Advertisement

ನುಹ್ ಹಿಂಸಾಚಾರ: ಇದೊಂದು ಪೂರ್ವ ಯೋಜಿತ ಕೃತ್ಯ… ಹರಿಯಾಣ ಗೃಹ ಸಚಿವರ ಆರೋಪ

09:58 AM Aug 05, 2023 | Team Udayavani |

ಹರಿಯಾಣ: ನುಹ್ ಹಿಂಸಾಚಾರದ ಹಿಂದೆ ದೊಡ್ಡ ಷಡ್ಯಂತ್ರವಿದೆ, ಇದೊಂದು ಪೂರ್ವ ಯೋಜಿತ ಕೃತ್ಯ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಗಂಭೀರ ಆರೋಪ ಮಾಡಿದ್ದಾರೆ.

Advertisement

ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನುಹ್‌ನಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 202 ಜನರನ್ನು ಬಂಧಿಸಲಾಗಿದೆ. ಗುಡ್ಡಗಳಿಂದ ಗುಂಡುಗಳನ್ನು ಹಾರಿಸಿರುವುದು ಮತ್ತು ಕಟ್ಟಡಗಳ ಮೇಲ್ಛಾವಣಿಯಲ್ಲಿ ಕಲ್ಲುಗಳನ್ನು ಸಂಗ್ರಹಿಸಿ ಇಟ್ಟಿರುವುದು ಇದೆಲ್ಲ ನೋಡಿದರೆ ಹಿಂಸಾಚಾರಕ್ಕೆ ಮೊದಲೇ ಯೋಜನೆ ಹಾಕಲಾಗಿತ್ತು ಎಂದು ಸೂಚಿಸುತ್ತದೆ ಎಂದು ಹೇಳಿದರು.

ಘಟನೆಗೆ ಸಂಬಂಧಿಸಿ ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 102 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ, ಇದೊಂದು ಪಕ್ಕಾ ಯೋಜಿತ ಪ್ರಕರಣ ಹಾಗಾಗಿ ಪ್ರತಿಯೊಬ್ಬರ ಕೈಯಲ್ಲೂ ಆಯುಧಗಳು ಇತ್ತು, ಅಲ್ಲದೆ ಗುಂಡಿನ ದಾಳಿ ನಡೆದವು ಇದೆಲ್ಲವೂ ಸಾರ್ವಜನಿಕರ ಕೈಗೆ ಬರಲು ಹೇಗೆ ಸಾಧ್ಯ ಇದರ ಹಿಂದೆ ಯೋಜಿತ ತಂಡಗಳ ಕೈವಾಡವಿದೆ ಇದನ್ನು ಪತ್ತೆ ಹಚ್ಚಬೇಕಾದ ಅಗತ್ಯವಿದೆ ಎಂದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ, ನುಹ್ ಪೊಲೀಸ್ ಅಧೀಕ್ಷಕರು ಘರ್ಷಣೆಯ ಹಿಂದೆ ಮಾಸ್ಟರ್‌ಮೈಂಡ್ ಇರುವ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಿದರು.

Advertisement

ಇದೇ ವೇಳೆ, ಅಪರಾಧಿಗಳ ಆಸ್ತಿಗಳನ್ನು ಕೆಡವಲು ಬುಲ್ಡೋಜರ್ ಬಳಸಲು ಆಡಳಿತ ಮುಂದಾಗುತ್ತದೆಯೇ ಎಂದು ಸಚಿವರನ್ನು ಕೇಳಿದಾಗ, “ಅಗತ್ಯವಿರುವಲ್ಲಿ ಬುಲ್ಡೋಜರ್ ಅನ್ನು ಬಳಸಲಾಗುವುದು” ಎಂದರು.

ಇದನ್ನೂ ಓದಿ: ಟ್ರಕ್ ಗೆ ಟ್ರ್ಯಾಕ್ಟರ್ ಟ್ರಾಲಿ ಡಿಕ್ಕಿ: 5 ಮೃತ್ಯು, 12ಕ್ಕೂ ಹೆಚ್ಚು ಮಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next