Advertisement

ಬುಲ್‌ಟ್ರಾಲ್‌ ಮೀನುಗಾರಿಕೆ ನಿಷೇಧ ತಿದ್ದುಪಡಿಗೆ ಆಗ್ರಹ

11:36 AM Aug 25, 2018 | Team Udayavani |

ಮಲ್ಪೆ: ಬುಲ್‌ಟ್ರಾಲ್‌ ಮೀನುಗಾರಿಕೆಗೆ ನಿಷೇಧ ಕಾಯ್ದೆ ತಿದ್ದುಪಡಿ ಮಾಡಿ ಬುಲ್‌ಟ್ರಾಲ್‌ ಮೀನುಗಾರಿಕೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮಲ್ಪೆ ಮತ್ತು ಗಂಗೊಳ್ಳಿಯ ಟ್ರಾಲ್‌ಬೋಟ್‌ (ತ್ರಿಸೆವೆಂಟಿ) ಮೀನುಗಾರರು ಮೀನುಗಾರಿಕೆಗೆ ತೆರಳದೆ ಬೋಟ್‌ಗಳನ್ನು ಬಂದರನಲ್ಲೆ ಲಂಗರು ಹಾಕಿದ್ದಾರೆ.

Advertisement

ತಿದ್ದುಪಡಿಗೆ ಆಗ್ರಹ
ತ್ರಿಸೆವೆಂಟಿ ಟ್ರಾಲ್‌ಬೋಟ್‌ಗಳು 140ಅಶ್ವಶಕ್ತಿ ಬಳಸಿ, 12 ನಾಟಿಕಲ್‌ ಒಳಗೆ ಮೀನುಗಾರಿಕೆ ನಡೆಸುವಂತಹದು. ಸರಕಾರ 350 ಮತ್ತು ಅದಕ್ಕಿಂತ ಹೆಚ್ಚು ಅಶ್ವಶಕ್ತಿ ಬಳಸಿ ಆಳಸಮುದ್ರದಲ್ಲಿ ನಡೆಸುವ ಬುಲ್‌ಟ್ರಾಲ್‌ ಮೀನುಗಾರಿಕೆಗೆ ನಿಷೇಧ ಜಾರಿಗೊಳಿಸಿದ್ದರಿಂದ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಸಣ್ಣ ಮೀನುಗಾರಿಕೆಗೆ ತೊಂದರೆ ಉಂಟಾಗಿದೆ. ಸರಕಾರವೂ ಈಗಾಗಲೇ ಜಾರಿಗೊಳಿಸಿ ಆದೇಶವನ್ನು ತಿದ್ದುಪಡಿಗೊಳಿಸಿ, 140 ಅಶ್ವಶಕ್ತಿಯ ಎಂಜಿನ್‌ ಬಳಸಿ ಮೀನುಗಾರಿಕೆ ನಡೆಸುವ ಟ್ರಾಲ್‌ಬೋಟ್‌ಗಳಿಗೆ ಬುಲ್‌ಟ್ರಾಲ್‌ ನಡೆಸಲು ಅವಕಾಶ ನೀಡಬೇಕು ಎಂದು ಸಂಘವು ಆಗ್ರಹಿಸಿದೆ.

ಮೇಲ್ಮಟ್ಟದಲ್ಲಿ ಮೀನಿನ ಸಂಚಾರ
ಮಳೆಗಾಲದ ನಿಷೇಧದ ಬಳಿಕ ಮೀನುಗಾರಿಕಾ ಋತು ಆರಂಭದ ಮೊದಲ ಮೂರು ತಿಂಗಳು ಸಮುದ್ರದ ನೀರು ತಣ್ಣಗಾಗಿರುವುದರಿಂದ ತೀರ ಪ್ರದೇಶದಲ್ಲಿರುವ ಮೀನುಗಳು ಸಮುದ್ರದ ಮೇಲ್ಮಟ್ಟದಲ್ಲಿ ಸಂಚರಿಸುತ್ತವೆ. ಇದು ಬುಲ್‌ಟ್ರಾಲ್‌ ಮೀನುಗಾರಿಕೆಯಿಂದ ಹಿಡಿಯಲು ಮಾತ್ರ ಸಾಧ್ಯ. ಸಿಂಗಲ್‌ ಟ್ರಾಲ್‌ನಿಂದ ಇಂತಹ ಮೀನುಗಾರಿಕೆ ಅಸಾಧ್ಯ ಎನ್ನಲಾಗಿದೆ.

6,000 ಕುಟಂಬಗಳು ಸಂಕಷ್ಟದಲ್ಲಿ
ಮೀನುಗಾರಿಕೆ ಋತು ಆರಂಭಗೊಂಡು 25 ದಿನ ಕಳೆದರೂ ಮಲ್ಪೆ ಬಂದರಿನ 600, ಗಂಗೊಳ್ಳಿಯ 300 ಬೋಟ್‌ಗಳು ಇನ್ನೂ ದಡದಲ್ಲೆ ಉಳಿದಿವೆೆ. ಪ್ರತಿಯೊಂದು ದೋಣಿಯಲ್ಲಿ 6 ಮಂದಿಯಂತೆ ನೇರವಾಗಿ 5 ಸಾವಿರ ಮಂದಿ ಇದರಲ್ಲಿ ತೊಡಗಿಕೊಂಡಿವೆ. ಇದೀಗ ಒಂದು ತಿಂಗಳಿಂದ ನೇರವಾಗಿ ಸಾವಿರಾರು ಕುಟುಂಬಕ್ಕೂ ಆರ್ಥಿಕ ಹೊಡೆತ ಉಂಟಾಗಿದೆ. ಪರೋಕ್ಷವಾಗಿ ಸಾವಿರಾರು ಮಂದಿಗೆ ನಷ್ಟ ಉಂಟಾಗಿದೆ. ಬಂದರಿನಲ್ಲಿ ಉಳಿದ ಎಲ್ಲ  ಸ್ತರದ ಬೋಟುಗಳು ಈಗಾಗಲೇ ಒಂದೆರಡು ಸುತ್ತಿನ ಮೀನುಗಾರಿಕೆಯನ್ನು ನಡೆಸಿವೆ.

ಬೇಡಿಕೆ ಈಡೇರದಿದ್ದಲ್ಲಿ ಹೋರಾಟ
ಈ ಬಗ್ಗೆ ಜಿಲ್ಲೆಯ ಎಲ್ಲ ಶಾಸಕರುಗಳಿಗೆ, ಜಿಲ್ಲಾಧಿಕಾರಿ ಹಾಗೂ ಮೀನುಗಾರಿಕೆ ಇಲಾಖಾಧಿಕಾರಿಗಳಲ್ಲಿ ಮನವಿಯನ್ನು ಮಾಡಲಾಗಿದೆ. ಸಾಕಷ್ಟು ಬಾರಿ ಸಭೆಯನ್ನೂ ನಡೆಸಲಾಗಿದೆ. ಇದುವರೆಗೂ ಯಾವ ಸ್ಪಂದನೆಯೂ ಸಿಕ್ಕಿಲ್ಲ. ನಮ್ಮ ಬೇಡಿಕೆಗೆ ಯಾವುದೇ ಸ್ಪಂದನೆ ದೊರೆಯದಿದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು.
ಸುಧಾಕರ ಕುಂದರ್‌,   ಅಧ್ಯಕ್ಷರು, ಮಲ್ಪೆ ಟ್ರಾಲ್‌ಬೋಟ್‌ (ತ್ರಿಸೆವೆಂಟಿ) ಮೀನುಗಾರರ ಸಂಘ

Advertisement

ಅಕ್ರಮ ಮೀನುಗಾರಿಕೆ ಅಲ್ಲ
ಅನಾದಿಕಾಲದಿಂದಲೂ ಬುಲ್‌ಟ್ರಾಲ್‌ ವಿಧಾನದ ಮೂಲಕ ಮೀನು ಹಿಡಿಯುತ್ತಿದ್ದೇವೆೆ. ಈ ರೀತಿಯ ಮೀನುಗಾರಿಕೆ ಅಕ್ರಮ ಮೀನುಗಾರಿಕೆ ಅಲ್ಲ. ಋತು ಆರಂಭದ ಮೊದಲಿಗೆ ಮೀನುಗಳು ನಡುನೀರಿನಲ್ಲಿ ಇರುವುದರಿಂದ ಬುಲ್‌ಟ್ರಾಲ್‌ ಅಲ್ಲದೆ ಬೇರೆ ಯಾವುದೇ ವಿಧಾನದಲ್ಲಿ ಮೀನು ಹಿಡಿಯಲು ಸಾಧ್ಯವಿಲ್ಲ. ಒಂದು ವೇಳೆ ಈ ರೀತಿಯಲ್ಲಿ ಮೀನು ಹಿಡಿಯದಿದ್ದರೆ ಮೀನು ಬೇರೆ ಕಡೆಗೆ ವಲಸೆ ಹೋಗಿ ಯಾರಿಗೂ ಇಲ್ಲದಂತಾಗುತ್ತದೆ.
ಗಣೇಶ್‌ ಸುವರ್ಣ, ಅಧ್ಯಕ್ಷರು, ಮಲ್ಪೆ ಟ್ರಾಲ್‌ಬೋಟ್‌ (ತ್ರಿಸೆವೆಂಟಿ) ತಂಡೇಲರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next