Advertisement

ಸ್ವಾವಲಂಬಿ ಆರ್ಥಿಕತೆ ನಿರ್ಮಾಣಕ್ಕೆ ಶ್ರೀಕಾರ

07:35 AM May 14, 2020 | Lakshmi GovindaRaj |

ನವದೆಹಲಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ಕುಸಿದಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತುವುದಕ್ಕೆ ಕೇಂದ್ರ ಸರ್ಕಾರ ದೇಶದ ಉದ್ಯಮ ಕ್ಷೇತ್ರಕ್ಕೆ ಭರ್ಜರಿ ಪ್ಯಾಕೇಜನ್ನು ಘೋಷಿಸಿ ದೆ. ನವದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ವಿವಿಧ ಕ್ಷೇತ್ರಗಳಿಗೆ ನಾನಾ ರೀತಿಯ ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. ಜೊತೆಗೆ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿ ಕೆಗಳಿಗೆ 3 ಲಕ್ಷ ಕೋಟಿ ರೂ. ಮೊತ್ತದ ಗ್ಯಾರಂಟಿ  ರಹಿತ ಸಾಲ ಸೌಲಭ್ಯವನ್ನು ನೀಡಿರುವುದರಲ್ಲದೆ, ಆ ಕೈಗಾರಿಕಗಳ ಮರುವಿಂಗಡಣೆಗಾಗಿ ಹೊಸ ನಿಯಮಗಳನ್ನು ಘೋಷಿಸಿದ್ದಾರೆ.

Advertisement

ಅಲ್ಲದೆ, ಆ ಕ್ಷೇತ್ರ ದಲ್ಲಿನ ಹೂಡಿಕೆ ವಿಚಾರದಲ್ಲಿ ಈಗಿರುವ ಕಾನೂನು ಗಳನ್ನು ಕೆಲವಾರು ಬದಲಾವಣೆ ಮಾಡುವ ಪ್ರಸ್ತಾ ಪವನ್ನೂ ಮಾಡಿದ್ದಾರೆ. ಇಂಥ ಇನ್ನೂ ಹತ್ತು ಹಲವು ಯೋಜನೆಗಳನ್ನು, ತಿದ್ದುಪಡಿಗಳನ್ನು, ಸೌಲಭ್ಯಗಳ ನ್ನು ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದರ ಒಟ್ಟಾರೆ ಉದ್ದೇಶ, ಪ್ರಧಾನಿಯವರ ಆಶಯದಂತೆ ಆತ್ಮಸ್ಥೈರ್ಯ ಭಾರತವನ್ನು ಕಟ್ಟುವುದು, ದೇಶವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸುವುದು, ಜಾಗತಿಕ ವಾಣಿಜ್ಯ ರಂಗದಲ್ಲಿ ಭಾರತವನ್ನು ಶಕ್ತಿ ಶಾಲಿ ರಾಷ್ಟ್ರವನ್ನಾಗಿಸುವುದೇ ಆಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಪ್ರಧಾನಿಯವರು ಘೋಷಿಸಿರುವ 3 ಲಕ್ಷ ರೂ. ಮೊತ್ತದ ಪ್ಯಾಕೇಜ ನ್ನು ಹಂತಹಂತವಾಗಿ ಜಾರಿಗೊಳಿಸಲಾಗುತ್ತದೆ. ಇಂದು (ಬುಧವಾರ) 14 ವಿವಿಧ ಕ್ಷೇತ್ರಗಳಿಗೆ ಘೋಷಿಸಲಾಗಿದೆ.  ಇವುಗಳಲ್ಲಿ ಆರು ಪ್ಯಾಕೇಜ್‌ ಗಳು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಕ್ಷೇತ್ರಕ್ಕೆ ಮೀಸಲಿದ್ದರೆ, ನಾನ್‌ ಬ್ಯಾಂಕಿಂಗ್‌ ಹಣ ಕಾಸು ಸಂಸ್ಥೆಗಳು (ಎನ್‌ಬಿಎಫ್ಸಿ) ಹಾಗೂ ಮ್ಯೂಚ್ಯುವಲ್‌ ಫ‌ಂಡ್‌ಗಳಿಗೆ ತಲಾ ಎರಡು  ಪ್ಯಾಕೇಜ್‌ ನೀಡಲಾಗಿದೆ. ಇನ್ನು, ವಿದ್ಯುತ್‌ ಸರಬರಾಜು ವಲಯಕ್ಕೆ, ಕಾಂಟ್ರಾಕ್ಟ್ ವಲಯ, ರಿಯಲ್‌ ಎಸ್ಟೇಟ್‌ ಹಾಗೂ ತೆರಿಗೆ ಇಲಾಖೆಗೆ ಸಂಬಂಧಿಸಿ ದಂತೆ ತಲಾ ಒಂದೊಂದು ರೀತಿಯ ಸೌಲಭ್ಯಗಳ ನ್ನು ಘೋಷಿಸಲಾಗಿದೆ ಎಂದು ಅವರು ತಿಳಿಸಿದರು. ಪ್ರಧಾನಿಯವರು ಈಗಾಗಲೇ ದೇಶದ ಒಟ್ಟಾರೆ ಆರ್ಥಿಕತೆಯನ್ನು ಬಲಗೊಳಿಸುವ ಸಂಬಂಧ ಸಮಗ್ರವಾದ ಗುರಿಯನ್ನು ನೀಡಿದ್ದಾರೆ.

ವಿವಿಧ ಕ್ಷೇತ್ರಗಳ ತಜ್ಞರ ಸಲಹೆಗಳನ್ನು ಪಡೆದು, ವಿವಿಧ ಸಂಘ-ಸಂಸ್ಥೆಗಳಿಂದ ಅನಿಸಿಕೆ,  ಅಭಿಪ್ರಾಯಗಳನ್ನು ಸಂಗ್ರಹಿಸಿ, ಆ ಗುರಿಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಸೀತಾರಾಮ ನ್‌ ತಿಳಿಸಿದರು. ಈಗ ಇಳಿಮುಖವಾಗಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನು ತ್ವರಿತವಾಗಿ ಮೇಲೆತ್ತಬೇಕಿದೆ. ಹಾಗೆ  ಆರ್ಥಿಕತೆಯನ್ನು ಮೇಲೆತ್ತುವ ಜೊತೆ ಜೊತೆಗೆ, ಭಾರತವನ್ನು ಸ್ವಾವಲಂಬಿಯನ್ನಾಗಿಸಬೇಕಿದೆ. ಹಾಗಾಗಿಯೇ ಪ್ರಧಾನಿಯವರು ಆತ್ಮಸ್ಥೈರ್ಯದ ಭಾರತವನ್ನು ಕಟ್ಟುವಂತೆ ಕಿವಿಮಾತು ಹೇಳಿದ್ದಾರೆ ಎಂದ ಅವರು, ಸ್ವಾವಲಂಬಿ  ರಾಷ್ಟ್ರವೆಂದರೆ ಅದು ವಿಶ್ವದಿಂದ ಪ್ರತ್ಯೇಕ ಆರ್ಥಿಕತೆ ರೂಪಿಸುವಂಥದ್ದಲ್ಲ. ಸ್ವತಂತ್ರವಾಗಿ ಆರ್ಥಿಕ ಸಬಲತೆಯನ್ನು ಸಾಧಿಸಿ, ವಿಶ್ವದ ಇತರ ಆರ್ಥಿಕತೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಲ್ಲಬೇಕು ಎನ್ನುವುದೇ ಅದರ ಒಳಾರ್ಥ ಎಂದು ಸ್ಪಷ್ಟಪಡಿಸಿದರು.

ಭಾರತದ ಪ್ಯಾಕೇಜ್‌ ಪಾಕ್‌ ಜಿಡಿಪಿಗೆ ಸಮ: ಕೊರೊನಾದಿಂದ ದೇಶದಲ್ಲಿ ಕುಸಿದಿರುವ ಆರ್ಥಿಕ ವ್ಯವಸ್ಥೆಯನ್ನು ಮೇಲೆತ್ತಲು ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ ಘೋಷಿಸಿದ್ದು, ಇದು ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ.10 ರಷ್ಟು ಮೊತ್ತವಾಗಿದೆ. ಈ 20 ಲಕ್ಷ ಕೋಟಿ ರೂ. ಮೊತ್ತವು ಹೆಚ್ಚು ಕಡಿಮೆ ಪಾಕಿಸ್ತಾನದ ಜಿಡಿಪಿಗೆ ಸರಿ ಸಮವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನದ ಜಿಡಿಪಿ 22-24 ಲಕ್ಷ ಕೋಟಿ ರೂ. ಇದೆ ಎಂದು ಅಂದಾಜಿಸಲಾಗಿದೆ.

Advertisement

ಗರೀಬ್‌ ಕಲ್ಯಾಣ ಪ್ಯಾಕೇಜ್‌-1: ಗರೀಬ್‌ ಕಲ್ಯಾಣ ಯೋಜನೆಯಡಿ ಒಟ್ಟು 2ಪ್ಯಾಕೇಜ್‌ಗಳನ್ನು ಪ್ರಕಟಿಸಲಾಗಿದೆ. ಮೊದಲ ಪ್ಯಾಕೇಜ್‌ನಲ್ಲಿ 1.70 ಲಕ್ಷ ಕೋಟಿ ರೂ. ಮೌಲ್ಯದ ಸೌಲಭ್ಯಗಳನ್ನು ದೇಶದ ಬಡವರಿಗೆ ಹಾಗೂ ಜನಸಾಮಾನ್ಯರಿಗೆ ಕಲ್ಪಿಸಲಾಗಿದೆ. ದೇಶದ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ವಿಮಾ ಸೌಲಭ, ಬಡವರಿಗೆ ಆಹಾರ ಭದ್ರತೆ ಅಡಿಯಲ್ಲಿ ಧಾನ್ಯಗಳ ವಿತರಣೆ ಮುಂತಾದವು ಇದರಲ್ಲಿ ಸೇರಿವೆ.

ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ಆರೋಗ್ಯ ಇಲಾಖೆಯ ಪ್ರತಿ  ಸಿಬ್ಬಂದಿಗೆ 50 ಲಕ್ಷ ರೂ. ಮೊತ್ತದ ವಿಮಾನ ಸೌಲಭ್ಯ ಸಿಗಲಿದೆ. ಇನ್ನು, ದೇಶದ ಪ್ರತಿ ಬಡವನಿಗೆ ಪ್ರತಿ ತಿಂಗಳೂ ತಲಾ 5 ಕೆಜಿ ಅಕ್ಕಿ ಅಥವಾ ಗೋಧಿ ವಿತರಣೆ ಮಾಡಲಾಗುತ್ತದೆ. ಮುಂದಿನ ಮೂರು ತಿಂಗಳುಗಳ ಕಾಲ ಈ ಸೌಲಭ್ಯ ಮುಂದುವರಿಯಲಿದೆ. ದೇಶದ ಸುಮಾರು 80 ಕೋಟಿ ಜನರಿಗೆ ಇದರ ಲಾಭ ಸಿಗಲಿದೆ. ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ ಮುಂದಿನ 3 ತಿಂಗಳುಗಳ ಕಾಲ 1 ಕೆಜಿ ದ್ವಿದಳ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ಜನಧನ ಖಾತೆ  ಹೊಂದಿರುವ ದೇಶದ 20 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 500 ರೂ.ಮಾಸಿಕ ಸಹಾಯ ಧನ ನೀಡಲಾಗುತ್ತದೆ.

3 ತಿಂಗಳುಗಳವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ. 8 ಕೋಟಿ ಬಡ ಕುಟುಂಬಗಳಿಗೆ ಮುಂದಿನ 3 ತಿಂಗಳ ವರೆಗೆ  ಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ನರೇಗಾ ಅಡಿಯಲ್ಲಿ ನೋಂದಾಯಿಸಲ್ಪಟ್ಟಿರುವ ಕೂಲಿ ಕಾರ್ಮಿಕರಿಗೆ ದಿನದ ಕೂಲಿಯನ್ನು 183 ರೂ.ಗಳಿಂದ 202 ರೂ.ಗಳಿಗೆ ಹೆಚ್ಚಿಸಲಾಗುತ್ತದೆ. ಇದರಿಂದ 13.62  ಕೋಟಿ ಕುಟುಂಬಗಳಿಗೆ ನೆರವಾಗಲಿದೆ. ಬಡ ಕುಟುಂಬದ ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಬಡ ಕುಟುಂಬದ ದಿವ್ಯಾಂಗರಿಗೆ ಮಾಸಿಕ1,000 ರೂ. ಪರಿಹಾರ ನೀಡಲಾಗುತ್ತದೆ.

ಗರೀಬ್‌ ಕಲ್ಯಾಣ ಪ್ಯಾಕೇಜ್‌-2: ಪ್ರಧಾನಮಂತ್ರಿ – ಕಿಸಾನ್‌  ಸಮ್ಮಾನ್‌ ಯೋಜನೆಯಲ್ಲಿ ನೋಂದಾಯಿಸಲ್ಪಟ್ಟಿರುವ ರೈತರಿಗೆ ತಲಾ 2,000 ಕೋಟಿ ರೂ.ಗಳ ಸಹಾಯಧನವನ್ನು ಮಾಸಿಕವಾಗಿ ನೀಡುವುದಾಗಿ ಘೋಷಿಸಲಾಗಿದೆ. ಇದರಿಂದ 8.7 ಕೋಟಿ ರೈತರಿಗೆ ನೆರವಾಗಲಿದೆ. ಕಟ್ಟಡ ನಿರ್ಮಾಣ  ಕಾರ್ಮಿಕರ ಸಂಘಗಳಿಗೆ ಕೂಲಿಕಾರ್ಮಿಕರಿಗೆ ಪರಿಹಾರ ಸೌಲಭ್ಯ ಕಲ್ಪಿಸಲು ಅನುವು ಮಾಡಿಕೊಡಲಾಗಿದೆ.

ಕೂಲಿ ಕಾರ್ಮಿಕರ ಸಂಘಗಳಲ್ಲಿ ನೋಂದಾಯಿಲ್ಪಟ್ಟಿ0ರುವ ಕೂಲಿ ಕಾರ್ಮಿಕರಿಗೆ ಅವರು ತಿಂಗಳಿಗೆ ಪಡೆಯುತ್ತಿದ್ದ ಒಟ್ಟಾರೆ  ಕೂಲಿಯಲ್ಲಿ ಶೇ. 24ರಷ್ಟನ್ನು ಅವರ ಪಿಎಫ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಮುಂದಿನ ಮೂರು ತಿಂಗಳವರೆಗೆ ಇದು ಮುಂದುವರಿಯಲಿದೆ. ಆದರೆ, ಇದು ಮಾಸಿಕವಾಗಿ 15,000 ರೂ. ಗಳಿಗಿಂತ ಕಡಿಮೆ ಕೂಲಿ ಪಡೆಯುವ  ಕೂಲಿಗಳಿಗೆ ಹಾಗೂ 100 ಕಾರ್ಮಿಕರಿಗಿಂತ ಕಡಿಮೆ ಇರುವ ಕಾಮಗಾರಿಗಳಿಗೆ ಮಾತ್ರ ಅನ್ವಯಿಸುತ್ತದೆ.ಕಾರ್ಮಿಕರ ಭವಿಷ್ಯ ನಿಧಿಯಲ್ಲಿ ನೋಂದಾಯಿಸಲಾಗಿರುವ 5 ಕೋಟಿ ಕಾರ್ಮಿಕರಿಗೆ ಅವರ ನಿಧಿಯಿಂದ ಶೇ. 75ರಷ್ಟು ಹಣವನ್ನು

ಅಥವಾ ಮೂರು ತಿಂಗಳ ಕೂಲಿ – ಇವುಗಳಲ್ಲಿ ಯಾವುದು ಕಡಿಮೆ ಇರುತ್ತದೋ ಆ ಮೊತ್ತವನ್ನು “ಮರು ಪಾವತಿಸಲಾಗದ ಮುಂಗಡ’ ರೂಪದಲ್ಲಿ ಪಡೆಯಲು ಅವಕಾಶ. ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಗ್ಯಾರಂಟಿ ಇಲ್ಲದ  ಸಾಲದ ಮೊತ್ತವನ್ನು 10ರಿಂದ 20 ಲಕ್ಷ ರೂ.ಗಳವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದರಿಂದ ದೇಶದ 6.85 ಕೋಟಿ ಕುಟುಂಬಗಳಿಗೆ ನೆರವು ೆ. ಇನ್ನು, ಕೊರೊನಾ ಹೋರಾಟದಲ್ಲಿ ನಿರತರಾಗಿರುವ ವೈದ್ಯಕೀಯ ಸಿಬ್ಬಂದಿಗೆ ಜಿಲ್ಲಾ  ಖನಿಜ ನಿಧಿ (ಡಿಎಂಎಫ್) ಹಣವನ್ನು ವೈದ್ಯಕೀಯ ಪರೀಕ್ಷೆಗಳು,  ಸ್ಕ್ರೀನಿಂಗ್‌ ಸೌಲಭ್ಯಗಳಿಗೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next