ಹೊಸದಿಲ್ಲಿ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಆಗ್ರ ಸ್ಥಾನಕ್ಕೆ ಮರಳಿದ್ದಾರೆ. ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ ನಂತರ ಸ್ಪಿನ್ನರ್ ಆರ್ .ಅಶ್ವಿನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯದ ಜೋಶ್ ಹ್ಯಾಝಲ್ ವುಡ್ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಇನ್ನೋರ್ವ ಸ್ಪಿನ್ನರ್ ಆರ್. ಅಶ್ವಿನ್ 6 ನೇ ಸ್ಥಾನದಲ್ಲಿದ್ದಾರೆ. ಕುಲದೀಪ್ ಯಾದವ್ 16 ನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್‌ನಲ್ಲಿ, ಕಾನ್ಪುರ ಟೆಸ್ಟ್ ಬಳಿಕ ಯಶಸ್ವಿ ಜೈಸ್ವಾಲ್ ಕೇವಲ 11 ಟೆಸ್ಟ್ ಪಂದ್ಯಗಳನ್ನು ಆಡಿದ ನಂತರ ವೃತ್ತಿಜೀವನದ ಉನ್ನತ ಮೂರನೇ ಸ್ಥಾನಕ್ಕೆ ಏರಿದ್ದಾರೆ. 72 ಮತ್ತು 51 ರನ್‌ಗಳ ಅಮೋಘ ಆಟಗಳನ್ನು ಆಡಿ ಮಳೆಯಿಂದ ಅಡ್ಡಿಯಾದ ಪಂದ್ಯವನ್ನು ಭಾರತವು ಏಳು ವಿಕೆಟ್‌ಗಳಿಂದ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. 22 ವರ್ಷದ ಜೈಸ್ವಾಲ್ 792 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ನ ಜೋ ರೂಟ್ (899) ಮೊದಲ ಸ್ಥಾನ, ನ್ಯೂಜಿಲ್ಯಾಂಡ್ ನ ಕೇನ್ ವಿಲಿಯಮ್ಸನ್ (829) ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದು, ಪಂತ್ 9 ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ ಮತ್ತು ಗಿಲ್ ಕ್ರಮವಾಗಿ 15 ಮತ್ತು 16 ನೇ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್ ಶ್ರೇಯಾಂಕದಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗಿಲ್ಲ, ಜಡೇಜಾ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಅಶ್ವಿನ್ ಎರಡನೇ ಮತ್ತು ಅಕ್ಷರ್ ಪಟೇಲ್ ಏಳನೇ ಸ್ಥಾನದಲ್ಲಿದ್ದಾರೆ.
ತಂಡದ ರ‍್ಯಾಂಕಿಂಗ್ ನಲ್ಲಿ ಭಾರತವು 120 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ, ಆಸ್ಟ್ರೇಲಿಯದಿಂದ ನಾಲ್ಕು ಅಂಕಗಳನ್ನು ಕಡಿಮೆ ಹೊಂದಿದೆ. ಇಂಗ್ಲೆಂಡ್ 108 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಟೇಬಲ್‌ನಲ್ಲಿ ಆಳ್ವಿಕೆ ಮುಂದುವರೆಸಿದ್ದು, 11 ಪಂದ್ಯಗಳ ನಂತರ ಶೇಕಡಾ 74.24% ರ ಅಂಕವನ್ನು ಹೊಂದಿದ್ದು, ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯ (12 ಟೆಸ್ಟ್‌ಗಳಲ್ಲಿ 62.50%) ಹೊಂದಿದೆ.