Advertisement

ಜೀವಕ್ಕೆ ಹಾನಿ ಆಗುವಂಥ ಕಟ್ಟಡಗಳಿದ್ರೆ ಬಿಬಿಎಂಪಿಯಿಂದಲೇ ತೆರವು

10:42 AM Oct 22, 2021 | Team Udayavani |

ಬೆಂಗಳೂರು: ಬೇರೆ ಕಟ್ಟಡಗಳಿಗೆ ಹಾನಿ ಅಥವಾ ಜೀವಕ್ಕೆ ತೊಂದರೆ ಆಗುವಂತಹ ಕಟ್ಟಗಳಿದ್ದರೆ ಅವುಗಳನ್ನು ಬಿಬಿಎಂಪಿಯಿಂದಲೇ ತೆರವು ಮಾಡಲಾಗುವುದು ಎಂದು ತಿಳಿಸಿದರು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ತಳಪಾಯ ಗಟ್ಟಿಯಾಗಿರದ ಮನೆಗಳು ಹಾಗೂ ಗುಣಮಟ್ಟದ ವಸ್ತುಗಳಿಂದ ಬಳಸದೆ ನಿರ್ಮಿಸಿರುವ ಕಟ್ಟಡಗಳು ಕುಸಿಯುತ್ತಿವೆ. ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ವಲಯವಾರು ಇಂತಹ ಕಟ್ಟಗಳನ್ನು ಗುರುತಿಸಿ ವಾಸವಿರುವ ಕುಟುಂಬಗಳನ್ನು ಖಾಲಿ ಮಾಡಿಸಿ, ಮಾಲೀಕರೇ ಕಟ್ಟಡ ತೆರವು ಮಾಡುವಂತೆ ಸೂಚಿಸಲಾಗುತ್ತಿದೆ.

ಒಂದು ವೇಳೆ ಬೇರೆ ಕಟ್ಟಡಗಳಿಗೆ ಹಾನಿ ಅಥವಾ ಜೀವಕ್ಕೆ ತೊಂದರೆ ಆಗುವಂತಹ ಕಟ್ಟಗಳಿದ್ದರೆ ಅವುಗಳನ್ನು ಪಾಲಿಕೆಯಿಂದಲೇ ತೆರವು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ರಾಜ್ಯ ಸರ್ಕಾರ ಮಾರ್ಗಸೂಚಿಯಂತೆ ಪ್ರಾಥಮಿಕ ಶಾಲೆ ಆರಂಭಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಾಥಮಿಕ ಶಾಲೆ ಆರಂಭಕ್ಕೆ ಶಿಕ್ಷಣ ಇಲಾಖೆಯಿಂದ ಹೊರಡಿಸಲಾದ ಎಲ್ಲ ನಿಯಮಗಳನ್ನು ಪಾಲಿಕೆಯಿಂದ ಪಾಲಿಸಲಾಗುತ್ತದೆ. ಅದಕ್ಕಾಗಿ ಶಾಲೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ನಗರದಲ್ಲಿ ಸ್ಮಾರ್ಟ್‌ ಸಿಟಿ ಲಿ.

ಇದನ್ನೂ ಓದಿ:- ಕಟ್ಟಡ ಕುಸಿತ ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು

ನಿರ್ಮಿಸಿದ ರಸ್ತೆಗಳಲ್ಲಿ ಕೆಲವು ಕಡೆ ಅಂತಿಮ (ಮೇಲ್ಪದರ) ಡಾಂಬರೀಕರಣ ಮಾಡಿಲ್ಲ. ಕೆಲವು ರಸ್ತೆಗಳಲ್ಲಿ ಶುದ್ಧ ಕುಡಿಯುವ ನೀರು, ಒಳಚರಂಡಿ ಕೊಳವೆಗಳನ್ನು ಹಳೆಯ ಪೈಪ್‌ಗ್ಳಿಗೆ ಸಂಪರ್ಕ ಮಾಡಿಲ್ಲ. ಹೀಗಾಗಿ, ಮಳೆಗಾಲದ ವೇಳೆ ಹೆಚ್ಚಿನ ಸಮಸ್ಯೆ ಆಗುತ್ತಿದೆ. ಇದನ್ನು ದುರಸ್ತಿ ಮಾಡಲು ಪತ್ರ ವ್ಯವಹಾರ ಮಾಡಲಾಗಿದೆ.

Advertisement

ವೃಷಭಾವತಿ ನದಿ ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಸಮಯ ಬದ್ಧವಾಗಿ ಮಾಡಬೇಕಿತ್ತು. ಆದರೆ, ಹೆಚ್ಚು ವಿಳಂಬ ಆಗಿದ್ದು 15 ದಿನಗಳಲ್ಲಿ ಮುಚ್ಚಿರುವ ರಸ್ತೆಯನ್ನು ತೆರೆದು ವಾಹನ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಬಿಬಿಎಂಪಿ ಮುಂಚೂಣಿಯಲ್ಲಿದೆ ದೇಶದ ಇಡೀ ಮಹಾನಗರಗಳಿಗೆ ಹೋಲಿಕೆ ಮಾಡಿದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ನೀಡಿಕೆ ಅಭಿಯಾನ ಉತ್ತಮವಾಗಿದೆ.

ಶೇ.85 ಮಂದಿಗೆ ಮೊದಲನೇ ಡೋಸ್‌ ನೀಡಲಾಗಿದೆ. ಈ ಪೈಕಿ ಶೇ.52 ಜನರು ಎರಡೂ ಡೋಸ್‌ ಗಳನ್ನು ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆಯ ಎರಡು ಡೋಸ್‌ಗಳ ಅಂತರ 82 ದಿನವಾದ್ದರಿಂದ 2ನೇ ಡೋಸ್‌ ಲಸಿಕೆ ನೀಡಿಕೆ ಗುರಿ ತಲುವುದು ಸ್ವಲ್ಪ ವಿಳಂಬವಾಗುತ್ತಿದೆ ಎಂದು ಗೌರವ್‌ಗುಪ್ತ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next