Advertisement

ಎಮ್ಮೆಗೆ 29 ವರ್ಷ ಹಿಂದೆ ಡಿಕ್ಕಿ: ಈಗ ವಾರಂಟ್‌

11:18 PM Jun 29, 2023 | Team Udayavani |

ಲಕ್ನೋ: ಯಾವತ್ತೋ ನಡೆಸಿದ ಅಪಘಾತವು ಬರೋಬ್ಬರಿ 29 ವರ್ಷಗಳ ನಂತರ ಕಾಡಿದರೆ? ಹೌದು. ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 1994ರಲ್ಲಿ ಎಮ್ಮೆಯೊಂದಕ್ಕೆ ಬಸ್‌ ಡಿಕ್ಕಿ ಹೊಡೆಸಿದ್ದ ಪ್ರಕರಣದಲ್ಲಿ ಆರೋಪಿ ಬಸ್‌ ಚಾಲಕ  ಅಚ್ಚನ್‌ (ಈಗ ಇವರಿಗೆ 83 ವಯಸ್ಸು) ಎಂಬವರಿಗೆ ಪೊಲೀಸರು ಈಗ ಬಂಧನ ವಾರಂಟ್‌ ಜಾರಿ ಮಾಡಿದ್ದಾರೆ!

Advertisement

ಉತ್ತರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ  ಅಚ್ಚನ್‌ 1994ರಲ್ಲಿ ಬಸ್‌ ಚಲಾಯಿಸುತ್ತಿದ್ದಾಗ ಎಮ್ಮೆಗೆ ಡಿಕ್ಕಿ ಹೊಡೆದಿದ್ದರು. ಅದರ ಮಾಲೀಕ,  ನಿರ್ಲಕ್ಷ್ಯದ ವಾಹನ ಚಾಲನೆ ಎಂದು ದೂರು ದಾಖಲಿಸಿದ್ದರು. ನಂತರ ಬಸ್ಸನ್ನು ಜಪ್ತಿ ಮಾಡಲಾಗಿತ್ತು. ಕೆಲವು ವರ್ಷಗಳ ಬಳಿಕ  ಅಚ್ಚನ್‌  ನಿವೃತ್ತಿಯಾದರು. ಪ್ರಸ್ತುತ ಅವರಿಗೆ 83  ವರ್ಷ ವಯಸ್ಸಾಗಿದ್ದು, ಪಾರ್ಶ್ವವಾಯು ಉಂಟಾಗಿ ಹಾಸಿಗೆ ಹಿಡಿದಿದ್ದಾರೆ.

ಈಗ ಏಕಾಏಕಿ ಪೊಲೀಸರು ಬಂದು ಅರೆಸ್ಟ್‌ ವಾರಂಟ್‌ ಜಾರಿ ಮಾಡಿದ್ದಾರೆ. ಜು.17ರೊಳಗೆ ಕೋರ್ಟ್‌ಗೆ ಹಾಜರಾಗದಿದ್ದರೆ ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯಿಂದ  ಅಚ್ಚನ್‌ ಕುಟುಂಬ ಆಘಾತಕ್ಕೊಳಗಾಗಿದ್ದು, “ಕೈಯ್ಯಲ್ಲಿ ಒಂದು ಮೊಬೈಲ್‌ ಫೋನ್‌ ಹಿಡಿಯಲೂ ಸಾಧ್ಯವಿಲ್ಲದಂಥ ಈ ಸ್ಥಿತಿಯಲ್ಲಿ ಅವರಿಗೆ ಬಂಧನ ವಾರಂಟ್‌ ಜಾರಿ ಮಾಡಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದಿದ್ದಾರೆ. ಚಾಲಕನ ಕುಟುಂಬ ಸದಸ್ಯರು ವಕೀಲರನ್ನು ಸಂಪರ್ಕಿಸಿದ್ದು, ನಿಗದಿತ ದಿನಾಂಕದಂದು ಬರೇಲಿ ಕೋರ್ಟ್‌ಗೆ ಅಚ್ಚನ್‌ ಹಾಜರಾಗಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next