ಮಂಗಳೂರು: ವಿದ್ಯಾರ್ಥಿಗಳು ಅಂಕ ಮತ್ತು ಪದವಿ ಪಡೆಯುವ ಜತೆಗೆ ಶಿಕ್ಷಣದೊಂದಿಗೆ ಶಿಸ್ತು, ಪರಿಶ್ರಮ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡರೆ ಮಾತ್ರ ಜೀವನದಲ್ಲಿ ಉನ್ನತಿಗೇ ರಲು ಸಾಧ್ಯ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ. ಆರ್. ಎಜುಕೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು.
ಅವರು ಶನಿವಾರ ಕರಾವಳಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಜರಗಿದ ಕರಾವಳಿ ಕಾಲೇಜುಗಳ ಸಮೂಹದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕರಾವಳಿ ಕಾಲೇಜು ಸಮೂಹದ ವಿವಿಧ ಕೋರ್ಸುಗಳ 632 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರಾವಳಿ ಕಾಲೇಜುಗಳ ಸಮೂ ಹದ ನಿರ್ದೇಶಕಿ ಲತಾ ಜಿ. ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿವಿಧ ಕಾಲೇಜುಗಳ ಪ್ರಾಂಶುಪಾಲ ರಾದ ಡಾ| ನಾರಾಯಣ ಸ್ವಾಮಿ, ಅಕಾಡೆಮಿಕ್ ಡೀನ್ ಡಾ| ಅಮರನಾಥ ಶೆಟ್ಟಿ, ಡಾ|
ಹಿಮಾ ವಿವೇಕಾನಂದನ್, ಪ್ರೊ| ಮೋಲಿ ಸಲ್ದಾನ್ಹಾ, ಪ್ರೊ| ಮೋಹನ್ ನಾಯ್ಕ ಉಪಸ್ಥಿತರಿದ್ದರು. ಟ್ರೆಸ್ಸಾ ಎಲಿಜಬೆತ್ ಕಾರ್ಯಕ್ರಮ ನಿರ್ವ ಹಿಸಿದರು. ಶೀತಲ್ ಕೆ.ಎಸ್. ಸ್ವಾಗತಿಸಿ, ವೈಭವ್ ಡಿ.ಟಿ. ಅವರು ವಂದಿಸಿದರು.
ಬದುಕಿನಲ್ಲಿ ಸಂಭವಿಸುವ ಸಣ್ಣ ಬದಲಾವಣೆ ಕೆಲವೊಮ್ಮೆ ದೊಡ್ಡ ಪರಿವರ್ತನೆಗೆ ಕಾರಣವಾಗುತ್ತದೆ. ಎಚ್ಚರದ ಹೆಜ್ಜೆ ಯಶಸ್ವೀ ಜೀವನಕ್ಕೆ ಅತೀ ಅಗತ್ಯ. ಸಮಸ್ಯೆಗಳ ಬಗ್ಗೆ ಕೊರಗದೆ, ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅದರ ಪರಿಹಾರಕ್ಕಾಗಿ ಪ್ರಯತ್ನಿಸಬೇಕು. ಕುಟುಂಬ, ಉದ್ಯೋಗ, ಸಮಾಜ ಹೀಗೆ ಪ್ರತಿಯೊಂದು ರಂಗಗಳಲ್ಲೂ ಹೊಂದಾಣಿಕೆಯಿಂದ ಸಾಗಿದರೆ ನೆಮ್ಮದಿಯ ಬದುಕು ಸಾಧ್ಯ.
-ಗಣೇಶ್ ರಾವ್