ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವು ಜು. 29ರಂದು ಸಮಿತಿಯ ಕಚೇರಿಯಲ್ಲಿ ನಡೆಯಿತು.
ಯಾವ ಆಡಂಬರವೂ ಇಲ್ಲದೆ ಸರಳವಾಗಿ ಮನೆಯಲ್ಲೇ ತಯಾರಿಸಿದ ಆಟಿ ತಿಂಗಳ ವಿಶೇಷತೆಯನ್ನು ಹೊಂದಿರುವ ತಿಂಡಿ-ತಿನಿಸುಗಳನ್ನು ಸಮಿತಿಯವರ ಉಪಸ್ಥಿತಿಯಲ್ಲಿ ಹಂಚಲಾಯಿತು.
ಈ ಸಂದರ್ಭದಲ್ಲಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗುಣಪಾಲ ಶೆಟ್ಟಿ ಐಕಳ, ಉಪಾಧ್ಯಕ್ಷರಾದ ಬಿ. ಆರ್. ಪೂಂಜ, ಕಾರ್ಯದರ್ಶಿ ಗಣೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಶೆಟ್ಟಿ, ಎನ್. ಸಿ. ಶೆಟ್ಟಿ, ಪ್ರಭಾಕರ ಶೆಟ್ಟಿ, ರಮೇಶ್ ರೈ, ಪ್ರಕಾಶ್ ಆಳ್ವ, ಸತೀಶ್ ಶೆಟ್ಟಿ, ಶ್ರೀಧರ ಶೆಟ್ಟಿ, ಜಯರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಕೃಷ್ಣ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಸಂದೀಪ್ ಎನ್. ಸನಿಲ್ ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಸುಜಾತಾ ಗುಣಪಾಲ್ ಶೆಟ್ಟಿ ಇವರ ಮುಂದಾಳತ್ವದಲ್ಲಿ ಮಹಿಳಾ ವಿಭಾಗದ ವನಿತಾ ನೋಂಡ, ಗೀತಾ ಶೆಟ್ಟಿ, ಸ್ಮಿತಾ ಆರ್. ಶೆಟ್ಟಿ, ಪ್ರೇಮಾ ಶೆಟ್ಟಿ, ಸವಿತಾ ಶೆಟ್ಟಿ, ಶೋಭಾ ಆರ್. ರೈ, ವಿಂದ್ಯಾ ಬಲ್ಲಾಳ್, ಗೀತಾ ಶೆಟ್ಟಿ, ಮೊದಲಾದವರು ಸ್ವಾದಿಷ್ಟ ಹಾಗೂ ಆರೋಗ್ಯಪೂರ್ಣ ತಿಂಡಿ ತಿನಿಸುಗಳನ್ನು ತಯಾರಿಸಿ ಪ್ರದರ್ಶಿಸಿದರು. ಸಮಿತಿಯ ಸದಸ್ಯ ಬಾಂಧವರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.
ಸದಾ ಸಮಾಜಪರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಆಟಿ ತಿಂಗಳನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ನಡೆಸಿಕೊಂಡು ಬರುತ್ತಿದೆ. ಒಳನಾಡು ಹಾಗೂ ಹೊರನಾಡಿನಲ್ಲಿ ನೊಂದವರ ನೋವಿಗೆ ಸ್ಪಂದಿಸುತ್ತಿದ್ದು ಕಳೆದ ವರ್ಷ ಶ್ರೀ ಮಾತಾ ಲಕ್ಷಣಿ ಶಾಂತಿಧಾಮ ವೃದ್ಧಾಶ್ರಮಕ್ಕೆ 25,000 ರೂ ನಗದು ನೀಡಿ ಸಹಕರಿಸಿದೆ. ಕರ್ಜತ್‌ನ ಆದಿವಾಸಿ ಪ್ರದೇಶದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡಿ ಅವರಿಗೆ ನಗದು ಹಾಗೂ ದಿನನಿತ್ಯದ ಅಗತ್ಯ ವಸ್ತುಗಳನ್ನು ನೀಡಿರುವುದು ವಿಶೇಷತೆಯಾಗಿದೆ.