Advertisement
ಆಧುನಿಕತೆ ಬೆಳೆದಂತೆ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆಯುತ್ತಿದ್ದಾರೆ. ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ತಮ್ಮ ಪ್ರತಿಭೆಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲುತ್ತಿದ್ದಾರೆ. ವಿಜ್ಞಾನ ಕ್ಷೇತ್ರದ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ಹಲವಾರು ಮಹಿಳೆಯರು ತಮ್ಮ ವೃತ್ತಿ ಬದುಕಿನ ಜತೆ ಜತೆಗೆ ಕುಟುಂಬ ನಿರ್ವಹಣೆಯನ್ನೂ ಸರಿದೂಗಿಸಿಕೊಂಡು ಹೋಗುವ ಮೂಲಕ ಯಶಸ್ಸು ಗಳಿಸಿದ್ದಾರೆ. ಕುಟುಂಬ ವ್ಯವಸ್ಥೆ ಭಾರತ ದೇಶಕ್ಕೆ ಒಂದು ಕೊಡುಗೆ. ಕುಟುಂಬವನ್ನು ಮಹಿಳೆ ಹೊರತು ಮತ್ತೂಬ್ಬರೂ ನಿರ್ವಹಿಸಲು ಸಾಧ್ಯವಿಲ್ಲ. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೂ ಆಕೆಯ ಮೇಲಿನ ದೌರ್ಜನ್ಯ ಮಾತ್ರ ನಿಂತಿಲ್ಲ. ಇದನ್ನು ತಡೆಗಟ್ಟಬೇಕಾದರೆ ಪ್ರತಿಯೊಬ್ಬ ಮಹಿಳೆಯರೂ ಸಂಘಟಿತರಾಗಬೇಕು.
ಭಾರತ ಸಶಕ್ತ, ಸಂಪದ್ಭರಿತ ರಾಷ್ಟ್ರವಾಗಿ ಮೆರೆಯಲು ಪುರುಷರಷ್ಟೇ ಮಹಿಳೆಯರ ಕೊಡುಗೆಯು ಅವಶ್ಯ. ಹಾಗಾಗಿ ಮಹಿಳೆಯರು ಕೇವಲ ಅಡುಗೆ ಕೋಣೆಯಲ್ಲಿ ಬಂಧಿಯಾಗಿರದೆ, ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿ ಕೊಳ್ಳಬೇಕು. ಮಹಿಳೆಯರು ಧೈರ್ಯದಿಂದ ಸಾಮಾಜಿಕ ಚಟುವಟಿಗಳಲ್ಲಿ ಮುಂದುವರಿಯಲು ಹೋರಾಟ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ. ಆ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗವುದು ಉತ್ತಮ. ಸ್ತ್ರೀಯರು ಸಂಘಟಿತರಾದಾಗ ಮಾತ್ರ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಶೋಷಣೆ ವಿರುದ್ಧ ಹೋರಾಡಲು ಸಾಧ್ಯ. ಆದ್ದರಿಂದ ಅವರು ಕೆಚ್ಚು- ಸ್ವಾಭಿಮಾನವನ್ನು ಹೋರಾಟಕ್ಕೆ ಬಳಸಿಕೊಳ್ಳಬೇಕು. ಅಂತಃಶಕ್ತಿ ಬಲಗೊಳಿಸಿ
ಸೃಜನಶೀಲ ಗುಣ, ವೈಜ್ಞಾನಿಕ ಚಿಂತನೆಗಳನ್ನು ಅಳವಡಿಸಿಕೊಂಡು, ಅಂತರಾಳದಲ್ಲಿರುವ ಅಂತಃಶಕ್ತಿಯನ್ನು ಬಲಗೊಳಿಸಲು ಸ್ತ್ರೀಯರು ಸಂಘಟನೆಗಳಲ್ಲಿ ಭಾಗಿಗಳಾಗುವುದು ಮುಖ್ಯ. ಆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರುವುದೇ ನಿಜವಾದ ಮಹಿಳಾ ಸಶಕ್ತೀಕರಣ.
Related Articles
ಮಹಿಳೆಯರು ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಂಘಟಿತರಾಗಿ ಸ್ವೋದ್ಯೋಗ ಪ್ರಾರಂಭಿಸುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಪೂರಕ ಚಟುವಟಿಕೆಗಳನ್ನು ಕೈಗೊಳ್ಳುವುದು ದೇಶದ ಪ್ರಗತಿಗೆ ಸಹಕಾರಿ.
Advertisement
ಜಿಕೆ