ಶಿವಮೊಗ್ಗ: ಹೊಸ ವರ್ಷ ಸ್ವಾಗತದ ವೇಳೆ ಏರ್ ಫೈರ್ ಮಾಡಲು ಹೋದ ವ್ಯಕ್ತಿಯೊಬ್ಬ ಎಡವಟ್ಟು ಮಾಡಿಕೊಂಡಿದ್ದು ಎದುರಿದ್ದ ಯುವಕನಿಗೆ ಬುಲೆಟ್ ನುಗ್ಗಿಸಿದ ಘಟನೆ ನಡೆದಿದೆ. ಆದರೆ ಅದೇ ಶಾಕ್ ನಲ್ಲಿ ಮಿಸ್ ಫೈರ್ ಮಾಡಿದ ವ್ಯಕ್ತಿಯು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಬಳಿ ಇರುವ ಗೋಪಾಲ್ ಗ್ಲಾಸ್ ಹೌಸ್ ಮನೆ ಮಾಲೀಕ ಮಂಜುನಾಥ್ ಓಲೀಕರ್ ಎಂಬವರ ಮನೆಯಲ್ಲಿ ಹೊಸವರ್ಷದ ಪಾರ್ಟಿಯಲ್ಲಿ ಎಡವಟ್ಟು ನಡೆದಿದೆ.
ಇದನ್ನೂ ಓದಿ:ಹೊಸ ವರ್ಷಾಚರಣೆಗೂ ಬಿಡದ ರಷ್ಯಾ: ಮಧ್ಯರಾತ್ರಿಯೇ ಉಕ್ರೇನ್ ನಲ್ಲಿ ಕ್ಷಿಪಣಿ ದಾಳಿ
12 ಗಂಟೆ ಆಗುತ್ತಿದ್ದಂತೆ ಮಂಜುನಾಥ್ ಮನೆಯಲ್ಲಿದ್ದ ಗನ್ ತೆಗೆದುಕೊಂಡು ಏರ್ ಫೈರ್ ಮಾಡಲು ಹೋಗಿದ್ದು, ಮಿಸ್ ಫೈರ್ ಆಗಿ ಪಾರ್ಟಿ ಮಾಡುತ್ತಿದ್ದ ಎದುರಿನ ಹುಡುಗನಿಗೆ ತಗುಲಿದೆ.
ಗಂಭೀರ ಗಾಯಗೊಂಡ ಯುವಕನನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗನ್ ನಿಂದ ಆದ ಪ್ರಮಾದಕ್ಕೆ ಶಾಕ್ ಗೆ ಒಳಗಾದ ಮಂಜುನಾಥ್ ಗೆ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕೋಟೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.