Advertisement
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರು ದೀಪಪ್ರಜ್ವಲಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು. ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ ಎನ್. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್ ವಿ. ಶೆಟ್ಟಿ ಅವರು ಉಪಸ್ಥಿತರಿದ್ದರು.
ಸುಮಾರು 90 ವರ್ಷಗಳ ಇತಿಹಾಸವನ್ನು ಹೊಂದಿರುವ ಮುಂಬಯಿ ಬಂಟರ ಪ್ರತಿಷ್ಠಿತ ಸಂಸ್ಥೆಯಾಗಿರುವ ಬಂಟರ ಸಂಘ ಮುಂಬಯಿ ಇದರ 2017-2020 ನೇ ಸಾಲಿನ 29 ನೇ ಅಧ್ಯಕ್ಷರಾಗಿ ನಗರದ ಹೆಸರಾಂತ ಹೊಟೇಲ್ ಉದ್ಯಮಿ, ಸಮಾಜ ಚಿಂತಕ, ಸಂಘದ ಹಿರಿಯ ಸಕ್ರಿಯ ಪದಾಧಿಕಾರಿ, ಮಹಾದಾನಿ ಪದ್ಮನಾಭ ಎಸ್. ಪಯ್ಯಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Related Articles
Advertisement
ಸಾಧನೆಗಳ ಹರಿಕಾರ ಪದ್ಮನಾಭ ಎಸ್. ಪಯ್ಯಡೆ…ಹೊಟೇಲ್ ಉದ್ಯಮಿಯಾಗಿ, ಸಮಾಜ ಸೇವಕರಾಗಿ, ಕೊಡುಗೈದಾನಿಯಾಗಿ ಚಿರಪರಿಚಿತರಾಗಿರುವ ಪದ್ಮನಾಭ ಎಸ್. ಪಯ್ಯಡೆ ಅವರು ಮುಂಬಯಿ ಮಹಾನಗರದಲ್ಲಿ ಓರ್ವ ಪ್ರತಿಷ್ಠಿತ ವ್ಯಕ್ತಿಯಾಗಿ ಗುರುತಿಸಿಕೊಂಡವರು. ಬಂಟ್ವಾಳ ಕುರಿಯಾಳಗುತ್ತು ಗಿರಿಜಾ ಪಯ್ಯಡೆ ಮತ್ತು ಪಂಜ ಮೂಡುಮನೆ ಶೀನ ಪಯ್ಯಡೆ ದಂಪತಿಯ ಪುತ್ರರಾಗಿ ಕುರಿಯಾಳಗುತ್ತುವಿನಲ್ಲಿ ಜನಿಸಿದ ಇವರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟಿದೂರಿನಲ್ಲಿ ಮುಗಿಸಿ, ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಪದವಿಯನ್ನು ಪಡೆದರು. ಬಳಿಕ ಬ್ಯಾಂಕಿಂಗ್ ಹುದ್ದೆಗೆ ಸೇರಿ, ಹುದ್ದೆಗಿಂತ ಉದ್ಯಮವೇ ಬದುಕಿನ ಯಶಸ್ಸಿಗೆ ದಾರಿದೀಪವಾಗುತ್ತದೆ ಎಂಬುವುದನ್ನು ಅರಿತು, ಹೊಟೇಲ್ ಉದ್ಯಮದತ್ತ ಆಸಕ್ತರಾದರು. ತನ್ನ ಕಿರಿಯ ಸಹೋದರ ದಿ| ರಮಾನಾಥ ಪಯ್ಯಡೆ ಅವರ ಪ್ರೋತ್ಸಾಹದೊಂದಿಗೆ ಹೊಟೇಲ್ ಆರಂಭಿಸಿದರು. ಹೊಟೇಲ್ ಉದ್ಯಮದಲ್ಲಿ ಯಶಸ್ಸು…
ಅವರು ಸ್ಥಾಪಿಸಿದ ಹೊಟೇಲ್ ಸಂಪೂರ್ಣ ಪ್ರೈವೇಟ್ ಲಿಮಿಟೆಡ್, ಹೊಟೇಲ್ ಸಪ್ನಾ, ಪಯ್ಯಡೆ ರೆಸಿಡೆನ್ಸಿ, ಪಯ್ಯಡೇಸ್ ಕುಬೇರ ಹೊಟೇಲ್, ಪಯ್ಯಡೆ ಗ್ರಾÂಂಡ್ ಬೆಂಗಳೂರು ಇತ್ಯಾದಿ ಹೊಟೇಲ್‌ಗಳ ಮೂಲಕ ಪಯ್ಯಡೆ ಗ್ರೂಪ್ ಆಫ್ ಹೊಟೇಲ್ಸ್ ಸ್ಥಾಪಿಸುವಲ್ಲಿ ಯಶಸ್ವಿಯಾದರು. ಪದ್ಮನಾಭ ಎಸ್. ಪಯ್ಯಡೆ ಅವರು ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿ ಬ್ಯಾಂಕಿಂಗ್ ಉದ್ಯಮಲ್ಲೂ ಮನೆಮತಾಗಿದ್ದರು. ಪ್ರಾಮಾಣಿ ಕತೆ, ಪರೋಪಕಾರ ಗುಣ, ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಸಮಾಜ ಸೇವೆಯಲ್ಲಿ ಹೆಸರು ಪಡೆದಿರುವ ಅವರು ಸಮಾಜಪರ ಕಾರ್ಯಗಳಲ್ಲೂ ಆತ್ಮತೃಪ್ತಿ ಕಂಡುಕೊಂಡವರು.
ಸಮಾಜ ಸೇವಕರಾಗಿ ಪ್ರಸಿದ್ಧಿ… ಬಂಟರ ಸಂಘದ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ಪ್ರಥಮ ಕಾರ್ಯಾಧ್ಯಕ್ಷರಾಗಿ ಅವರ ಸೇವೆ ಅಭಿನಂದನೀಯ. ಸಂಘದ ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾಗಿ, ಸಂಘದ ವಿಶ್ವಸ್ಥರಾಗಿ ಸೇವೆ ಸಲ್ಲಿಸಿರುವುದಲ್ಲದೆ, ಬಂಟ್ಸ್ ನ್ಯಾಯ ಮಂಡಳಿಯ ಕಾರ್ಯಾಧ್ಯಕ್ಷರಾಗಿ ಶ್ರಮಿಸಿದ್ದಾರೆ. ಮಲಾಡ್ ಕನ್ನಡ ಸಂಘದ ಗೌರವಾಧ್ಯಕ್ಷರಾಗಿಯೂ ಅವರ ಸೇವೆ ಗಮನೀಯವಾಗಿದೆ. ಪ್ರಸ್ತುತ ಪ್ರತಿಷ್ಠಿತ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆ ಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಪತ್ನಿ ಮಾಲಿನಿ ಪಯ್ಯಡೆ, ಪುತ್ರಿಯರಾದ ದಿವ್ಯಾ ಪ್ರಭಾ ಶೆಟ್ಟಿ, ದೀಕ್ಷಾ ಆದಿತ್ಯಾ ಶೆಟ್ಟಿ ಅವರೊಂದಿಗೆ ನಗರದಲ್ಲಿ ನೆಲೆಸಿದ್ದಾರೆ. ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.