ಉತ್ತರಾಖಂಡ: ಚಮೋಲಿ ಜಿಲ್ಲೆಯ ಜೋಶಿಮಠದ ಬಳಿಯ ಹೆಲಾಂಗ್‌ನಲ್ಲಿ ಕಟ್ಟಡವೊಂದು ಮಂಗಳವಾರ ತಡ ರಾತ್ರಿ ಕುಸಿದು ಬಿದ್ದ ಪರಿಣಾಮ ಮೂವರನ್ನು ರಕ್ಷಿಸಲಾಗಿದ್ದು, ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ದೌಡಾಯಿಸಿದ್ದು ಕಟ್ಟಡದ ಅಡಿಯಲ್ಲಿ ಸಿಲುಕಿರುವ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಮಾಹಿತಿ ಅಧಿಕಾರಿ ರವೀಂದ್ರ ನೇಗಿ ತಿಳಿಸಿದ್ದಾರೆ.
ಕಟ್ಟಡದೊಳಗೆ ಇನ್ನೂ ನಾಲ್ವರು ಸಿಲುಕಿರುವ ಶಂಕೆ ಇದೆ ಎನ್ನಲಾಗಿದ್ದು ಆದರೆ ಅಧಿಕಾರಿಗಳು ಇದನ್ನು ಇನ್ನೂ ಖಚಿತಪಡಿಸಿಲ್ಲ.
ಮಂಗಳವಾರ ತಡರಾತ್ರಿ ಪಿಪಲ್ಕೋಟಿ ಮತ್ತು ಜೋಶಿಮಠ ನಡುವಿನ ಬದರಿನಾಥ ಹೆದ್ದಾರಿಯ ಹೆಲಾಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪ್ರಕಾರ ಅಲಕನಂದಾ ನದಿ ದಡದಲ್ಲಿರುವ ಕ್ರಷರ್ ಘಟಕದ ಬಳಿ ಎರಡು ಅಂತಸ್ತಿನ ಮನೆ ನಿರ್ಮಿಸಲಾಗಿದೆ. ಇದರಲ್ಲಿ ಕ್ರಷರ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ನೆಲೆಸಿದ್ದರು ಎನ್ನಲಾಗಿದೆ ಮಂಗಳವಾರ ರಾತ್ರಿ ಮನೆ ಕುಸಿದು ಬಿದ್ದಿದೆ. ರಕ್ಷಣಾ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: Delhi: ಮುಂದುವರೆದ ಮಳೆಯ ಅಬ್ಬರ… ಮತ್ತೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನೆ