Advertisement

ಲೇಡಿಹಿಲ್‌ ಪರಿಸರದಲ್ಲಿ ನಡೆಯುವ ಪಥ ನಿರ್ಮಿಸಿ

02:59 PM Nov 18, 2018 | |

ಮಂಗಳೂರಿನಲ್ಲಿ ಕದ್ರಿ ಪಾರ್ಕ್‌ನಲ್ಲಿ ನಡೆಯುವ ಪಥ (ವಾಕಿಂಗ್‌ ಪಾಥ್‌)ಇದ್ದು, ಅದು ನೂರಾರು ನಾಗರಿಕರ ಆರೋಗ್ಯದ ದೃಷ್ಠಿಯಿಂದ ಬಹು ಉಪಯೋಗಿಯಾಗಿದೆ. ಕದ್ರಿ ಮತ್ತು ಸಮೀಪದ ಹೆಚ್ಚಿನ ನಾಗರಿಕರಿಗೆ ಇದು ನೆಚ್ಚಿನ ತಾಣವೆಂದು ಹೇಳಿದರೆ ತಪ್ಪಾಗಲಾರದು. ನಮ್ಮ ಮಂಗಳೂರು ಅಭಿವೃದ್ಧಿಯಲ್ಲಿ ಶರವೇಗದಲ್ಲಿ ಮುಂದುವರೆಯುತ್ತಿದ್ದು, ನಗರದ ಮೂಲ ಸೌಕರ್ಯಗಳಲ್ಲಿ ನಡೆಯುವ ಪಥವೂ ಒಂದು.

Advertisement

ಲೇಡಿಹಿಲ್‌, ಮಣ್ಣಗುಡ್ಡ, ಕುದ್ರೋಳಿ, ಕೋಡಿಕಲ್‌, ಉರ್ವಸ್ಟೋರ್‌ ಪರಿಸರದವರಿಗೆ ವಾಯುವಿಹಾರ ಮಾಡಲು ಸರಿಯಾದ ವಾಕಿಂಗ್‌ ಪಾಥ್‌ ಇಲ್ಲ. ಅವರು ರಸ್ತೆ ಅಥವಾ ಕಾಲುದಾರಿಯನ್ನು ಅವಲಂಬಿಸಬೇಕಾಗುತ್ತದೆ. ನಗರದಲ್ಲಿರುವ ಕಾಲುದಾರಿಗಳು ಕೆಲವೆಡೆ ಸಮರ್ಪಕವಾಗಿಲ್ಲ. ಇನ್ನು ಕೆಲವೆಡೆ ಬೀದಿ ಬದಿ ವ್ಯಾಪಾರಸ್ತರಿಂದ ತುಂಬಿದೆ. ಇದಕ್ಕೆ ಶೀಘ್ರ ಪರಿಹಾರ ಆಗಬೇಕಿದೆ. 

ಹೇಗೆ ಸಾಧ್ಯ
1. ಲೇಡಿಹಿಲ್‌ ಸಮೀಪವಿರುವ ಮಂಗಳಾ ಕ್ರೀಡಾಂಗಣದ ಎಡಕ್ಕಿರುವ ದುರಸ್ತಿಯಿಂದಿರುವ ನಡೆಯುವ ಪಥವನ್ನು ಸಿಮೆಂಟಿನ ಇಂಟರ್‌ಲಾಕ್ಸ್‌ಗಳನ್ನು ಅಳವಡಿಸಿ ಮೇಲ್ದರ್ಜೆಗೇರಿಸುವುದರೊಂದಿಗೆ, ವಿದ್ಯುತ್‌ ದೀಪಗಳನ್ನು ಸರಿಪಡಿಸಿ, ಮರದ ಕೊಂಬೆಗಳನ್ನು ವ್ಯವಸ್ತಿತಗೊಳಿಸಿದರೆ ಅತ್ಯುತ್ತಮವಾದ ನಡೆಯುವ ಪಥವಾಗುತ್ತದೆ. ಆ ಪ್ರದೇಶದಲ್ಲಿ ಎಲ್ಲ ಕಡೆ ಮರಗಳಿರುವುದರಿಂದ, ಅತ್ಯುತ್ತಮವಾದ ನಡೆಯುವ ಪಥವಾಗಬಹುದು.

2. ಗಾಂಧಿನಗರ/ಮಣ್ಣಗುಡ್ಡ/ಲೇಡಿಲ್‌ -ಲಾಲ್‌ಬಾಗ್‌/ಉರ್ವಸ್ಟೋರ್‌-ಚಿಲಿಂಬಿ ಪ್ರದೇಶದಲ್ಲಿ ಯಾವುದಾದರೂ ಒಂದು ಕಡೆ ಅತ್ಯುತ್ತಮವಾದ ಕಾಲುದಾರಿ ನಿರ್ಮಿಸಿ  ಅದನ್ನು ಬೀದಿ ಬದಿ ವ್ಯಾಪಾರಸ್ಥರಿಂದ ಮುಕ್ತಗೊಳಿಸಿದರೆ, ನಾಗರಿಕರಿಗೆ ನಡೆದಾಡಲು ಉಪಯೋಗವಾಗುತ್ತದೆ. 

ವಿಶ್ವನಾಥ್‌
ಕೋಟೆಕಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next