Advertisement
ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಕರ್ಫ್ಯೂ ಜಾರಿ ಮಾಡಲಾಗಿದ್ದು, ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೌಲಭ್ಯವನ್ನು ರದ್ದು ಮಾಡಲಾಗಿದೆ. ಮೈತೇಯಿ ಸಮುದಾಯದವರ ಶವ ಸಿಕ್ಕಿದ ಜರಿಬಾಮ್ ನಗರದಲ್ಲಿ 2 ಚರ್ಚ್ ಮತ್ತು 3 ಮನೆಗಳಿಗೂ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಸಿಎಂ ಬಿರೇನ್ ಸಿಂಗ್ ಅವರ ಅಳಿಯನ ಆಸ್ತಿಗೂ ಬೆಂಕಿ ಇಕ್ಕಲಾಗಿದೆ.
ಸಾರ್ವಜನಿಕ ಆಸ್ತಿ ಹಾನಿ ಮತ್ತು ಸಚಿವರ ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 23 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ ಪಿಸ್ತೂಲು, 7 ಸುತ್ತಿನ ಗುಂಡು, ಸ್ಫೋಟಕಗಳು, 8 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 24 ತಾಸು ಗಡುವು
ರಾಜ್ಯದಲ್ಲಿ ಮೈತೇಯಿ ಸಮುದಾಯಗಳ ಸಾವಿಗೆ ಕಾರಣವಾದವರ ವಿರುದ್ಧ ಸೇನಾ ಕ್ರಮ ಕೈಗೊಳ್ಳಲು ಪ್ರತಿಭಟನಕಾರರು ರಾಜ್ಯ ಸರಕಾರಕ್ಕೆ 24 ತಾಸುಗಳ ಗಡುವು ವಿಧಿಸಿದ್ದಾರೆ. ಅಲ್ಲದೆ ತತ್ಕ್ಷಣವೇ ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಕಾಯ್ದೆಯನ್ನು ಹಿಂಪಡೆಯುವಂತೆ ಮಣಿಪುರ ಸರಕಾರವೂ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.
Related Articles
ಈಗಾಗಲೇ ಮೈತೇಯಿ ಸಮುದಾಯಕ್ಕೆ ಸೇರಿದವರ 6 ಮಂದಿಯ ಶವ ಪತ್ತೆಯಾಗಿದ್ದ ಜರಿಬಾಮ್ನಲ್ಲಿ ರವಿವಾರ ಮತ್ತೂಂದು ಶವ ಪತ್ತೆಯಾಗಿದ್ದು, ಹಿಂಸಾಚಾರ ಹೆಚ್ಚಳಕ್ಕೆ ಕಾರಣವಾಗಿದೆ. ಮೈತೇಯಿ ಸಮುದಾಯವರನ್ನು ಕುಕಿ ಬಂಡುಕೋರರು ಹತ್ಯೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದು, ಜರಿಬಾಮ್ನಲ್ಲಿ ಚರ್ಚ್ಗಳಿಗೆ ಬೆಂಕಿ ಹಚ್ಚಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಕಲ ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಬಗ್ಗೆ ಅಮಿತ್ ಶಾ ಸಭೆ ನಡೆಸಿದ್ದಾರೆ ಎಂದಿದ್ದಾರೆ.
Advertisement
ಅಮಿತ್ ಶಾ ದಿಲ್ಲಿಗೆ ದೌಡುಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರದಲ್ಲಿ ನಡೆಸಬೇಕಿದ್ದ ಚುನಾವಣ ರ್ಯಾಲಿಯನ್ನು ಸ್ಥಗಿತಗೊಳಿಸಿದ್ದಾರೆ. ಮಣಿಪುರಕ್ಕೆ ಸಂಬಂಧಿಸಿ ಅಧಿಕಾರಿಗಳ ಸಭೆ ನಡೆಸಲು ಅವರು ದಿಲ್ಲಿಗೆ ದೌಡಾಯಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಸೋಮವಾರ ಮತ್ತೆ ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬೆಂಬಲ ಹಿಂಪಡೆದ ನ್ಯಾಶನಲ್ ಪೀಪಲ್ಸ್ ಪಾರ್ಟಿ
ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ಬಿಜೆಪಿ ನೇತೃತ್ವದ ಮಣಿಪುರ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ರವಿವಾರ ಹಿಂಪಡೆದಿದೆ. ಬಿರೇನ್ ಸಿಂಗ್ ನೇತೃತ್ವದ ಸರಕಾರ ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾಗಿರುವುದರಿಂದ ಈ ತೀರ್ಮಾನ ಎಂದು ಪಕ್ಷ ತಿಳಿಸಿದೆ. 7 ಶಾಸಕರನ್ನು ಹೊಂದಿರುವ ಎನ್ಪಿಪಿ ಬೆಂಬಲ ಕಳೆದುಕೊಂಡರೂ ಸರಕಾರಕ್ಕೇನೂ ಅಪಾಯವಿಲ್ಲ. “ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳು ಭಾರೀ ನೋವನ್ನುಂಟು ಮಾಡಿವೆ. ಈ ಬಾರಿಯಾದರೂ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿ ಶಾಂತಿ ಕಾಪಾಡಲು ಯತ್ನಿಸಬೇಕು.” – ರಾಹುಲ್ ಗಾಂಧಿ, ಲೋಕಸಭೆ ವಿಪಕ್ಷ ನಾಯಕ