Advertisement

ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ

06:53 AM Jun 26, 2020 | Lakshmi GovindaRaj |

ಬಂಗಾರಪೇಟೆ: ಮಾನದಂಡ ಉಲ್ಲಂಘಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ. ಹೀಗಾಗಿ ಕೆಲಸ ಸ್ಥಗಿತಗೊಳಿಸಲು ಮುಂದಾದ ಪುರಸಭೆ ಅಧಿಕಾರಿಗಳು ಮತ್ತು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌)  ಆಡಳಿತ ಮಂಡಳಿ ನಡುವೆ ವಾಗ್ವಾದ ನಡೆಯಿತು. ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಟಿಎಪಿಸಿಎಂಎಸ್‌, ಗೋಡೌನ್‌ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಿಸುತ್ತಿದೆ.

Advertisement

ಆದರೆ, ಪುರಸಭೆಯಿಂದ 4 ಅಂಗಡಿಗಳಿಗೆ ಲೈಸನ್ಸ್‌  ಪಡೆದು, ಅಳತೆಗೂ ಮೀರಿ 12 ಮಳಿಗೆ ನಿರ್ಮಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ವಿ.ಶ್ರೀಧರ್‌ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಟಿಎಪಿಸಿಎಂಎಸ್‌ ನಿರ್ದೇಶಕ ಎಂ.ಎಸ್‌.ಆನಂದ್‌, ಅಧ್ಯಕ್ಷ ಮಾರ್ಕಂಡೇಯಗೌಡ ನೇತೃತ್ವದ  ಸದಸ್ಯರ ಸಮಿತಿ ತೀರ್ಮಾನದಂತೆ ಕಟ್ಟಡ ನಿರ್ಮಿಸಲಾಗುತ್ತಿದೆ. ಪುರಸಭೆಗೆ ಎಲ್ಲಾ ಶುಲ್ಕ ಕಟ್ಟಲಾಗಿದೆ.

ಆದರೂ ರಾಜಕೀಯ ಒತ್ತಡಗಳಿಗೆ ಮಣಿದು ತೊಂದರೆ ನೀಡುತ್ತಿದ್ದೀರಿ ಎಂದು ಗಂಭೀರ ಆರೋಪ ಮಾಡಿದರು. ಪುರಸಭೆ  ಅಧಿಕಾರಿಗಳು ಸಬ್‌ ಇನ್ಸ್‌ಪೆಕ್ಟರ್‌ ಆರ್‌. ಜಗದೀಶರೆಡ್ಡಿ ಅವರನ್ನು ಕರೆಯಿಸಿ, ಕೆಲಸ ನಿಲ್ಲಿಸಲು ಹೇಳಿದರು. ಆದರೆ, ಕೆಲಸ ನಿಲ್ಲಿಸಲು ಸಾಧ್ಯವಿಲ್ಲ. ಈ ಸಂಬಂಧ ಆದೇಶ ಇದ್ದರೆ ಕೊಡಿ ಎಂದು ಆನಂದ್‌ ಕೇಳಿದಾಗ ಮಾತಿನ ಚಕಮಕಿ  ನಡೆಯಿತು.

ಈ ವೇಳೆ ಟಿಎಪಿಸಿಎಂಎಸ್‌, ಪೊಲೀಸ್‌ ಇಲಾಖೆಗೆ ನೋಟಿಸ್‌ ಜಾರಿ ಮಾಡಿರುವ ಮುಖ್ಯಾಧಿಕಾರಿ, ಮುಂದಿನ ಆದೇಶದವರೆಗೂ ಕಟ್ಟಡ ಕಾಮಗಾರಿ ನಡೆಯದಂತೆ ನೋಡಿಕೊಳ್ಳುವಂತೆ ತಿಳಿಸಿದರು. ಟಿಎಪಿಸಿಎಂಎಸ್‌ ಸಿಇಒ ಸಂಬಂಧಪಟ್ಟ ದಾಖಲೆಗಳನ್ನು ಪುರಸಭೆಗೆ ನೀಡುವಂತೆ ತಿಳಿಸಿದ ನಂತರ ಕಾಮಗಾರಿ ನಿಲ್ಲಿಸಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next