ಬೆಂಗಳೂರು: ಹಿಂದೆ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಕಾಲ ಇತ್ತು. ಈಗ ಬಾಲ ಬಿಚ್ಚಿದರೆ ಬುಲ್ಡೋಜರ್ ಹರಿಸಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇವನಹಳ್ಳಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಶ್ಮೀರದ ಭಯೋತ್ಪಾದಕರಿಗೆ ಬಿರಿಯಾನಿ ಕೊಡುತ್ತಿದ್ದರು. ಮೋದಿ ಸರ್ಕಾರ ಬಂದ ಮೇಲೆ ಇದ್ಯಾವುದು ನಡೆಯುವುದಿಲ್ಲ. ನಮಗೆ ಸುತ್ತಿ ಬಳಸಿ ಮಾತನಾಡಲು ಆಗಲ್ಲ. ಏಕ್ ಮಾರ್ ದೋ ತುಕ್ಡಾ..? ನೇರವಾಗಿ ಮಾತನಾಡಬೇಕು ಎಂದು ಹೇಳಿದರು.
ಸಿದ್ದರಾಮಯ್ಯಗೆ ಕುಂಕುಮ ಇಟ್ಟವರು ಕಂಡರೆ ಭಯ ಆಗುತ್ತದೆಯಂತೆ. ಹಾಗಾದರೆ ಬಾಂಬ್ ಹಾಕಿದವರು ಯಾರು..? ಕುಂಕುಮ ಇಟ್ಟವರು, ಬಾಂಬ್ ಹಾಕಿದ್ರಾ? ಆದರೂ ಕೆಲವರಿಗೆ ಮೋದಿ ಕೊಟ್ಟಿರಿವ ಗ್ಯಾಸ್ ಬೇಕು. ಅಕ್ಕಿ ಬೇಕು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಜೈಕಾರ ಹಾಕಿದರೆ ಉಚ್ಛಾಟನೆ ಅನಿವಾರ್ಯ: ಹಾಲಪ್ಪ
ರೈತರ ಖಾತೆಗೆ ಹಣ ಸಂದಾಯ ಆಗುತ್ತಿರುವುದು ಬಿಜೆಪಿ ಸರ್ಕಾರ ಬಂದ ಮೇಲೆ. 48 ಕೋಟಿ ಜನರಿಗೆ ಜನಧನ್ ಖಾತೆಗೆ ಹಣ ಹಾಕಿದ್ದು ಮೋದಿ ಸರ್ಕಾರ ಎಂದರು.