Advertisement

ಸಿಆರ್‌ಪಿಎಫ್ ಯೋಧರಿಗೆ ಬುಲೆಟ್‌ ಪ್ರೂಫ್ ಬಸ್‌ಗಳು

11:39 PM Mar 25, 2019 | Team Udayavani |

ಹೊಸದಿಲ್ಲಿ: ಪುಲ್ವಾಮಾದಲ್ಲಿ ಸೇನಾ ಸಿಬಂದಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಸೇನೆಗೆ ಸ್ಫೋಟಕಗಳಿಂದ ಹಾಗೂ ಗುಂಡಿನ ದಾಳಿಯಿಂದ ರಕ್ಷಣೆ ಒದಗಿಸುವ ವಾಹನಗಳನ್ನು ಒದಗಿಲಾಗಿದೆ. 30 ಸೀಟ್‌ಗಳುಳ್ಳ ಈ ಬುಲೆಟ್‌ ಪ್ರೂಫ್ ವಾಹನಗಳನ್ನು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುವ ಸಿಆರ್‌ಪಿಎಫ್ ಸಿಬಂದಿಗೆ ಒದಗಿಸಲಾಗಿದೆ. ಅಷ್ಟೇ ಅಲ್ಲ, ಕಾಶ್ಮೀರದಲ್ಲಿ ಬಾಂಬ್‌ ಪತ್ತೆ ಮತ್ತು ಬಾಂಬ್‌ ನಿಷ್ಕ್ರಿಯ ದಳದ ಸಿಬಂದಿ ಸಾಮರ್ಥ್ಯವನ್ನೂ ಹೆಚ್ಚಿಸಲು ನಿರ್ಧರಿಸಲಾಗಿದೆ. ಸದ್ಯ ಬುಲೆಟ್‌ ಪ್ರೂಫ್ ವಾಹನಗಳು ಸೇನೆಯ ಬಳಿ ಲಭ್ಯವಿದ್ದರೂ, ಇದರಲ್ಲಿ ಕೇವಲ ಆರು ಜನರು ಸಾಗಬಹುದಾಗಿದೆ ಎಂದು ಸಿಆರ್‌ಪಿಎಫ್ ಪ್ರಧಾನ ನಿರ್ದೇಶಕ ಆರ್‌ ಆರ್‌ ಭಟ್ನಾಗರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next