Advertisement

ಬುಮ್ರಾ ದಾಳಿಗೆ ಬೆದರಿದ ಆಫ್ರಿಕಾ

09:39 AM Jan 26, 2018 | Team Udayavani |

ಜೊಹಾನ್ಸ್‌ಬರ್ಗ್‌: ವೇಗಿ ಜಸ್‌ಪ್ರೀತ್‌ ಬುಮ್ರಾ ದಾಳಿಗೆ ಬೆದರಿದ ದಕ್ಷಿಣ ಆಫ್ರಿಕಾ ಜೊಹಾನ್ಸ್‌ಬರ್ಗ್‌ ಟೆಸ್ಟ್‌ ಪಂದ್ಯದ ದ್ವಿತೀಯ ದಿನ 194 ರನ್ನಿಗೆ ತನ್ನ ಮೊದಲ ಸರದಿಯನ್ನು ಮುಗಿಸಿದೆ. ಇದು ಭಾರತದ ಮೊತ್ತಕ್ಕಿಂತ ಕೇವಲ 7 ರನ್‌ ಹೆಚ್ಚು.

Advertisement

ಬುಮ್ರಾ ಸಾಧನೆ 54ಕ್ಕೆ 5 ವಿಕೆಟ್‌. ಇದು ಅವರ 3ನೇ ಟೆಸ್ಟ್‌ ಆಗಿದ್ದು, ಮೊದಲ ಸಲ ಇನ್ನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಉರುಳಿಸಿದ ಸಾಹಸಗೈದಿದ್ದಾರೆ. ಉಳಿದಂತೆ ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಕಿತ್ತರೆ, ಇಶಾಂತ್‌ ಶರ್ಮ ಮತ್ತು ಮೊಹಮ್ಮದ್‌ ಶಮಿ ಒಂದೊಂದು ವಿಕೆಟ್‌ ಹಾರಿಸಿದರು. 

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಭಾರತ ಒಂದು ವಿಕೆಟ್‌ ನಷ್ಟಕ್ಕೆ 49 ರನ್‌ ಮಾಡಿದ್ದು, 42 ರನ್‌ ಮುನ್ನಡೆಯಲ್ಲಿದೆ. 2ನೇ ಸರದಿಯಲ್ಲಿ ಟೀಮ್‌ ಇಂಡಿಯಾದ ಓಪನಿಂಗ್‌ನಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಯಿತು. ರಾಹುಲ್‌ ಬದಲು ಪಾರ್ಥಿವ್‌ ಪಟೇಲ್‌ ಬಂದರು. ಪಟೇಲ್‌ 3 ಬೌಂಡರಿ ಸಿಡಿಸಿ ಆಕ್ರಮಣಕಾರಿ ಆಟಕ್ಕಿಳಿದರೂ 16 ರನ್‌ ಮಾಡಿ ನಿರ್ಗಮಿಸಿದರು. ವಿಜಯ್‌ 13, ರಾಹುಲ್‌ 16 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ನೆರವಿಗೆ ನಿಂತ ಆಮ್ಲ
ಭಾರತದ ಬ್ಯಾಟ್ಸ್‌ಮನ್‌ಗಳಂತೆ ಆತಿಥೇಯ ಆಫ್ರಿಕಾ ಆಟಗಾರರೂ ವಾಂಡರರ್ ವೇಗದ ಟ್ರ್ಯಾಕ್‌ ಮೇಲೆ ಪರದಾಡಿದರು. ಟೀಮ್‌ ಇಂಡಿಯಾ ಬೌಲರ್‌ಗಳು ಜಬರ್ದಸ್ತ್ ದಾಳಿ ಮೂಲಕ ಡು ಪ್ಲೆಸಿಸ್‌ ಪಡೆಯನ್ನು ಸಂಕಟಕ್ಕೆ ತಳ್ಳಿದರು. ಅನುಭವಿ ಬ್ಯಾಟ್ಸ್‌ಮನ್‌ ಹಾಶಿಮ್‌ ಆಮ್ಲ 239 ನಿಮಿಷಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡು ಉತ್ತಮ ಹೋರಾಟವೊಂದನ್ನು ಸಂಘಟಿಸದೇ ಹೋಗಿದ್ದರೆ ಭಾರತಕ್ಕೆ ಇನ್ನಿಂಗ್ಸ್‌ ಮುನ್ನಡೆಯ ಸಾಧ್ಯತೆ ಇತ್ತು. ಆಮ್ಲ 121 ಎಸೆತಗಳನ್ನು ನಿಭಾಯಿಸಿ 61 ರನ್‌ ಬಾರಿಸಿದರು. ಇದರಲ್ಲಿ 7 ಬೌಂಡರಿ ಸೇರಿತ್ತು. 

ಆಮ್ಲ ಅವರಿಗೆ ನೈಟ್‌ ವಾಚ್‌ಮನ್‌ ಕಾಗಿಸೊ ರಬಾಡ ಉತ್ತಮ ಬೆಂಬಲ ನೀಡಿದರು. 84 ಎಸೆತಗಳನ್ನು ನಿಭಾಯಿಸಿದ ರಬಾಡ 30 ರನ್‌ ಕೊಡುಗೆ ಸಲ್ಲಿಸಿದರು (6 ಬೌಂಡರಿ). ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 64 ರನ್‌ ಒಟ್ಟುಗೂಡಿತು. ಎರಡಂಕೆಯ ಗಡಿ ದಾಟಿದ ಮತ್ತೂಬ್ಬ ಆಟಗಾರನೆಂದರೆ ವೆರ್ನನ್‌ ಫಿಲಾಂಡರ್‌. 55 ಎಸೆತ ಎದುರಿಸಿದ ಫಿಲಾಂಡರ್‌ 5 ಬೌಂಡರಿ ನೆರವಿನಿಂದ 35 ರನ್‌ ಮಾಡಿದರು. ಕಾಕತಾಳೀಯವೆಂದರೆ, ಭಾರತದ 3, 4 ಹಾಗೂ 8ನೇ ಕ್ರಮಾಂಕದ ಆಟಗಾರರಂತೆ ದಕ್ಷಿಣ ಆಫ್ರಿಕಾದ ಸರದಿಯಲ್ಲೂ ಇದೇ ಕ್ರಮಾಂಕದ ಆಟಗಾರರಷ್ಟೇ ಎರಡಂಕೆಯ ಸ್ಕೋರ್‌ ದಾಖಲಿಸಿದ್ದು! ಭಾರತದ ಪರ ಪೂಜಾರ, ಕೊಹ್ಲಿ ಮತ್ತು ಭುವನೇಶ್ವರ್‌ ಈ ಸಾಧನೆ ಮಾಡಿದ್ದರು.

Advertisement

ಆತಿಥೇಯರ ಮಧ್ಯಮ ಸರದಿಯ ಬ್ಯಾಟ್ಸ್‌ಮನ್‌ಗಳಾದ ಡಿ ವಿಲಿಯರ್, ಡು ಪ್ಲೆಸಿಸ್‌, ಡಿ ಕಾಕ್‌ ಅವರನ್ನು ಬೇಗನೇ ಪೆವಿಲಿಯನ್ನಿಗೆ ಅಟ್ಟಿದ ಭಾರತ ತನ್ನ ಹಿಡಿತವನ್ನು ಬಿಗಿಗೊಳಿಸತೊಡಗಿತು. 125 ರನ್ನಿಗೆ ಹರಿಣಗಳ 6 ವಿಕೆಟ್‌ ಹಾರಿಹೋಯಿತು. ಆಗ ಆಮ್ಲ-ಫಿಲಾಂಡರ್‌ 44 ರನ್‌ ಜತೆಯಾಟ ನಿಭಾಯಿಸಿದರು. ಹೀಗಾಗಿ ಆಫ್ರಿಕಾಕ್ಕೆ ಭಾರತದ ಮೊತ್ತವನ್ನು ದಾಟಲು ಸಾಧ್ಯವಾಯಿತು. ದಕ್ಷಿಣ ಆಫ್ರಿಕಾ ಒಂದಕ್ಕೆ 6 ರನ್‌ ಮಾಡಿದಲ್ಲಿಂದ ದ್ವಿತೀಯ ದಿನದಾಟ ಮುಂದುವರಿಸಿತ್ತು.

ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌        187

ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್‌
ಡೀನ್‌ ಎಲ್ಗರ್‌    ಸಿ ಪಟೇಲ್‌ ಬಿ ಭುವನೇಶ್ವರ್‌    4
ಐಡನ್‌ ಮಾರ್ಕ್‌ರಮ್‌    ಸಿ ಪಟೇಲ್‌ ಬಿ ಭುವನೇಶ್ವರ್‌    2
ಕಾಗಿಸೊ ರಬಾಡ    ಸಿ ರಹಾನೆ ಬಿ ಇಶಾಂತ್‌    30
ಹಾಶಿಮ್‌ ಆಮ್ಲ    ಸಿ ಪಾಂಡ್ಯ ಬಿ ಬುಮ್ರಾ    61
ಎಬಿ ಡಿ ವಿಲಿಯರ್    ಬಿ ಭುವನೇಶ್ವರ್‌    5
ಫಾ ಡು ಪ್ಲೆಸಿಸ್‌    ಬಿ ಬುಮ್ರಾ    8
ಕ್ವಿಂಟನ್‌ ಡಿ ಕಾಕ್‌    ಸಿ ಪಟೇಲ್‌ ಬಿ ಬುಮ್ರಾ    8
ವೆರ್ನನ್‌ ಫಿಲಾಂಡರ್‌    ಸಿ ಬುಮ್ರಾ ಬಿ ಶಮಿ    35
ಆ್ಯಂಡಿಲ್‌ ಫೆಲಿಕ್ವಾಯೊ    ಎಲ್‌ಬಿಡಬ್ಲ್ಯು ಬುಮ್ರಾ    9
ಮಾರ್ನೆ ಮಾರ್ಕೆಲ್‌    ಔಟಾಗದೆ    9
ಲುಂಗಿ ಎನ್‌ಗಿಡಿ    ಸಿ ಪಟೇಲ್‌ ಬಿ ಬುಮ್ರಾ    0

ಇತರ        23
ಒಟ್ಟು  (ಆಲ್‌ಟ್‌)        194
ವಿಕೆಟ್‌ ಪತನ: 1-3, 2-16, 3-80, 4-92, 5-107, 6-125, 7-169, 8-175, 9-194.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        19-9-44-3
ಜಸ್‌ಪ್ರೀತ್‌ ಬುಮ್ರಾ        18.5-2-54-5
ಇಶಾಂತ್‌ ಶರ್ಮ        14-2-33-1
ಮೊಹಮ್ಮದ್‌ ಶಮಿ        12-0-46-1
ಹಾರ್ದಿಕ್‌ ಪಾಂಡ್ಯ        2-0-3-0
ಭಾರತ ದ್ವಿತೀಯ ಇನ್ನಿಂಗ್ಸ್‌
ಮುರಳಿ ವಿಜಯ್‌    ಬ್ಯಾಟಿಂಗ್‌    13
ಪಾರ್ಥಿವ್‌ ಪಟೇಲ್‌    ಸಿ ಐಡನ್‌ಬಿ ಫಿಲಾಂಡರ್‌    16
ಕೆ.ಎಲ್‌. ರಾಹುಲ್‌    ಬ್ಯಾಟಿಂಗ್‌    16

ಇತರ        4
ಒಟ್ಟು  (ಒಂದು ವಿಕೆಟಿಗೆ)        49
ವಿಕೆಟ್‌ ಪತನ: 1-17.

ಬೌಲಿಂಗ್‌: 
ವೆರ್ನನ್‌ ಫಿಲಾಂಡರ್‌        5-2-11-1
ಕಾಗಿಸೊ ರಬಾಡ        6-1-19-0
ಮಾರ್ನೆ ಮಾರ್ಕೆಲ್‌        4-1-9-0
ಲುಂಗಿ ಎನ್‌ಗಿಡಿ        2-0-6-0

Advertisement

Udayavani is now on Telegram. Click here to join our channel and stay updated with the latest news.

Next