Advertisement

ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಬಂಡಿ ಸೂಚನೆ

05:38 AM May 19, 2020 | Suhan S |

ಗಜೇಂದ್ರಗಡ: ಮುಂಗಾರು ಹಂಗಾಮಿಗೆ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕಳಕಪ್ಪ ಬಂಡಿ ಸೂಚಿಸಿದರು.

Advertisement

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿಯುವ ಆಶಾಭಾವನೆ ರೈತರಲ್ಲಿದೆ. ಗಜೇಂದ್ರಗಡ ಮತ್ತು ರೋಣ ತಾಲೂಕಿನಲ್ಲಿ 5 ಬೀಜ ವಿತರಣಾ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆಯಬೇಕು ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ರವೀಂದ್ರ ಪಾಟೀಲ ಮಾತನಾಡಿ, ಗಜೇಂದ್ರಗಡ ರೈತ ಸಂಪರ್ಕ ಕೇಂದ್ರದಲ್ಲಿ ಸದ್ಯ 25 ಸಾವಿರ ಕ್ವಿಂಟಲ್‌ ಹೆಸರು, 4 ಕ್ವಿಂಟಲ್‌ ಹೈಬ್ರಿಡ್‌ ಜೋಳ ಬೀಜಗಳು ಬಂದಿದ್ದು, ಉಳಿದ ಬಿತ್ತನೆ ಬೀಜ ಶೀಘ್ರ ಬರಲಿವೆ ಎಂದರು. ತಾಪಂ ಸದಸ್ಯ ಶಶಿಧರ ಹೂಗಾರ, ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಮುದಿಯಪ್ಪ ಕರಡಿ, ನರೇಗಲ್ಲ ಕೃಷಿ ಅಧಿಕಾರಿ ಜಗದೀಶ ಹಾದಿಮನಿ, ಸಹಾಯಕ ಕೃಷಿ ಅ ಧಿಕಾರಿ ಸಿ.ಕೆ. ಕಮ್ಮಾರ ಇತರರು ಇದ್ದರು.

ಕಳಪೆ ಬೀಜ; ರೈತನ ಆಕ್ಷೇಪ: ಶಾಸಕ ಕಳಕಪ್ಪ ಬಂಡಿ ಅವರು ಬಿತ್ತನೆ ಬೀಜ ವಿತರಿಸಿ ನಿರ್ಗಮಿಸುತ್ತಿದ್ದಂತೆ ರೈತರೊಬ್ಬರು ಹೆಸರು ಬಿತ್ತನೆ ಬೀಜಗಳಲ್ಲಿ ಬಹುತೇಕ ಕಪ್ಪು ಕಾಳುಗಳಿದ್ದು, ಕಳಪೆಯಾಗಿವೆ. ಇದರಿಂದ ಇಳುವರಿ ಕುಂಠಿತವಾಗಲಿವೆ ಎಂದು ದೂರಿದರು. ಪಕ್ಕದಲ್ಲೇ ಇದ್ದ ಅಧಿಕಾರಿಯನ್ನು ಈ ಬಗ್ಗೆ ಶಾಸಕರು ಕೇಳಿದಾಗ, ಅಧಿಕಾರಿಗಳು ಬಿತ್ತನೆ ಬೀಜಗಳನ್ನು ಪರಿಷ್ಕರಿಸಲಾಗಿದ್ದು, ಗುಣಮಟ್ಟದ್ದಾಗಿವೆ. ಇಳುವರಿ ಕುಂಠಿತವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next