Advertisement
ಸೆ. 22ರಂದು ಡೊಂಬಿವಲಿಯ ಹೊಟೇಲ್ ಸುಯೋಗ್ ಟೆರೇಸ್ ಸಭಾಗೃಹದಲ್ಲಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯಿಂದ ನಡೆದ ಸ್ನೇಹ ಸಮ್ಮಿಲನ ಮತ್ತು ಅಭಿನಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಮಿತಿ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಸಮಾಜ ಬಾಂಧವರಿಗೆ ಸಹಕಾರ, ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಯುವ ವಿಭಾಗದಿಂದ ಶೈಕ್ಷಣಿಕ ಸಹಾಯ, ಆರೋಗ್ಯ ಸಹಾಯ, ಮಹಿಳಾ ವಿಭಾಗದಿಂದ ಆರ್ಥಿಕ ಸಹಾಯ ಹಾಗೂ ಇನ್ನಿತರ ಕಾರ್ಯಗಳಿಂದಾಗಿ ಬಂಟರ ಸಂಘದ ದ್ವಿತೀಯ ಅತ್ಯುತ್ತಮ ಪ್ರಾದೇಶಿಕ ಸಮಿತಿ ಎಂಬ ಹೆಗ್ಗಳಿಕೆ ಪಡೆದಿದೆ. ಈ ಎಲ್ಲ ಸಾಧನೆ ನಿಮ್ಮೆಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎನ್ನಲು ಅತೀವ ಸಂತೋಷವಾಗುತ್ತಿದೆ. ನಮ್ಮ ಪ್ರಾದೇಶಿಕ ಸಮಿತಿಯ ಪ್ರಥಮ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ, ಸಂಚಾಲಕ ಸುಬ್ಬಯ್ಯ ಶೆಟ್ಟಿ, ಸಂಘಟಕ ಕಲ್ಲಡ್ಕ ಕರುಣಾಕರ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು, ಯುವ ವಿಭಾಗ, ಮಹಿಳಾ ವಿಭಾಗ ಪ್ರಾದೇಶಿಕ ಸಮಿತಿಯ ಎಲ್ಲ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಸಮಿತಿ ಉತ್ತಮ ಸಾಧನೆಗಳೊಂದಿಗೆ ಪ್ರಥಮ ಸ್ಥಾನ ಬರುವಂತೆ ಪ್ರಯತ್ನಿಸೋಣ. ಸಂಘದ ವತಿಯಿಂದ ಸಿಗುವ ಸೌಲಭ್ಯಗಳನ್ನು ಪ್ರಾದೇಶಿಕ ಸಮಿತಿಯ ಸಮಾಜ ಬಾಂಧವರಿಗೆ ತಿಳಿಸುವ ಸಲುವಾಗಿ ಪ್ರಾದೇಶಿಕ ಸಮಿತಿಯ ಫೇಸ್‌ಬುಕ್, ವೆಬ್‌ಸೈಟ್ ಅನ್ನು ನಿರ್ಮಿಸುವಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷ ಸಚಿನ್ ಶೆಟ್ಟಿ ಮತ್ತು ಪ್ರಜ್ವಲ್ ಶೆಟ್ಟಿ ಮುಂದಾಗಿದ್ದಾರೆ. ಸಂಘದ ಅಧ್ಯಕ್ಷರ ಹಲವಾರು ಅತ್ಯುತ್ತಮ ಯೋಜನೆಗಳು ನಮ್ಮ ಮುಂದಿದ್ದು, ಈ ಎಲ್ಲ ಕಾರ್ಯಗಳಿಗೆ ಸಮಾಜ ಬಾಂಧವರ ಸಂಪೂರ್ಣ ಸಹಕಾರವಿರಲಿ ಎಂದು ಆಶಿಸಿದರು.
Related Articles
Advertisement
ಧರ್ಮದರ್ಶಿ ಅಶೋಕ್ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ದೀನ ದಲಿತರ ಕಣ್ಣೀರನ್ನು ಒರೆಸಿದಾಗ ಸಿಗುವ ಅನಂದ ಬೇರೆಲ್ಲೂ ಸಿಗುವುದಿಲ್ಲ ಎಂದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಂಜುಳಾ ಶೆಟ್ಟಿ, ಯುವ ವಿಭಾಗದ ಸಚಿನ್ ಶೆಟ್ಟಿ, ಸದಸ್ಯ ನೋಂದಣಿ ಸಮಿತಿಯ ಅಶೋಕ್ ಶೆಟ್ಟಿ ಮೂಂಡ್ಕೂರು, ಸಾಂಸ್ಕೃತಿಕ ವಿಭಾಗದ ಸುರೇಶ್ ಶೆಟ್ಟಿ, ಮ್ಯಾರೇಜ್ ಸೆಲ್‌ನ ದಯಾ ಶೆಟ್ಟಿ ತಮ್ಮ ತಮ್ಮ ವಿಭಾಗದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಕಾರ್ಯದರ್ಶಿ ಮಹಾದಾನಿ ಸನ್ನಿ ದಿನೇಶ್ ಶೆಟ್ಟಿ ಅವರನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ವಿಶ್ವ ಬಂಟರ ಸಂಘಟನೆಯ ಮಹಾದಾನಿ ಆನಂದ ಶೆಟ್ಟಿ ಎಕ್ಕಾರು, ಜಗಜ್ಯೋತಿ ಕಲಾ ವೃಂದದ ಉಪಾಧ್ಯಕ್ಷ ಜಯಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದಿವಾಕರ ಶೆಟ್ಟಿ ಇಂದ್ರಾಳಿ ಮತ್ತು ಸುಬ್ಬಯ್ಯ ಶೆಟ್ಟಿ ಅವರು ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರನ್ನು ವಿಶೇಷವಾಗಿ ಸತ್ಕರಿಸಿದರು. ವಿಜೀತ್ ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರು, ಅರುಣ್ ಶೆಟ್ಟಿ ಪಡುಕುಡೂರು, ಹೇಮಂತ ಶೆಟ್ಟಿ, ಜಯಂತ್ ಶೆಟ್ಟಿ, ಜಯಕರ ಶೆಟ್ಟಿ ಪಡುಕುಡೂರು, ಸಚಿನ್ ಶೆಟ್ಟಿ, ಮಂಜುಳಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಹೇಮಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟ-ಸುಖ ಬರುತ್ತದೆ. ಇನ್ನೊಬ್ಬರ ಕಷ್ಟದಲ್ಲಿ ಭಾಗಿಯಾಗಿ ಅವರಿಗೆ ಸಹಾಯ ಮಾಡಿದಾಗ ದೇವರು ನಮಗೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಾರೆ. ನಮ್ಮ ಪ್ರಾದೇಶಿಕ ಸಮಿತಿಯ ನಿಕಟಪೂರ್ವ ಕಾರ್ಯದರ್ಶಿ, ಮಹಾದಾನಿ ಸನ್ನಿ ದಿನೇಶಣ್ಣ ಅನಾರೋಗ್ಯವನ್ನು ಗೆದ್ದು ಬಂದವರು. ಅವರು ಸಮಿತಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಪ್ರಾದೇಶಿಕ ಸಮಿತಿಯ ಮಕ್ಕಳು ಅತ್ಯುತ್ತಮ ನೃತ್ಯ ಪ್ರದರ್ಶನ ನೀಡಿ ತೃತೀಯ ಬಹುಮಾನ ಗೆದ್ದಿದ್ದಾರೆ. ಪ್ರತಿಯೊಂದು ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಆಗ ಗೆಲ್ಲುವ ಹುರುಪು ತನ್ನಿಂದ ತಾನೇ ಬರುತ್ತದೆ. ನಾವೆಲ್ಲರೂ ಸೇರಿ ಪ್ರಾಮಾಣಿಕವಾಗಿ ಸಮಾಜದ ಕೆಲಸಗಳನ್ನು ಮಾಡಿದಾಗ ಸಮಾಜ ಇನ್ನಷ್ಟು ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಡೊಂಬಿವಲಿ ಪ್ರಾದೇಶಿಕ ಸಮಿತಿಯಲ್ಲಿ ಒಳ್ಳೆಯ ಕಾರ್ಯಕರ್ತರಿದ್ದು, ಈ ಸಮಿತಿಯು ಸಮಾಜ ಸೇವೆಯಲ್ಲಿ ಕ್ರಾಂತಿಯನ್ನುಂಟು ಮಾಡಬಹುದು.–ಇಂದ್ರಾಳಿ ದಿವಾಕರ್ ಶೆಟ್ಟಿ ಜತೆ ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ
ಸುಕುಮಾರ್ ಎನ್. ಶೆಟ್ಟಿ ಅವರ ಪದಗ್ರಹಣ ಸಂಧರ್ಭ ಇದೇ ವೇದಿಕೆಯಲ್ಲಿ ಡೊಂಬಿವಲಿ ಪ್ರಾದೇಶಿಕ ಸಮಿತಿ ಅತ್ಯುತ್ತಮ ಸಮಿತಿಯೆಂಬ ಹೆಗ್ಗಳಿಕೆ ಪಡೆಯಬೇಕು ಎನ್ನುವ ಆಶಯ ವ್ಯಕ್ತಪಡಿಸಿದೆ. ಅದು ಇಂದು ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಸೇವನೆ ಮಾಡಿ ಪ್ರಥಮ ಸ್ಥಾನ ಪಡೆಯೋಣ. ಅದಕ್ಕಾಗಿ ಎಲ್ಲರು ಒಗ್ಗಟ್ಟಿನಿಂದ ಸಮಾಜ ಸೇವೆಯಲ್ಲಿ ತೊಡಗೋಣ.–ಕಲ್ಲಡ್ಕ ಕರುಣಾಕರ ಶೆಟ್ಟಿ ಸಂಘಟಕರು, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ
ಭಿವಂಡಿ-ಬದ್ಲಾಪುರ, ನವಿಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಗಳು ನನ್ನ ಸಂಚಾಲಕತ್ವದಲ್ಲಿವೆ. ಈ ಮೂರೂ ಸಮಿತಿಗಳು ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಗೆದ್ದಿವೆ. ದಿವಾಕರ ಶೆಟ್ಟಿ ಇಂದ್ರಾಳಿ, ಐಕಳ ಗಣೇಶ್ ಶೆಟ್ಟಿ, ರಾಜೀವ್ ಭಂಡಾರಿ, ಕಲ್ಲಡ್ಕ ಕರುಣಾಕರ ಶೆಟ್ಟಿ ಅವರು ಹಾಕಿದ ಭದ್ರ ಬುನಾದಿಯಿಂದ ಹಾಗೂ ಕಾರ್ಯಕಾರಿ ಸಮಿತಿಯ ಪ್ರಾಮಾಣಿಕ ಸಮಾಜ ಸೇವೆಯಿಂದ ದ್ವಿತೀಯ ಅತ್ಯುತ್ತಮ ಪ್ರಾದೇಶಿಕ ಸಮಿತಿ ಎಂಬ ಹೆಗ್ಗಳಿಕೆಯನ್ನು ಡೊಂಬಿವಲಿ ಪ್ರಾದೇಶಿಕ ಸಮಿತಿ ಪಡೆದಿದೆ ಎನ್ನಲು ಅತೀವ ಸಂತೋಷವಾಗುತ್ತಿದೆ. –ಸುಬ್ಬಯ ಶೆಟ್ಟಿ , ಸಂಚಾಲಕರು, ಮಧ್ಯ ವಲಯ ಪ್ರಾದೇಶಿಕ ಸಮಿತಿಗಳು
ಡೊಂಬಿವಲಿ ಸಮಿತಿ ನಮ್ಮೆಲ್ಲರ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ನನ್ನ ಸಹಕಾರ ಸದಾ ಇದೆ. ನಿಮ್ಮೆಲ್ಲರ ಆಶೀರ್ವಾದದಿಂದ ಅನಾರೋಗ್ಯದಿಂದ ಬಳಲುತ್ತಿದ್ದವನು ಎಲ್ಲವನ್ನು ಗೆದ್ದು ಬಂದಿದ್ದೇನೆ. ಈ ಸಮ್ಮಾನವನ್ನು ಕಾಪು ಮಾರಿಯಮ್ಮ ಮತ್ತು ಶ್ರೀ ಜನಾರ್ದನ ದೇವರ ಪ್ರಸಾದವೆಂದು ಸ್ವೀಕರಿಸಿದ್ದೇನೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಇದೇ ರೀತಿಯಲ್ಲಿ ಇರಲಿ. ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳಿಗೆ ನನ್ನ ಸಹಕಾರ ಸದಾಯಿದೆ. ಸಮಿತಿಯಿಂದ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿ.–ದಿನೇಶ್ ಶೆಟ್ಟಿ , ಸಮ್ಮಾನಿತರು