Advertisement

ಅಟ್ರಾಸಿಟಿ ಕೇಸ್‌ ತನಿಖೆಗೆ ಪ್ರತ್ಯೇಕ ಠಾಣೆ ನಿರ್ಮಿಸಿ

03:56 PM Mar 22, 2022 | Team Udayavani |

ಕೋಲಾರ: ಜಿಲ್ಲೆಯಲ್ಲಿನ ಪರಿಶಿಷ್ಟ ಜನಾಂಗದವರು ಜಾತಿ ನಿಂದನೆ, ದೌರ್ಜನ್ಯ ಮತ್ತು ಭೂ ಕಬಳಿಕೆ ಪ್ರಕರಣ ಗಳಲ್ಲಿ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಗ್ರಾಮಾಂತರ ಠಾಣೆಯ ನೂತನ ಕಚೇರಿ ಕಟ್ಟಡದ ಶಂಕು ಸ್ಥಾಪನೆಗೆ ಆಗಮಿಸಿದ್ದ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಮನವಿ ಪತ್ರವನ್ನು ನೀಡಿ ಭಾರತೀಯ ದಲಿತ ಸೇನೆಯ ರಾಜ್ಯಾಧ್ಯಕ್ಷ ಎಂ. ನಾರಾಯಣಸ್ವಾಮಿ ಒತ್ತಾಯಿಸಿದರು.

Advertisement

ಮನವಿ ಪತ್ರವನ್ನು ನೀಡಿ ಮಾತನಾಡಿದ ಎಂ.ನಾರಾ ಯಣಸ್ವಾಮಿ, ರಾಜ್ಯಾದ್ಯಂತ ಪರಿಶಿಷ್ಟರ ವಿರುದ್ಧ ನಡೆ ಯುತ್ತಿರುವ ದೌರ್ಜನ್ಯ ಪ್ರಕರಣಗಳ ವಿಚಾರಣೆಗಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಠಾಣೆಯನ್ನು ತೆರೆಯ ಬೇಕು ಅಥವಾ ಈಗಿರುವ ಜಿಲ್ಲೆಯಲ್ಲಿನ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಇಂತಹ ಪ್ರಕರಣಗಳಲ್ಲಿ ನೇರವಾಗಿ ಎಫ್ಐಆರ್‌ ದಾಖ ಲಿಸಿ ತನಿಖೆ ನಡೆಸಿ ಕೋರ್ಟಿಗೆ ಚಾರ್ಜ್‌ ಶೀಟ್‌ ಸಲ್ಲಿಸುವ ಅಧಿಕಾರವನ್ನು ನೀಡಬೇಕು ಎಂದರು.

ಠಾಣೆಗಳಲ್ಲಿ ದೂರುಗಳು ನೀಡಿದ ತಕ್ಷಣ ಪರಿಶಿಷ್ಠರಿಗೆ ದೂರು ಸ್ವೀಕೃತಿ ರಸೀದಿಗಳನ್ನು ನೀಡಬೇಕು. ಜಿಲ್ಲೆಯಲ್ಲಿ ಅಟ್ರಾಸಿಟಿ ಸಭೆಗಳನ್ನು ಸರ್ಕಾರ ಸೂಚಿಸಿರುವಂತೆ ಪ್ರತಿ ತಿಂಗಳು ಕಡ್ಡಾಯವಾಗಿ ನಡೆಸಬೇಕು. ಇಂತಹ ಸಭೆಗಳನ್ನು ನಿಗದಿತ ಅವಧಿಯಲ್ಲಿ ನಡೆಸದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ನೇಮಕ ಮಾಡಿರುವ ಅಟ್ರಾಸಿಟಿ ಸಮಿತಿಯಲ್ಲಿನ ಸಂಘ ಸಂಸ್ಥೆಗಳ ಸದಸ್ಯರ ಸಂಖ್ಯೆಯನ್ನು ಹೆಚ್ಚು ಮಾಡಬೇಕು. ಪ್ರತಿ 2 ವರ್ಷಕ್ಕೊಮ್ಮೆ ಇಂತಹ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಬದಲಾಯಿಸಿ ಹೊಸಬರಿಗೆ ಅವಕಾಶವನ್ನು ಮಾಡಿಕೊಡಬೇಕು. ಈ ಸಭೆಯಲ್ಲಿ ತೆಗೆದು ಕೊಂಡಂತಹ ನಿರ್ಣಯಗಳಿಗೆ ಸಂಬಂಧಪಟ್ಟಂತೆ ಮುಂದಿನ ಸಭೆಯ ದಿನಾಂಕದ ಒಳಗೆ ಅನುಷ್ಠಾನಗೊಳಿ ಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೋರಿದರು.

ಕೋಲಾರದ ಹಳೆ ಬಸ್‌ ನಿಲ್ದಾಣದ ಪಕ್ಕ ದಲ್ಲಿರುವ ನಗರಸಭೆಯ ಖಾಲಿ ಜಾಗದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ ಮಾದರಿಯಲ್ಲಿ ದಲಿತ ಸಂಘಟನೆಗಳು ನಡೆಸುವ ಹೋರಾಟಕ್ಕೆ ಹಾಗೂ ಧರಣಿಗೆ ಕಾಯಂ ಸ್ಥಳಾವಕಾಶವನ್ನು ಕಲ್ಪಿಸುವಂತೆ ರಾಜ್ಯ ಗೃಹ ಸಚಿವರಲ್ಲಿ ಕೋರಿ ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಿ ತಕ್ಷಣ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳ ಕೈಗೊಳ್ಳುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next