Advertisement
ಹೌದು, ಡೇಟಿಂಗ್ ಆ್ಯಪ್ ಗಳು ಸಾಂಸಾರಿಕ ಜೀವನದಲ್ಲಿ ಒಬ್ಬರನ್ನೊಬ್ಬರು ಅರಿತುಕೊಳ್ಳುವುದಕ್ಕೆ ಉತ್ತಮ ಮಾಧ್ಯಮ ಅಥವಾ ಸಾಧನ. ಇದಕ್ಕೆ ಸಹಾಯವಾಗುವಂತೆಯೇ ಬಂಬಲ್ ಎಂಬ ಡೇಟಿಂಗ್ ಆ್ಯಪ್ ಬಂದಿದೆ.
Related Articles
Advertisement
24 ಗಂಟೆಗಳೊಳಗೆ ಆಕೆ ಸಂದೇಶವನ್ನು ಕಳುಹಿಸದೇ ಇದ್ದರೆ ನಂತರ ಮ್ಯಾಚ್ ದೊರೆಯುವುದಿಲ್ಲ. ಸದ್ಯ, ಈ ಆ್ಯಪ್ ಪ್ರಪಂಚದಾದ್ಯಂತ ಸರಿ ಸುಮಾರು 100 ಮಿಲಿಯನ್ ಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದೆ.
ಬಂಬಲ್ ಆ್ಯಪ್ ನ ಕಾರ್ಯವೈಖರಿ ಹೇಗೆ..?
ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಂಡ ನಂತರ ಅಕೌಂಟ್ ನನ್ನು ರಚಿಸಿಕೊಳ್ಳಬೇಕು. ನಿಮ್ಮ ಪ್ರೊಫೈಲ್ ನಲ್ಲಿ ಯಾವ ರೀತಿಯ ಫೋಟೋ ಇರಬೇಕೆಂಬುದನ್ನು ನೀವು ಫೇಸ್ ಬುಕ್ ನಿಂದ ಆಯ್ದುಕೊಳ್ಳಬೇಕು. ನಿಮ್ಮ ಸಮೀಪದ ಮ್ಯಾಚ್ ಗಳನ್ನು ಸ್ಕ್ಯಾನ್ ಮಾಡಲು ಆ್ಯಪ್ ನಿಮ್ಮ ಲೊಕೇಶನ್ ನನ್ನು ಬಳಸುತ್ತದೆ. ನೀವು ಇಷ್ಟಪಡುವ ಮ್ಯಾಚ್ ಸಿಕ್ಕಿದರೆ ಬಲಕ್ಕೆ ಸ್ವೈಪ್ ಮಾಡಿ ನಿಮಗೆ ಇಷ್ಟವಿಲ್ಲದಿದ್ದರೆ ಎಡಕ್ಕೆ ಸ್ವೈಪ್ ಮಾಡಬೇಕು.
ಇಬ್ಬರು ಬಲಕ್ಕೆ ಸ್ವೈಪ್ ಮಾಡಿದರೇ ಮ್ಯಾಚ್ ಎಂದರ್ಥ. ಮಾತ್ರವಲ್ಲದೇ, ನಿಮ್ಮಿಷ್ಟದ ಗೆಳತಿಗೆ 24 ಗಂಟೆಯಲ್ಲಿ ಮೊದಲು ಮೆಸೇಜ್ ಮಾಡುವ ಅಧಿಕಾರವಿರುತ್ತದೆ. ನಿಮ್ಮ ಗೆಳತಿ ನಿಮ್ಮ ಮೆಸೇಜ್ ಗೆ ಪ್ರತಿಕ್ರಿಯಿಸದಿದ್ದಲ್ಲಿ ಮ್ಯಾಚ್ ನಷ್ಟವಾಗುತ್ತದೆ.
ಈ ಆ್ಯಪ್ ಸಂಪೂರ್ಣ ಉಚಿತ. ಆದರೇ, ನಿಮಗೆ ಆ್ಯಪ್ ನಲ್ಲಿ ವಿಶೇಷತೆಗಳು ಬೇಕಾದಲ್ಲಿ ಮಾತ್ರ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ : ನಟ ಚೇತನ್