ಶಿಮ್ಲಾ/ಹೊಸದಿಲ್ಲಿ: ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಭಾರೀ ಮಳೆಯಿಂ ದಾಗಿ ಬಹುಮಹಡಿ ಕಟ್ಟಡ ಕುಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ ಸೋಮವಾರ 14ಕ್ಕೇರಿದೆ. ಈ ಪೈಕಿ 13 ಮಂದಿ ಯೋಧರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ 16 ಸೇನಾ ಸಿಬಂದಿ ಸೇರಿ ದಂತೆ 28 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿ ರುವ ಸಾಧ್ಯತೆಯಿದ್ದು, ಶೋಧ ಕಾರ್ಯ ಮುಂದುವರಿದಿದೆ. 13 ಯೋಧರು, ಒಬ್ಬ ನಾಗರಿಕನ ಮೃತದೇಹ ಹೊರತೆಗೆಯ ಲಾಗಿದೆ. ಉತ್ತರಾಖಂಡಕ್ಕೆ ತೆರಳುತ್ತಿದ್ದ ಯೋಧರ ಕುಟುಂಬಗಳು ರವಿವಾರ ಈ ಕಟ್ಟಡ ದಲ್ಲಿದ್ದ ರೆಸ್ಟಾರೆಂಟ್‌ಗೆ ಭೋಜನ ಕ್ಕೆಂದು ತೆರಳಿದ್ದರು. ಅಷ್ಟರಲ್ಲಿ ಕಟ್ಟಡ ಕುಸಿದ ಪರಿಣಾಮ ಸಾವು ನೋವುಗಳು ಹೆಚ್ಚಾ ದವು ಎಂದು ಪೊಲೀಸರು ಹೇಳಿದ್ದಾರೆ.
ಮುಂದುವರಿದ ಪ್ರವಾಹ: ಅಸ್ಸಾಂ, ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯ ಗಳಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ. ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್ ಜಿಲ್ಲೆಯ ಎರಡು ನದಿಗಳಲ್ಲಿ ಪ್ರವಾಹ ಉಂ ಟಾಗಿ, 1.14 ಲಕ್ಷ ಮಂದಿ ನಿರ್ವಸಿತರಾಗಿ ದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಸೋಮವಾರ ಅಸ್ಸಾಂ ಸಿಎಂ ಸೊನೊವಾಲ್‌ಗೆ ದೂರವಾಣಿ ಕರೆ ಮಾಡಿ, ಪ್ರವಾಹ ಸ್ಥಿತಿ ಬಗ್ಗೆ ವಿವರ ಪಡೆದಿದ್ದಾರೆ.
67ಕ್ಕೇರಿಕೆ: ಪ್ರವಾಹ ಪೀಡಿತ ನೇಪಾಲದಲ್ಲಿ ಜನಜೀವನ ದುಸ್ತರವಾಗಿದ್ದು, ಮಳೆ ಸಂಬಂಧಿ ಘಟನೆಗಳಿಗೆ ಬಲಿಯಾದವರ ಸಂಖ್ಯೆ ಸೋಮವಾರ 67ಕ್ಕೇರಿಕೆಯಾಗಿದೆ. ನೀರಿನಿಂದ ಹರಡುವ ರೋಗಗಳ ತಡೆಗೆ ಹಾಗೂ ಸಂತ್ರಸ್ತರಿಗೆ ಸೂಕ್ತ ಆರೋಗ್ಯ ಸೇವೆ ಒದಗಿಸಲು ನೆರವು ನೀಡುವಂತೆ ಅಂತಾ ರಾಷ್ಟ್ರೀಯ ಸಮುದಾಯಕ್ಕೆ ನೇಪಾಲ ಸರಕಾರ ಮನವಿ ಮಾಡಿದೆ.
ಪಾಕ್‌ನಲ್ಲಿ 23 ಸಾವು: ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ ಉಂಟಾದ ದಿಢೀರ್ ಪ್ರವಾಹಕ್ಕೆ ಕನಿಷ್ಠ 23 ಮಂದಿ ಬಲಿ ಯಾಗಿದ್ದಾರೆ. ರವಿವಾರ ರಾತ್ರಿ ನಿರಂತರ ಮಳೆಯಿಂದಾಗಿ ಏಕಾಏಕಿ ಮೇಘ ಸ್ಫೋಟ ಸಂಭವಿಸಿದೆ.