Advertisement

5 ಲಕ್ಷ ದಾಖಲೆ ಬೆಲೆಗೆ ಮಾರಾಟವಾದ ಹೋರಿಗಳು!

07:08 PM Feb 10, 2022 | Team Udayavani |

ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರದ ಇತಿಹಾಸ ಪ್ರಸಿದ್ಧ ಭ್ರಮರಾಂಭ ಶ್ರೀ ಸಿಡಿಲು ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ದನಗಳ ಜಾತ್ರೆಯಲ್ಲಿ ಈ ಬಾರಿ ಹಳ್ಳಿಕಾರ್ ತಳಿಯ ಜಾನುವಾರು  ಜನ ಆಕರ್ಷಣಾ ಕೇಂದ್ರವಾಗಿದ್ದು, 1ಜತೆ ಜೋಡೆತ್ತುಗಳು ರೂ. 5 ಲಕ್ಷಕ್ಕೆ   ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿ ಮಾಡಿವೆ.

Advertisement

ತಾಲೂಕಿನ ಕೆಳಗನಹಳ್ಳಿ ದೊಡ್ಡೇಕೊಪ್ಪಲು ಗ್ರಾಮದ ಮಾದೇಗೌಡರು ಸಾಕಿದ್ದ ಈ  ಹೋರಿಗಳು ಸುಮಾರು 6 ಹಲ್ಲುಗಳನ್ನು ಹೊಂದಿದ್ದು  ಈ ಹೋರಿಗಳು ಜಾತ್ರೆಯಲ್ಲಿ  ರೈತರ ಆಕರ್ಷಣೆಯ ಕೇಂದ್ರವಾಗಿದ್ದಲ್ಲದೆ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರಕ್ಕೆ ಮಾರಾಟವಾಗಿವೆ. ಈ ದನಗಳ ಜಾತ್ರೆಯನ್ನು ನೋಡಲು ಹಾಗೂ ದನಗಳ ಮಾರಾಟ ಮತ್ತು ಕೊಂಡುಕೊಳ್ಳಲು ಹಾಸನ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದಲೂ ರೈತರು ಆಗಮಿಸಿ ತಮಗೆ ಬೇಕಾದ ದನಗಳನ್ನು ಮತ್ತು ಹೋರಿಗಳನ್ನು ಖರೀದಿಸುವ ಮೂಲಕ ಜಾತ್ರೆಗೆ ಮೆರುಗು ನೀಡುವುದರಿಂದ ಸ್ಥಳೀಯ ರೈತರಲ್ಲಿ ಮಂದಹಾಸ ಮೂಡಿಸುತ್ತಾರೆ.   ಈ ಬಾರಿ ಪಕ್ಕದ ತಾಲೂಕಿನ ಚುಂಚನಕಟ್ಟೆ  ದನಗಳ ಜಾತ್ರೆ ಹೆಚ್ಚು ದಿನ ನಡೆಯದ ಕಾರಣ ರೈತರು ತಮ್ಮ ಜಾನುವಾರುಗಳನ್ನು ಬೆಟ್ಟದಪುರದ ಜಾತ್ರೆಗೆ ತಂದು ಮಾರಾಟ ಮಾಡುತ್ತಿರುವುದು ವಿಶೇಷವಾಗಿದೆ.

ದನಗಳ ಜಾತ್ರೆಗೆ ಅಧಿಕಾರಿಗಳ ಅಡ್ಡಿ:

ಬೆಟ್ಟದಪುರದಲ್ಲಿ ಪ್ರತಿ ವರ್ಷ ದನಗಳ ಜಾತ್ರೆ ನೆಡೆದುಕೊಂಡು ಬಂದಿರುವುದು ಇತಿಹಾಸ. ಆದರೆ ಕಳೆದೆರಡು ವರ್ಷಗಳಿಂದ ಕೊರೋನಾ ಮಹಾಮಾರಿ ವಕ್ಕರಿಸಿದ ಕಾರಣ ಇಲ್ಲಿ ದನಗಳ ಜಾತ್ರೆಗೆ ಮುಸುಕು ಆವರಿಸಿತ್ತು, ಈ ಬಾರಿಯಾದರೂ ರೈತರು ನಡೆಸುವ ದನಗಳ ಜಾತ್ರೆಗೆ ಅಧಿಕಾರಿಗಳು ಸಹಕಾರ ನೀಡುತ್ತಾರೆ ಎಂದರೆ ಕೊರೋನಾ ಹಾಗೂ ಇನ್ನಿತರ ಕುಂಟು ನೆಪವೊಡ್ಡಿ ಅಧಿಕಾರಿಗಳು ಜಾತ್ರೆ ನಡೆಸಲು ಅವಕಾಶ ನೀಡದೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸುತ್ತಾರೆ. ಹೀಗಿದ್ದರೂ ಇತಿಹಾಸ ಪ್ರಸಿದ್ಧ ಜಾತ್ರೆಯ ವೇಳೆಯಲ್ಲಿ ದನಗಳ ಜಾತ್ರೆಗೆ ಅಧಿಕಾರಿಗಳು ಅವಕಾಶ ನೀಡದಿದ್ದರೂ ರೈತರೆ ತಮ್ಮ ಜಮೀನಿನಲ್ಲಿ ದನಗಳನ್ನು ಕಟ್ಟಲು ವ್ಯವಸ್ಥೆ ಮಾಡಿಕೊಂಡು ಈ ಜಾತ್ರೆಗೆ ದನಗಳನ್ನು ಕಟ್ಟಲು ಸುತ್ತಮುತ್ತಲಿನಿಂದ ಬರುವವರಿಗೆ ಸ್ಥಳಾವಕಾಶ ಕಲ್ಪಿಸಿದ್ದರೂ, ರಾಸುಗಳಿಗೆ ಬೇಕಾದ  ಮೂಲಭೂತ ನೀರು, ಮೇವು  ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸದ ಪಂಚಾಯಿತಿ, ಪಶು ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next