Advertisement

Watch Video: ಜಸ್ಟ್ ಮಿಸ್…ಬಿಲ್ಡಿಂಗ್ ಡೆಮಾಲಿಷನ್ ಯಡವಟ್ಟು…ಉಳಿಯಿತು ಹಲವು ಜನರ ಪ್ರಾಣ!

03:25 PM Apr 11, 2023 | Team Udayavani |

ನವದೆಹಲಿ: ಕಟ್ಟಡವನ್ನು ನಿರ್ಮಿಸುವುದು ಒಂದು ದೊಡ್ಡ ಕಾರ್ಯವಾಗಿದೆ. ಒಂದು ವೇಳೆ ಅದು ಗಗನಚುಂಬಿ ಅಥವಾ ಬಹುಮಹಡಿ ಕಟ್ಟಡವಾಗಿದ್ದರೆ, ಅದನ್ನು ನಿರ್ಮಿಸಲು ದೀರ್ಘಕಾಲ ಹಾಗೂ ದೊಡ್ಡ ಮೊತ್ತದ ಹಣವನ್ನು ವ್ಯಯಿಸಲಾಗಿರುತ್ತದೆ. ಇವೆಲ್ಲದರ ನಡುವೆಯೂ ಕೆಲವೊಮ್ಮೆ ದುರ್ಬಲ ಅಡಿಪಾಯ, ಕಾನೂನು ಚೌಕಟ್ಟು ಮೀರಿ ನಿರ್ಮಿಸಿರುವ ಅಂತಹ ಬೃಹತ್ ಕಟ್ಟಡಗಳನ್ನು ನೆಲಸಮ ಮಾಡಿರುವ ಘಟನೆಗಳ ಬಗ್ಗೆ ಓದಿದ್ದೀರಿ.

Advertisement

ಇದನ್ನೂ ಓದಿ:Karnataka Polls: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಕೆಎಸ್ ಈಶ್ವರಪ್ಪ

ಇಲ್ಲಿರುವ ವಿಡಿಯೋದಲ್ಲಿ ಗಗನಚುಂಬಿ ಕಟ್ಟಡವನ್ನು ನೆಲಸಮಗೊಳಿಸುತ್ತಿರುವುದು ಸೆರೆಯಾಗಿದೆ. ಆದರೆ ಈ ಬೃಹತ್ ಕಟ್ಟಡವನ್ನು ವ್ಯವಸ್ಥಿತವಾಗಿ ನೆಲಸಮಗೊಳಿಸಿಲ್ಲ ಎಂಬುದು ವಿಡಿಯೋದಲ್ಲಿ ದಾಖಲಾದ ಕ್ಲಿಪ್ಪಿಂಗ್ಸ್ ಸಾಕ್ಷಿಯಾಗಿದೆ. ಬೃಹತ್ ಕಟ್ಟಡವನ್ನು ನೆಲಸಮಗೊಳಿಸುತ್ತಿರುವ ದೃಶ್ಯವನ್ನು ಕೆಲವು ಮಂದಿ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದರು. ಆಗ ಧ್ವಂಸಗೊಳಿಸಿದ ಕಟ್ಟಡ ದೂರದಲ್ಲಿ ನಿಂತಿದ್ದ ಜನರತ್ತಲೇ ಬೀಳುತ್ತಿರುವುದನ್ನು ಗಮನಿಸಿ ದೂರ ಓಡಿದ್ದು, ಒಂದು ವೇಳೆ ಅವರು ಅಲ್ಲೇ ನಿಂತಿದ್ದರೆ ಅವರೆಲ್ಲರೂ ಪ್ರಾಣಕಳೆದುಕೊಳ್ಳಬೇಕಾಗಿತ್ತು ಎಂದು ವರದಿ ತಿಳಿಸಿದೆ.

ಸ್ಫೋಟಕ ಅಥವಾ ವಿವಿಧ ವಿಧಾನಗಳನ್ನು ಬಳಸಿ, ಯಂತ್ರಗಳ ಮೂಲಕ ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತದೆ. ಗಗನಚುಂಬಿ ಕಟ್ಟಡಗಳನ್ನು ನೆಲಸಮಗೊಳಿಸಲು ವೃತ್ತಿಪರರು ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಕೆಲವೊಮ್ಮೆ ವೃತ್ತಿಪರತೆ ಇಲ್ಲದಿದ್ದರೆ ಏನಾಗಲಿದೆ ಎಂಬುದು ಈ ವಿಡಿಯೋದಲ್ಲಿನ ಘಟನೆಯೇ ಸಾಕ್ಷಿಯಾಗಿದೆ ಎಂದು ವರದಿ ವಿವರಿಸಿದೆ.ಈ ವಿಡಿಯೋ ಯಾವ ದೇಶದ್ದು ಎಂಬ ವಿವರ ವರದಿಯಲ್ಲಿ ಉಲ್ಲೇಖವಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next