Advertisement
ಪುಟ್ಟಣ್ಣರಂಥ ಹಿರಿಯ ನಿರ್ದೇಶಕರ ಗರಡಿಯಲ್ಲಿ ಪಳಗಿ, ಬೆಳೆದು ಬಂದ ಅವರಿಗೆ ಯಾವುದೇ ಪಾತ್ರವಾಗಲಿ- ಸಲೀಸು. ನಟನೆಯ ಜೊತೆ ಜೊತೆಗೆ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಿರುವ ಅಂಬರೀಶ್ ಕನ್ನಡ ಚಿತ್ರರಂಗದ ಪಾಲಿಗೆ ಇಂದಿನ ಸಂದರ್ಭದಲ್ಲಿ ಹಿರಿಯಣ್ಣ. ಚಿತ್ರರಂಗ, ಕನ್ನಡದ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುವ ನಾಯಕ-ನಟ, ತಮ್ಮ ಕ್ಷೇತ್ರದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವ ಜನಾನುರಾಗಿ. ಅಂಬರೀಷ್ ಅವರ ಸಿನಿ ಬದುಕಿನ 46 ವರ್ಷಗಳ ಒಂದು ವಿಶ್ಲೇಷಣಾತ್ಮಕ ನೋಟ ಇಲ್ಲಿದೆ.
Related Articles
Advertisement
ಆಗ ಅದಕ್ಕೊಂದು ಅರ್ಥ ಇರುತ್ತದೆ ‘ ಎಂಬುದು ಅವರ ನಿಲುವು.“ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವು ಇನ್ನು ಕೆಲವು ತಿಂಗಳಲ್ಲಿ ಬಿಡುಗಡೆಯಾಗುತ್ತದೆ. ಆ ಸಂದರ್ಭದಲ್ಲಿ ಅವರು ಮಾತನಾಡುತ್ತಾರೆ. ಅದರಿಲಿ. ಆದರೆ, ಚಿತ್ರತಂಡದವರು ಹೇಳುವಂತೆ ಅಂಬರೀಶ್ ಬಹಳ ಪ್ರೀತಿಯಿಂದ ತೊಡಗಿಸಿಕೊಂಡಿದ್ದಾರಂತೆ. ಹಗಲು-ರಾತ್ರಿ ಎನ್ನದೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರಂತೆ. ಈ ಚಿತ್ರದಲ್ಲಿ ಅವರು ಎರಡೆರೆಡು ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದು, ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದರಂತೆ. ಯಮ, ಕೆಂಪೇಗೌಡ, ಗೊಂಬೆ ಆಡ್ಸೋನು: ಅಂಬರೀಶ್ ಅವರು ನಟನಾಗಿ ಯಾವುದೇ ಮಹತ್ವಾಕಾಂಕ್ಷೆ ಹೊತ್ತವರೇ ಅಲ್ಲ. ಇಂಥ ಪಾತ್ರ ಒಮ್ಮೆ ಮಾಡಬೇಕು ಅಂತ ಅಂಬಿ ಯಾವತ್ತೂ ಹೇಳಿದವರಲ್ಲ, ನಟನಾಗಿ ಅಷ್ಟೊಂದು ಪ್ಯಾಷಿನೇಟ್ ಆಗಿ ಅವರು ತೊಡಗಿಕೊಂಡವರಲ್ಲ. ತಮ್ಮ ಸಮಯಕ್ಕೆ ಬಂದು, ಬಣ್ಣ ಹಚ್ಚಿ, ಭಾರವಾದ ಕಾಸ್ಟೂಮ್ ಹೊತ್ತು ಅದರ ಹೊರುವಿಕೆಗೆ ಬೈದುಕೊಳ್ಳುತ್ತಾ ಹೊರೆ ಇಳಿಸಿ ಹೊರನಡೆದುಬಿಡುವ ಅವಸರದಲ್ಲೇ ಇರುವ ಅಂಬರೀಶ್ ಅವರು ಇನ್ಯಾವ ಪಾತ್ರದಲ್ಲಿ ನಮ್ಮೆದುರು ಎದುರಾದಾರು? ಹಾಗೆ ನೋಡಿದರೆ, ಕೆಲವು ವರ್ಷಗಳ ಹಿಂದೆ ಅವರು ಊರ ಗೌಡನಾಗಿ “ವೀರ ಪರಂಪರೆ’ ಮಾಡಿದರು. ಯಮನ ಕಾಸ್ಟೂಮ್‌ನಲ್ಲಿ “ಕಠಾರಿ ವೀರ ಸುರಸುಂದರಾಂಗಿ’ ಚಿತ್ರದಲ್ಲಿ ಕಾಣಿಸಿಕೊಂಡರು. ಪಂಕಜ್ ಜೊತೆ “ರಣ’ ಎಂಬ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದರು. ಗೊಂಬೆ ಶಾಸ್ತ್ರ ಹೇಳುವ ವಿಶಿಷ್ಟ ಪಾತ್ರದಲ್ಲಿ “ಡ್ರಾಮಾ’ದಲ್ಲಿ ಎದುರಾದರು. ಫ್ಯಾಮಿಲಿ ಸೆಂಟಿಮೆಂಟ್ ಇರುವ “ಬುಲ್‌ಬುಲ್’ ಮಾಡಿದರು. “ಅಂಬರೀಶ’ ಚಿತ್ರದಲ್ಲಿ ಕೆಂಪೇಗೌಡನಾದರು. ಇತ್ತೀಚಿನಷ್ಟು ವೈವಿಧ್ಯಮಯ, ಪೋಷಕ ಪಾತ್ರಗಳು ಹಿಂದೆಂದೂ ಅಂಬರೀಶ್ ಅವರಿಗೆ ಸಿಕ್ಕಿಯೇ ಇರಲಿಲ್ಲವೆನ್ನಬೇಕು. ಈಗೊಂದೈದು ವರ್ಷಗಳಿಂದಿತ್ತೀಚೆಗೆ ಮೈಚಳಿಬಿಟ್ಟು ಸಾಕಷ್ಟು ಚಿತ್ರಗಳನ್ನು ಒಪ್ಪಿಕೊಂಡ ಅಂಬರೀಶ್, ನಿರ್ದೇಶಕರು ಹೇಳಿದಂತೆ ಅಭಿನಯಿಸಿದರು. ಇನ್ನೂ ಸಾಕಷ್ಟು ಪಾತ್ರವನ್ನು ತಲೆಯಲ್ಲಿಟ್ಟುಕೊಂಡು ನಿರ್ದೇಶಕರು ಅಂಬಿ ಮನೆಯನ್ನು ಸಂಕೋಚದಿಂದ ಪ್ರವೇಶಿಸುತ್ತಿದ್ದರೇನೋ? ಅಂಬರೀಶ್ ಮತ್ತೂಂದು ಇನ್ನಿಂಗ್ಸ್‌ನಲ್ಲಿ ಅಮಿತಾಭ್ ಬಚ್ಚನ್ ರೀತಿ ಬಿಡುವಿಲ್ಲದಷ್ಟು ತೊಡಗಿಕೊಳ್ಳುತ್ತಿದ್ದರೋ ಏನೋ? ಅಷ್ಟರಲ್ಲಿ ಚುನಾವಣೆ ಬಂತು, ಚುನಾವಣೆ ನಂತರ ರಾಜಕೀಯ ಜವಾಬ್ದಾರಿಯೂ ಅರಸಿ ಬಂದವು. ಕಳೆದ ಐದು ವರ್ಷಗಳಲ್ಲಿ ಅವರು ನಟಿಸಿದ್ದು ಬೆರಳಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ. “ದೊಡ್ಮನೆ ಹುಡುಗ’ ಮತ್ತು “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರಗಳನ್ನು ಬಿಟ್ಟರೆ, ಅವರು ನಟಿಸಿದ್ದು ಅತಿಥಿ ಪಾತ್ರಗಳಲ್ಲೇ ಹೆಚ್ಚು. “ಅಂಬರೀಶ’, “ಹ್ಯಾಪಿ ಬರ್ಥ್ಡೇ’, “ರಾಜಸಿಂಹ’, “ಕುರುಕ್ಷೇತ್ರ’ ಮುಂತಾದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು “ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದ ನಂತರವೇನು ಎಂದು ಗೊತ್ತಿಲ್ಲ. ಏಕೆಂದರೆ, ಅಂಬರೀಶ್ ಮತ್ತೆ ಚುನಾವಣೆ ಎದುರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವುದು, ಈ ಚುನಾವಣೆಯ ಮೇಲೆ ಅವಲಂಬಿತವಾಗಿದೆ.