Advertisement
ಬಂಟರ ಉದ್ಯಮಸ್ಥರ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಐಬಿಸಿಸಿಐ ರವಿವಾರ ಸಂಜೆ ಅಂಧೇರಿ ಅಲ್ಲಿನ ಜೆ. ಡಬ್ಲ್ಯು. ಮರಿಯೊಟ್ (ಜುಹೂ) ಇದರ ಸಭಾಗೃಹದಲ್ಲಿ ಯುನಿಟಾಪ್ ಸಮೂಹ, ಆರ್ಗ್ಯಾನಿಕ್ ಪ್ರೈ. ಇಂಡಸ್ಟ್ರೀಸ್ ಲಿ. ಮತ್ತು ಹೆರಂಬಾ ಇಂಡಸ್ಟ್ರೀಸ್ ಲಿ. ಸಂಸ್ಥೆಗಳ ಪ್ರಧಾನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಜ್ಞಾನ ಶೃಂಗಸಭೆ 2021 ಅನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸಮಾಜಪರ ಯೋಜನೆ, ಕಾರ್ಯಕ್ರಮಗಳ ಸದುಪಯೋಗವನ್ನು ಸದಸ್ಯ ಬಾಂಧವರು ಪಡೆಯುವಂತೆ ಮನವಿ ಮಾಡಿದರು.
Related Articles
Advertisement
ಬಂಡವಾಳ ಮಾರುಕಟ್ಟೆ ಮತ್ತು ಆಸ್ತಿ ನಿರ್ವಹಣೆ ವಿಚಾರಿತ ಚರ್ಚೆ ಯಲ್ಲಿ ಮಹೀಂದ್ರಾ ಮನುಲೈಫ್ ಮ್ಯೂಚುಯಲ್ ಫಂಡ್ಸ್‌ನ ಸಿಎಂಡಿ ಅಶುತೋಷ್ ಬಿಷ್ಣೋಯ್, ಐಎಫ್‌ಎಫ್‌ಸಿಒ ಟೊಕಿಯೊ ಜನ ರಲ್ ಇನ್ಶೂರೆನ್ಸ್ ಕಂಪೆನಿ ಲಿ.ನ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಮಾರ್ಕೆಟಿಂಗ್) ಗುಣಶೇಖರ್ ಬೋಗಾ, ಜೆ. ಎಂ. ಫೈನಾನ್ಶಿಯಲ್ ಅಸೆಟ್ ರೀಕನ್‌ಸ್ಟ್ರಕ್ಷನ್ ಕಂಪೆನಿ ಲಿ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಗ್ರೋವರ್ ತಮ್ಮ ವ್ಯವಹಾರಗಳ ಅನುಭವಗಳನ್ನು ಹಂಚಿಕೊಂಡರು. ಐಬಿಸಿಸಿಐ ನಿರ್ದೇಶಕ ಸಿಎ ಶಂಕರ್ ಬಿ. ಶೆಟ್ಟಿ ಚರ್ಚಾಕೂಟ ನಿರೂಪಿಸಿದರು.
ಸಿಎ ಶಂಕರ್ ಬಿ. ಶೆಟ್ಟಿ ಮಾತನಾಡಿ, ಆಧುನಿಕ ಜೀವನ ವ್ಯವಸ್ಥೆಯಲ್ಲಿ ವಿಮಾ ವ್ಯವಸ್ಥೆಯ ಪಾತ್ರ ಮಹತ್ತರವಾದದ್ದು. ವಿಮಾ ಪದ್ಧತಿಯ ಪರಿಹಾರ ಕ್ರಮ ಜೀವನ ರಕ್ಷಣೆಗೆ ಪೂರಕವಾಗಿರುವ ಕಾರಣ ಪ್ರತಿಯೊ ಬ್ಬರು ಇದನ್ನು ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ರಿಯಲ್ ಎಸ್ಟೇಟ್ ಮತ್ತು ಹಾಸ್ಪಿ ಟಾಲಿಟಿ ವಿಚಾರಿತ ಚರ್ಚೆಯಲ್ಲಿ ಹೆರಿಟೇಜ್ ಸಮೂಹದ ಕಾರ್ಯಾಧ್ಯಕ್ಷ ಪ್ರದೀಪ್ ಶೆಟ್ಟಿ, ವಿಟ್ಸ್ ಕಾಮತ್ಸ್ ಗ್ರೂಪ್‌ನ ಸಂಸ್ಥಾಪಕಾಧ್ಯಕ್ಷ ಡಾ| ವಿಕ್ರಮ್ ಕಾಮತ್, ಪ್ರೀತಮ್ ದಾ ಧಾಬಾ ಮತ್ತು ಗ್ರ್ಯಾಂಡ್ ಮಾಮಾಸ್ ಕೆಫೆ ಹಾಗೂ ಪ್ರೀತಮ್ ಹೊಟೇಲ್ಸ್‌ನ ಆಡಳಿತ ನಿರ್ದೇಶಕ ಗುರ್ಬಕ್ಷೀಶ್ ಸಿಂಗ್ ಕೊಹ್ಲಿ ತಮ್ಮ ವ್ಯಾಪಾರೋದ್ಯಮದಲ್ಲಿನ ಅನುಭವಗಳನ್ನು ಹಂಚಿಕೊಂಡರು. ಮಹಾರಾಜ ರೆಸ್ಟೋರೆಂಟ್‌ನ ನಿರ್ದೇಶಕ ಪ್ರದೀಪ್ ಶೆಟ್ಟಿ ಸಂಯೋಜಕರಾಗಿ ಚರ್ಚಾಕೂಟ ನಡೆಸಿದರು. ಪ್ರದೀಪ್ ಶೆಟ್ಟಿ ಮಾತನಾಡಿ, ಹೊಟೇಲ್ ಉದ್ಯಮ ಆದರಾತಿಥ್ಯದ ಪುಣ್ಯದ ಸೇವಾ ಉದ್ಯಮವಾಗಿದೆ. ಇದು ಉದ್ಯಮಕ್ಕಿಂತ ಪುಣ್ಯದ ಕಾಯಕ ಎಂದರು.
ಅತಿಥಿಗಳಾಗಿ ಶಶಿಕಿರಣ್ ಶೆಟ್ಟಿ, ರಾಜಕಿರಣ್ ರೈ, ಅಜಿತ್ ಕುಮಾರ್ ರೈ, ಚಾನ್ನೆಲ್ ಫ್ತೈನ್ ಸಿಎಂಡಿ ಕಿಶನ್ ಜೆ. ಶೆಟ್ಟಿ, ಅದಿತಿ ಎಸೆನ್ಶಿಯಲ್ಸ್ ಸಿಎಂಡಿ ಭರತ್ ಶೆಟ್ಟಿ, ಅತಿಥಿಗಳಾಗಿ ಐಬಿಸಿಸಿಐ ಉಪಾಧ್ಯಕ್ಷ ಎಸ್. ಬಿ. ಶೆಟ್ಟಿ, ಕೋಶಾಧಿಕಾರಿ ದುರ್ಗಾ ಪ್ರಸಾದ್ ಬಿ. ರೈ, ಜತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ, ನಿರ್ದೇಶಕರಾದ ನಿಶಿತ್ ಶೆಟ್ಟಿ, ಹಿತೇಶ್ ಶೆಟ್ಟಿ, ಬಿ. ಬಿ. ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಪಾಂಡುರಂಗ ಎಲ್. ಶೆಟ್ಟಿ, ಸಿಎ ಶಂಕರ ಬಿ. ಶೆಟ್ಟಿ, ಶ್ರೀನಾಥ್ ಶೆಟ್ಟಿ, ಕಿಶನ್ ಜೆ. ಶೆಟ್ಟಿ ಐಬಿಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸದಸ್ಯರು ಸಹಿತ ಐಬಿಸಿಸಿಐ ಪರಿವಾರ ಸದಸ್ಯರು ಉಪಸ್ಥಿತರಿದ್ದರು.
ಐಬಿಸಿಸಿಐ ಉಪಾಧ್ಯಕ್ಷ ಎಸ್. ಬಿ. ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಿ. ವಿವೇಕ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ದರು. ಪ್ರಕಾಶ್ ಭಂಡಾರಿ, ಕೀರ್ತಿ ಶೆಟ್ಟಿ ಮತ್ತು ಪದಾಧಿಕಾರಿಗಳು ಅತಿಥಿಗಳನ್ನು ಪುಷ್ಪಗುತ್ಛ ನೀಡಿ ಗೌರವಿಸಿದರು. ಐಬಿಸಿಸಿಐ ಕಾರ್ಯಾಚರಣ ವ್ಯವಸ್ಥಾಪಕಿ ನಮಿತಾ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಕೆ. ಜಯ ಸೂಡಾ ವಂದಿಸಿದರು.
-ಚಿತ್ರ-ವರದಿ: ರೋನ್ಸ್ ಬಂಟ್ವಾಳ್