Advertisement

ಸದೃಢ ದೇಶ ನಿರ್ಮಾಣಕ್ಕೆ ಯುವಶಕ್ತಿ ಅವಶ್ಯ

03:07 PM Jun 01, 2018 | |

ಸಂಡೂರು: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಯಾವುದೇ ಕಾರಣಕ್ಕೂ ತಂಬಾಕು ಸೇವನೆ ಮಾಡಬಾರದು ಎಂದು ಜೆಎಂಎಫ್‌ಸಿ ನ್ಯಾಯಾಧೀಶರಾದ ಆರ್‌.ಮಂಜುನಾಥ್‌ ಯುವಕರಿಗೆ ಕಿವಿಮಾತು ಹೇಳಿದರು.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಯಸ್ಸಾದವರು ತಂಬಾಕಿನಿಂದ ಮುಕ್ತರಾಗುವುದಕ್ಕಿಂತ ಪ್ರಮುಖವಾಗಿ ಯುವಕರು ತಂಬಾಕು
ಸೇವನೆ ಕಲಿತರೆ ಇಡೀ ದೇಶಕ್ಕೆ ಯುವಶಕ್ತಿ ಕಳೆದುಕೊಂಡಂತಾಗುತ್ತದೆ. ಆದ್ದರಿಂದ ಅವರನ್ನು ತಂಬಾಕು ಮುಕ್ತರನ್ನಾಗಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದರು.

ಹದಿಹರಿಯದ ಯುವಕರು ಇಂದು ಬಹಳಷ್ಟು ತಂಬಾಕು ವ್ಯಸನಿಗಳಾಗುತ್ತಿದ್ದಾರೆ. ಇದರಿಂದ ದುಡಿಯುವ ಶಕ್ತಿ
ನಾಶವಾದಂತಾಗುತ್ತದೆ. ಅಲ್ಲದೇ ಕುಟುಂಬ ಮತ್ತು ದೇಶಕ್ಕೂ ಕೂಡ ದೊಡ್ಡ ನಷ್ಟವಾಗಿದೆ. ಆದ್ದರಿಂದ ಅವರನ್ನು ಸರಿದಾರಿಗೆ ತರುವಂತಹ ಎಲ್ಲಾ ರೀತಿಯ ಪ್ರಯತ್ನಗಳನ್ನು ನಾವುಗಳು ಮಾಡಬೇಕಾಗಿದೆ ಎಂದರು. 

ಪ್ರಮುಖವಾಗಿ ತಾಯಂದಿರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಕರು, ಆರೋಗ್ಯ ಇಲಾಖೆಯವರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿ ತಂಬಾಕು ಮುಕ್ತ ಮಾಡುವ ಕೇಂದ್ರಗಳಿಗೆ ಸೇರಿಸಿ ಅವರನ್ನು ದುಷ್ಟ ವ್ಯಸನಗಳಿಂದ ಹೊರ ಬರುವಂತೆ ನೋಡಿಕೊಳ್ಳಬೇಕು. ಸದೃಢ ದೇಶ ಕಟ್ಟಬೇಕಾದರೆ ಆರೋಗ್ಯವಂತ ಯುವಕರು ಅತಿ ಅವಶ್ಯಕವಾಗಿದೆ. ಪ್ರತಿಯೊಬ್ಬರೂ ಸಹ ಇದರಲ್ಲಿ ಕೈ ಜೋಡಿಸಿದಾಗ ಮಾತ್ರ ಸಾಧ್ಯ. ಎಲ್ಲರೂ ಇದರ ವಿರುದ್ಧ ಹೋರಾಡೋಣ ಎಂದು ಕರೆ ನೀಡಿದರು.

ಉಪನ್ಯಾಸಕ ವಕೀಲ್‌ ಡಿ.ನಾಗರಾಜ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಬಿ.ನಾರಾಯಣಾಚಾರಿ, ವೈದ್ಯ ಡಾ| ಕಿರಣ್‌ಕುಮಾರ್‌, ಗ್ರೇಡ್‌-2 ತಹಶೀಲ್ದಾರ್‌ ಶಿವಕುಮಾರ್‌, ವಕೀಲರಾದ ಎಚ್‌. ಕುಮಾರಸ್ವಾಮಿ, ಡಾ|ಎಚ್‌.ಗೋಪಾಲ್‌ ರಾವ್‌, ಇ.ಮಹಾರುದ್ರ, ಎಂ.ಅಂಜಿನಪ್ಪ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next