Advertisement

Bulldozer;ಅತ್ಯಾಚಾರ ಎಸಗಿ ಚಿತ್ರ ಹಿಂಸೆ ನೀಡಿದವನ ಮನೆ ಬುಲ್ಡೋಜರ್ ಬಳಸಿ ಧ್ವಂಸ

03:29 PM Apr 21, 2024 | Team Udayavani |

ಗುನಾ(ಮಧ್ಯಪ್ರದೇಶ): ಮಹಿಳೆಯೊಬ್ಬರ ಮೇಲೆ ಒಂದು ತಿಂಗಳ ಕಾಲ ಅತ್ಯಾಚಾರ ನಡೆಸಿ ಚಿತ್ರಹಿಂಸೆ ನೀಡಿದ ಆರೋಪಿಯು ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ಅಧಿಕಾರಿಗಳು ಭಾನುವಾರ ನೆಲಸಮಗೊಳಿಸಿದ್ದಾರೆ.

Advertisement

ಅಯಾನ್ ಪಠಾಣ್ ಎಂಬಾತ ತನ್ನ ನೆರೆಯಲ್ಲಿ ವಾಸಿಸುತ್ತಿದ್ದ 23 ವರ್ಷದ ಯುವತಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಒಂದು ತಿಂಗಳ ಕಾಲ ಚಿತ್ರಹಿಂಸೆ ನೀಡಿದ್ದ. ಇವರಿಬ್ಬರು ಕೆಲ ದಿನಗಳಿಂದ ಸಂಬಂಧವನ್ನೂ ಹೊಂದಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.

ಕೂಲಿ ಕೆಲಸ ಮಾಡುತ್ತಿದ್ದ ಅಯಾನ್, ಮಹಿಳೆಯ ತಾಯಿಯ ಹೆಸರಿನಲ್ಲಿರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. ಆಕೆ ಆಸ್ತಿಯನ್ನು ಹಸ್ತಾಂತರಿಸಲು ನಿರಾಕರಿಸಿದಾಗ, ಯುವತಿಯನ್ನು ಹೊಡೆದು ಕಣ್ಣು ಮತ್ತು ಬಾಯಿಗೆ ಮೆಣಸಿನ ಪುಡಿಯನ್ನು ಎರಚಿ ಹಿಂಸೆ ನೀಡಿದ್ದಾನೆ.
ಈತ ತನ್ನ ಸಂಬಂಧಿಕರ ನೆರವಿನಿಂದ ಮಹಿಳೆಗೆ ಹಲವು ಬಾರಿ ದೈಹಿಕ ಹಿಂಸೆ ನೀಡಿದ್ದ.ತೀವ್ರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ದಾಖಲಿಸಿದ ನಂತರ ಅಯಾನ್‌ನನ್ನು ಬಂಧಿಸಲಾಗಿದೆ.

ನಕಲಿ ದಾಖಲೆಗಳನ್ನು ಬಳಸಿ ಸರಕಾರಿ ಜಮೀನಿನಲ್ಲಿ ಅಯಾನ್ ನ ಮನೆಯನ್ನು ನಿರ್ಮಿಸಿದ್ದ ಎಂದು ಅಧಿಕಾರಿಗಳು ಕಂಡುಕೊಂಡ ಬಳಿಕ ಅದನ್ನು ಕೆಡವಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next