀಯ ಪ್ರತಿನಿಧಿ ವಿನಯಾ ಹೆಗ್ಡೆ, ಮೆಕೆನ್ಸಿ ಆ್ಯಂಡ್ ಕಂಪೆನಿ ಇದರ ಸಮೀರ್ ಶೆಟ್ಟಿ ಬಿಟೆಕ್, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್. ಶೆಟ್ಟಿ, ಉದ್ಯಮಿ, ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಸಂಘದ ಪಶ್ಚಿಮ ವಿಭಾಗದ ಸಮಿತಿಯ ಸಮನ್ವಯಕ ಮುಂಡಪ್ಪ ಎಸ್. ಪಯ್ಯಡೆ, ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಪ್ರಾದೇಶಿಕ ಸಮನ್ವಯಕ ಮುಂಡಪ್ಪ ಎಸ್. ಪಯ್ಯಡೆ, ಉಪ ಕಾರ್ಯಾಧ್ಯಕ್ಷ ಶಿಬರೂರುಗುತ್ತು ಸುರೇಶ್ ಎಸ್. ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಆರ್. ಶೆಟ್ಟಿ, ಕಾರ್ಯದರ್ಶಿ ನಲ್ಯಗುತ್ತು ಪ್ರಕಾಶ್ ಶೆಟ್ಟಿ, ಸಮಿತಿಯ ಸಂಚಾಲಕ ಕೃಷ್ಣ ವಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹಾಬಲ ಶೆಟ್ಟಿ, ಜತೆ ಕೋಶಾಧಿಕಾರಿ ಮಹೇಶ್ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಪ್ರಾದೇಶಿಕ ಸಲಹಾ ಸಮಿತಿಯ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಅನಿತಾ ಎ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕಲ್ಪನಾ ಕೆ. ಶೆಟ್ಟಿ, ಕಾರ್ಯದರ್ಶಿ ಸುಚಿತಾ ಕೆ. ಶೆಟ್ಟಿ, ಕೋಶಾಧಿಕಾರಿ ಜಯಂತಿ ಶೆಟ್ಟಿ, ಜತೆ ಕಾರ್ಯದರ್ಶಿ ವಿನೋದಾ ಶೆಟ್ಟಿ, ವಾರ್ಷಿಕೋತ್ಸವ ಸಲಹಾ ಸಮಿತಿಯ ಜಯರಾಮ ಶೆಟ್ಟಿ ಇನ್ನ, ಅನಿಲ್ ಶೆಟ್ಟಿ ಏಳಿಂಜೆ, ಕೃಷ್ಣ ವೈ. ಶೆಟ್ಟಿ, ಅಂಗಡಿಗುತ್ತು ಪ್ರಸಾದ್ ಶೆಟ್ಟಿ, ರಾಘು ಪಿ. ಶೆಟ್ಟಿ, ಸುಜಯ್ ಆರ್. ಶೆಟ್ಟಿ, ಪ್ರತೀಕ್ ಡಿ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಿವರಾಮ ಶೆಟ್ಟಿ, ಸಾಹಿತ್ಯ-ಸಾಂಸ್ಕೃತಿ-ಮಾಹಿತಿ ಮತ್ತು ತಂತ್ರಜ್ಞಾನ ಕಾರ್ಯಾಧ್ಯಕ್ಷೆ ಕೀರ್ತಿ ಎಚ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮಾನ ಪತ್ರವನ್ನು ಅಶೋಕ್ ಪಕ್ಕಳ ವಾಚಿಸಿದರು. ಪ್ರಾಯೋಜಕರಾಗಿ ಸಹಕರಿಸಿದ ಇಸ್ಸಾರ್ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಆರ್. ಕೆ. ಶೆಟ್ಟಿ ಆ್ಯಂಡ್ ಕಂಪೆನಿಯ ಆರ್. ಕೆ. ಶೆಟ್ಟಿ, ಶಾರದಾ ರೆಸಿಡೆನ್ಸಿಯ ಅಶೋಕ್ ಶೆಟ್ಟಿ, ಅನಿತಾ ಎಸ್. ಶೆಟ್ಟಿ ದಂಪತಿ, ಲಕ್ಷ್ಮೀ ಹೊಟೇಲ್‌ನ ಚಂದ್ರಕಾಂತ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು