ನಿಪ್ಪಾಣಿ: ಬಾಲಕಿಯರಿಗಾಗಿ ಸುಸಜ್ಜಿತ ಶಾಲಾ ಕಟ್ಟಡದೊಂದಿಗೆ ಆಟಕ್ಕಾಗಿ ಮೈದಾನ ಹಾಗೂ ಸುರಕ್ಷತೆಗೆ ಆವರಣ ಗೋಡೆ ನಿರ್ಮಿಸಬೇಕೆಂದು ಶಾಸಕಿ ಶಶಿಕಲಾ ಜೊಲ್ಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಪ್ಪಾಣಿ ತಾಲೂಕಿನ ಹಂಚಿನಾಳ ಕೆ.ಎಸ್. ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜುರಾದ 17.20 ಕೋಟಿ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಾಣಿ ಚನ್ನಮ್ಮಾ ಬಾಲಕಿಯರ ವಸತಿ ನಿಲಯ ಕಾಮಗಾರಿ ಪರಿಶೀಲನೆ ನಡೆಸಿದರು. ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಶಿಕಲಾ ಸವದಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಾಯಕ ಕಾರ್ಯನಿವಾಹಕ ಅಭಿಯಂತರರಾದ ಗಿರಿ ರೆಡ್ಡಿ, ಸಿವಿಲ್ ಇಂಜಿನಿಯರ್ ವಿಠuಲ ಮಾನಗಾವೆ ಹಾಗೂ ಗುತ್ತಿಗೆದಾರರಾದ ಶಂಕರ ಶೆಟ್ಟಿಯವರೊಂದಿಗೆ ಶಾಸಕಿ ಶಶಿಕಲಾ ಜೊಲ್ಲೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಈ ಶಾಲೆಯು ಸುಸುಜ್ಜಿತ ಕಟ್ಟಡ, ವಸತಿ ನಿಲಯ, ಪ್ರಾಂಶುಪಾಲರ ಕೋಣೆ, ಶಿಕ್ಷಕರ ಹಾಗೂ ಸಿಬ್ಬಂದಿ ವಸತಿ ಸೇರಿದಂತೆ ಉಪಹಾರ ಗೃಹ ಹಾಗೂ ಬಾಲಕಿಯರಿಗಾಗಿ ಎಲ್ಲ ಸೌಲಭ್ಯಗಳುಳ್ಳ ಶೌಚಾಲಯ ಹಾಗೂ ಸ್ವಚ್ಛತಾ ಗೃಹ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.
ಶಾಲಾ ಪರಿಸರದಲ್ಲಿ ಯಾವ ಕಟ್ಟಡಗಳು ನಿರ್ಮಾಣಗೊಳ್ಳಲಿವೆ ಹಾಗೂ ಯಾವ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದೆ ಎಂಬ ಮಾಹಿತಿ ನೀಡಿದರು. ಶಾಲೆಯ 250 ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಉಲ್ಬಣವಾಗದಂತೆ ಬೋರವೆಲ್ ಕೊರೆದು ಎರಡು ದೊಡ್ಡ ಪ್ರಮಾಣದ ಟ್ಯಾಂಕ್ ನಿರ್ಮಿಸುತ್ತಿರುವ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಬನ ಹವಾಲ್ದಾರ, ಎಂ.ವೈ. ಹವಾಲ್ದಾರ, ಬಾಳಗೌಡ ಪಾಟೀಲ, ಶ್ರೀನಿವಾಸ ಶರ್ಮಾ, ಮನೋಜ ವೇತಾಳ, ಸದಾಶಿವ ಗವಳಿ, ಆರ್.ಸಿ. ಚೌಗುಲೆ, ಸುಧಾಕರ ಪೋವಾರ, ಗುರನಾಥ ಚೌಗುಲೆ, ಕುಮಾರ ಗುರವ, ರಮೇಶ ಪಾಟೀಲ, ಬಾಬಾಸೋ ಪೋವಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.