ಬಲ್ಗೇರಿಯಾ : ಪಶ್ಚಿಮ ಬಲ್ಗೇರಿಯಾದ ಹೆದ್ದಾರಿಯೊಂದರಲ್ಲಿ ಮಂಗಳವಾರ ಬೆಳಗಿನ ಜಾವ ಉತ್ತರ ಮೆಸಿಡೋನಿಯನ್ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿ 12 ಮಕ್ಕಳು ಸೇರಿದಂತೆ ಕನಿಷ್ಠ 45 ಜನರು ಸಾವನ್ನಪಿರುವ ಘಟನೆ ಸಂಭವಿಸಿದೆ.
ಸೋಫಿಯಾದ ಪಶ್ಚಿಮಕ್ಕೆ ಸುಮಾರು 30 ಮೈಲಿ (45 ಕಿಮೀ) ದೂರದಲ್ಲಿರುವ ಸ್ಟ್ರೂಮಾ ಹೆದ್ದಾರಿಯಲ್ಲಿ ಸ್ಥಳೀಯ ಸಮಯ ಸುಮಾರು 2 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಬಲ್ಗೇರಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ನಿದ್ದೆಯ ಮಂಪರಿನಲ್ಲಿದ್ದ ಪ್ರವಾಸಿಗರಿಗೆ ಬಸ್ ಗೆ ಬೆಂಕಿ ಆವರಿಸಿದ್ದೆ ಗೊತ್ತಾಗಲಿಲ್ಲ, ಬೆಂಕಿ ಆವರಿಸಿದ ಬಸ್ ನಿಂದ ಏಳು ಮಂದಿ ಜಿಗಿದಿದ್ದು ಅವರನ್ನು ಸೋಫಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಅಲ್ಲದೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಸ್ಸಿನಲ್ಲಿದ್ದ ದೇಹಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಬೂದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ ಅಲ್ಲದೆ ಅಪಘಾತದ ಕಾರಣ ಅಸ್ಪಷ್ಟವಾಗಿದೆ ಆದರೆ ಬೆಂಕಿ ಹೊತ್ತಿಕೊಳ್ಳುವ ಮೊದಲು ಅಥವಾ ನಂತರ ಬಸ್ ಹೆದ್ದಾರಿ ತಡೆಗೋಡೆಗೆ ಅಪ್ಪಳಿಸಿದೆ ಎಂದು ಬಲ್ಗೇರಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಬಲಿಯಾದವರಲ್ಲಿ ಹೆಚ್ಚಿನವರು ಉತ್ತರ ಮೆಸಿಡೋನಿಯಾದವರು ಎಂದು ಸೋಫಿಯಾದಲ್ಲಿನ ಉತ್ತರ ಮೆಸಿಡೋನಿಯಾ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಸಿದ್ದು ಅಸಂಬದ್ದ ಮಾತು ಪ್ರಜಾಪ್ರಭುತ್ವಕ್ಕೆ ಅವಮಾನ
ಅಪಘಾತದ ಕುರಿತು ಪ್ರತಿಕ್ರೀಯೆ ನೀಡಿರುವ ಬಲ್ಗೇರಿಯಾದ ಹಂಗಾಮಿ ಪ್ರಧಾನಿ ಸ್ಟೀಫನ್ ಯಾನೆವ್ “ನಾವು ಇಲ್ಲಿ ಅಗಾಧ ದುರಂತವನ್ನು ಹೊಂದಿದ್ದೇವೆ.” ಎಂದು ಹೇಳಿದ್ದಾರೆ.