Advertisement

ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿ ಆರ್ಥಿಕ ನೆರವು ವಿತರಣೆ

02:27 PM Jun 20, 2018 | |

ಮುಂಬಯಿ: ಧಾರ್ಮಿಕ ಭಾವನೆಯೊಂದಿಗೆ ಸ್ವತ್ಛ ಮನಸ್ಸು, ಸಮಾಜಪರ ಚಿಂತನೆಗಳಿಂದ ಕೂಡಿರುವ ವ್ಯಕ್ತಿ ಉತ್ತಮ ವ್ಯಕ್ತಿಯಾಗಬಲ್ಲ. ಅಂತಹ ಉತ್ತಮ ವ್ಯಕ್ತಿಗಳ ಸಹಕಾರ, ಸಾಧನೆಗಳಿಂದ ಬಂಟರ ಸಂಘ ಶೈಕ್ಷಣಿಕ ಕ್ರಾಂತಿಯನ್ನು ಮಾಡುತ್ತಿದೆ. ಇದರ ಸಂಪೂರ್ಣ ಲಾಭವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.

Advertisement

ಜೂ. 15 ರಂದು ಕಲ್ಯಾಣ್‌ ಪಶ್ಚಿಮದ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ನಡೆದ ಬಂಟರ ಸಂಘ ಮುಂಬಯಿ ಇದರ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಆರ್ಥಿಕ ಧನ ಸಹಾಯ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಂಘವು ಪ್ರಸ್ತುತ ವರ್ಷ 1.75 ಕೋ. ರೂ. ಗಳನ್ನು ಆರ್ಥಿಕ ಸಹಾಯಕ್ಕಾಗಿ ವಿನಿಯೋಗಿಸುತ್ತಿರು ವುದು ಸಂತೋಷವಾಗುತ್ತಿದೆ. ವಿದ್ಯಾರ್ಥಿ ಗಳು ಸಂಘದಿಂದ ಪಡೆದ ಆರ್ಥಿಕ ನೆರವನ್ನು ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಸಂಘವು ಭವಿಷ್ಯದಲ್ಲಿ ಬೃಹತ್‌ ಸಂಖ್ಯೆಯಲ್ಲಿ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಿದೆ ಎಂದು ನುಡಿದು ಶುಭಹಾರೈಸಿದರು.

ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಇವರು ಮಾತನಾಡಿ, ಪ್ರಸ್ತುತ ವರ್ಷ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಗೆ 14 ಲಕ್ಷ ರೂ. ಗಳನ್ನು ನೀಡಲಾಗಿದೆ. ಕಳೆದ ವರ್ಷದಿಂದ ಈ ವರ್ಷ 4 ಲಕ್ಷ ರೂ. ಗಳನ್ನು ಏರಿಸಲಾಗಿದ್ದು, ಅತ್ಯಧಿಕ ಮೊತ್ತವು ಈ ಸಮಿತಿಗೆ ಲಭಿಸಿರುವುದು ಸಂತೋಷ ತಂದಿದೆ. ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಖಾಂದೇಶ್‌ ಭಾಸ್ಕರ ಶೆಟ್ಟಿ ಅವರು ಪ್ರಾರಂಭಿಸಿದ ಶೈಕ್ಷಣಿಕ ದತ್ತು ಸ್ವೀಕಾರ ಇಂದು ಈ ಪ್ರಾದೇಶಿಕ ಸಮಿತಿಗೂ ಪಸರಿಸಿದೆ ಎನ್ನಲು ಸಂತೋಷವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಂಟರ ಸಂಘ ಸುಮಾರು 500 ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಪಡೆಯುವ ಯೋಜನೆ ನಮ್ಮ ಮುಂದಿದೆ ಎಂದರು.

ಪಶ್ಚಿಮ ವಿಭಾಗ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಇವರು ಮಾತನಾಡಿ, ಸಮಾಜ ಬಾಂಧವರು ವಿದ್ಯಾರ್ಜನೆಗಾಗಿ ಅಲ್ಪ ಸಹಾಯ ಮಾಡುವ ಉದ್ಧೇಶ ಇದಾಗಿದೆ. ವಿದ್ಯಾರ್ಥಿಗಳು ಕಲಿತು ಉದ್ಯೋಗಪತಿಗಳಾಗಿ ಸಮಾಜದ ಇತರರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.

ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ದೊಂಡೇ ರಂಗಡಿ ಭಾಸ್ಕರ ಟಿ. ಶೆಟ್ಟಿ ಅವರು ಮಾತನಾಡಿ, ಈ ವರ್ಷ ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಅರ್ಜಿಯನ್ನು ಸ್ವೀಕರಿಸಿ ಸುಮಾರು 14 ಲಕ್ಷ ರೂ. ಕೇಂದ್ರ ಸಮಿತಿ ನೀಡಿದೆ. ಸಮಾಜದ ಅಭಿವೃದ್ದಿ ಕಾರ್ಯಗಳಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಎನ್‌. ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. 21 ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಸ್ವೀಕರಿಸಲಾಯಿತು. ಪ್ರವೀಣಾ ಶೆಟ್ಟಿ ಪ್ರಾರ್ಥನೆಗೈದರು. 

Advertisement

ಗಣ್ಯರು ದೀಪಪ್ರಜ್ವಲಿಸಿ ಸಮಾ ರಂಭಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಸಂಘದ ಹಾಗೂ ಪ್ರಾದೇಶಿಕ ಸಮಿತಿಯ ಪದಾ ಧಿಕಾರಿಗಳಾದ ರವೀಂದ್ರ ಶೆಟ್ಟಿ, ಭಾಸ್ಕರ ಶೆಟ್ಟಿ, ಸುಭೋದ್‌ ಭಂಡಾರಿ, ಪ್ರಕಾಶ್‌ ಶೆಟ್ಟಿ, ಸುಮಿತ್‌ ಶೆಟ್ಟಿ, ಪ್ರಕಾಶ್‌ ಶೆಟ್ಟಿ, ಸಂತೋಷ್‌ ಶೆಟ್ಟಿ, ಉದಯ ಶೆಟ್ಟಿ, ರಾಜೇಶ್‌ ಶೆಟ್ಟಿ, ಸುಧೀರ್‌ ಶೆಟ್ಟಿ, ಜಯ ಶೆಟ್ಟಿ, ವಾಸು ಶೆಟ್ಟಿ, ಪ್ರವೀಣ್‌ ಶೆಟ್ಟಿ, ಜಗದೀಶ್‌ ಶೆಟ್ಟಿ, ಜ್ಯೋತಿ ಪ್ರಕಾಶ್‌ ಹೆಗ್ಡೆ ಉಪಸ್ಥಿತರಿದ್ದರು. ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರ್ವಹಿಸಿದರು. ಸುಬೋಧ್‌ ಭಂಡಾರಿ ವಂದಿಸಿದರು.

ಪ್ರತಿಯೊಬ್ಬರಿಗೂ ವಿದ್ಯಾರ್ಥಿ ವೇತನ ಸಿಗಬೇಕು ಎಂಬ ಉದ್ಧೇಶದಿಂದ ಈ ವರ್ಷ 40 ಲಕ್ಷ ರೂ. ಹೆಚ್ಚುವರಿ ಸಂಗ್ರಹಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ವೇತನ ಸಿಗುವಂತೆ ನೋಡಿಕೊಳ್ಳಲಾಗಿದೆ. ಅದೇ ರೀತಿ ಈ ಪ್ರಾದೇಶಿಕ ಸಮಿತಿ ಪರಿಸರದಲ್ಲಿ ನಿರ್ಮಿಸುವ ಶಿಕ್ಷಣ ಸಂಸ್ಥೆಯ ಕಾರ್ಯ ತೀವ್ರಗತಿಯಲ್ಲಿದೆ.

-ಸುಬ್ಬಯ್ಯ ಎ. ಶೆಟ್ಟಿ, ಸಂಚಾಲಕರು, ಭಿವಂಡಿ-ಬದ್ಲಾಪುರ ಪ್ರಾ. ಸಮಿತಿ
ಈ ವರ್ಷ ಅಧ್ಯಕ್ಷರ ಆಶಯದಂತೆ ವಿಧವಾ ವೇತನ ಸಮಾನವಾಗಿ ನೀಡುವ ಯೋಜನೆ ಸಫಲತೆಯನ್ನು ಕಂಡಿದೆ. ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರ ಶ್ರಮಕ್ಕೆ ಸಂದ ಜಯ ಇದಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಸಮಾಜದ ಮತ್ತು ಸಂಘದ ಋಣ ತೀರಿಸುವ ಕಾರ್ಯದಲ್ಲಿ ತೊಡಗಬೇಕು.
-ಖಾಂದೇಶ್‌ ಭಾಸ್ಕರ್‌ ಶೆಟ್ಟಿ, ಕಾರ್ಯದರ್ಶಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಬಂಟರ ಸಂಘ

60 ಲಕ್ಷದಿಂದ ಪ್ರಾರಂಭಗೊಂಡ ಈ ಯೋಜನೆ ಇಂದು 1.75 ಕೋ. ರೂ. ಗಳಿಗೆ ಏರಿಕೆಯನ್ನು ಕಂಡಿದೆ. ಈ ಯೋಜನೆಯಿಂದಾಗಿ ಸಾವಿರಾರು ಮಂದಿ ಸಮಾಜ ಬಾಂಧವರ ಕಣ್ಣೀರು ಒರೆಸಿದಂತಾಗಿದೆ. ಪ್ರಾದೇಶಿಕ ಸಮಿತಿಯಿಂದ ಈ ವರ್ಷ 21 ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಲಾಗಿದೆ. ಇಂತಹ ಕಾರ್ಯ ಇನ್ನಷ್ಟು  ನಡೆಯುತ್ತಿರಲಿ.
-ಇಂದ್ರಾಳಿ ದಿವಾಕರ ಶೆಟ್ಟಿ, ಸಮನ್ವಯಕರು, ಮಧ್ಯ ಪ್ರಾದೇಶಿಕ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next