Advertisement

ಪ್ರೊ ಕಬಡ್ಡಿ: ಬುಲ್ಸ್‌-ಟೈಟಾನ್ಸ್‌, ಮುಂಬಾ-ಯೋಧ ಟೈ ರೋಮಾಂಚನ

10:19 PM Jan 01, 2022 | Team Udayavani |

ಬೆಂಗಳೂರು: ಪ್ರೊ ಕಬಡ್ಡಿ ಪಂದ್ಯಾವಳಿಯ ಶನಿವಾರದ ಸ್ಪರ್ಧೆಗಳು ಕ್ರೀಡಾಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡಿದವು. ಮೊದಲು ಯು ಮುಂಬಾ-ಯುಪಿ ಯೋಧ, ಬಳಿಕ ಬೆಂಗಳೂರು ಬುಲ್ಸ್‌-ತೆಲುಗು ಟೈಟಾನ್ಸ್‌ ಪಂದ್ಯಗಳು ಏಕರೀತಿಯ ಹೋರಾಟ ಕಂಡವು. ಎರಡೂ ಪಂದ್ಯಗಳು ಟೈ ಆದವು!

Advertisement

ಮುಂಬಾ-ಯೋಧ ಮುಖಾಮುಖಿ 28-28ರಿಂದ, ಬುಲ್ಸ್‌-ಟೈಟಾನ್ಸ್‌ ಪಂದ್ಯ 34-34ರಿಂದ ಸಮಬಲದಲ್ಲಿ ಅಂತ್ಯ ಕಂಡಿತು. ಹ್ಯಾಟ್ರಿಕ್‌ ಗೆಲುವಿನೊಂದಿಗೆ ಕಣಕ್ಕಿಳಿದಿದ್ದ ಬುಲ್ಸ್‌ ಪಾಲಿಗೆ ಇದು ಮೊದಲ ಟೈ ಫ‌ಲಿತಾಂಶ. ಇನ್ನೊಂದೆಡೆ ತೆಲುಗು ಟೈಟಾನ್ಸ್‌ 2ನೇ ಟೈ ಸಾಧಿಸಿತು. ಅದಿನ್ನೂ ಗೆಲುವಿನ ಮುಖ ಕಂಡಿಲ್ಲ.

ಅಂತಿಮ ರೈಡ್‌ನ‌ಲ್ಲಿ ಟೈಟಾನ್ಸ್‌ ತಂಡದ ನಾಯಕ ರೋಹಿತ್‌ ಕುಮಾರ್‌ ಅವರನ್ನು ಬುಲ್ಸ್‌ ಸಾರಥಿ ಪವನ್‌ ಸೆಹ್ರಾವತ್‌ ಟ್ಯಾಕಲ್‌ ಮಾಡುವುದರೊಂದಿಗೆ ಪಂದ್ಯವನ್ನು ಸಮಬಲಕ್ಕೆ ತಂದರು. ಬುಲ್ಸ್‌ ಪರ ರೈಡರ್‌ಗಳಾದ ಚಂದ್ರನ್‌ ರಂಜಿತ್‌ (9 ಅಂಕ), ಪವನ್‌ (8 ಅಂಕ) ಅಮೋಘ ಆಟವಾಡಿದರು. ಟೈಟಾನ್ಸ್‌ ರೈಡರ್‌ ಅಂಕಿತ್‌ ಬೇನಿವಾಲ್‌ ಸರ್ವಾಧಿಕ 10 ಅಂಕ ಗಳಿಸಿದರು.

ಇದನ್ನೂ ಓದಿ:ಕೋವಿಡ್ ಹಿನ್ನೆಲೆ : ಸಾಮೂಹಿಕ ಕೇಶ ಮುಂಡನೆ ಮಾಡಿ ಹರಕೆ ತೀರಿಸಿದ ಗ್ರಾಮಸ್ಥರು

ಮುಂಬಾ-ಯೋಧ ಟೈ
ಯು ಮುಂಬಾ-ಯುಪಿ ಯೋಧ ನಡುವಿನ ಮೊದಲ ಮುಖಾಮುಖೀ ಕೂಡ ರೋಚಕವಾಗಿ ಸಾಗಿತು. ಎರಡೂ ತಂಡಗಳಲ್ಲಿ ಜಿದ್ದಾಜಿದ್ದಿ ಹೋರಾಟ ಕಂಡುಬಂತು. ವಿರಾಮದ ವೇಳೆ ಮುಂಬಾ 16-13 ಅಂತರದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು.

Advertisement

ವಿರಾಮದ ಬಳಿಕ ಎರಡೂ ತಂಡಗಳ ಆಟಗಾರರು ಜಿದ್ದಿಗೆ ಬಿದ್ದವರಂತೆ ಆಡಿದರು. ಮುಂಬಾ ತುಸು ಮೇಲುಗೈ ಸಾಧಿಸಿತಾದರೂ ಯೋಧ ಸೋಲು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಯುಪಿ ರೈಡರ್‌ ಪದೀìಪ್‌ ನರ್ವಾಲ್‌ (4 ಅಂಕ) ಲಯದಲ್ಲಿ ಇಲ್ಲದಿದ್ದುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಮತ್ತೋರ್ವ ರೈಡರ್‌ ಸುರೇಂದರ್‌ ಗಿಲ್‌ (8 ಅಂಕ), ಡಿಫೆಂಡರ್‌ ಸುಮಿತ್‌ (6 ಅಂಕ) ಉತ್ತಮ ಪ್ರದರ್ಶನವಿತ್ತರು.

ಮುಂಬಾ ಪರ ಅಜಿತ್‌ ರೈಡಿಂಗ್‌ನಲ್ಲಿ ಮಿಂಚಿ 9 ಅಂಕ ತಂದಿತ್ತರು. ಅಭಿಷೇಕ್‌ ಸಿಂಗ್‌ ಮತ್ತು ರಿಂಕು ತಲಾ 4 ಅಂಕ ಗಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next