Advertisement

ಕವಿನಹಟ್ಟಿ-ಮಣಗುತ್ತಿಯಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಚಾಲನೆ

12:38 PM Feb 02, 2020 | Suhan S |

ಯಮಕನಮರಡಿ: ಪ್ರಸ್ತುತ್ತ ವರ್ಷದಲ್ಲಿ ಕವಿನಹಟ್ಟಿ ಹಾಗೂ ಮಣಗುತ್ತಿ ಗ್ರಾಮದ ಹೊರವಲಯದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಸುಮಾರು 5 ಕೋಟಿ ರೂ.ಗಳ ವೆಚ್ಚದಲ್ಲಿ ಎರಡು ಹೊಸ ಕೆರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

Advertisement

ಶನಿವಾರ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದ ಹೊರವಲಯದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ 2 ಕೋಟಿ ರೂ.ಗಳಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ಮಾರ್ಚ್‌ ಅಂತ್ಯದಲ್ಲಿ ಈ ಎರಡು ಕೆರೆಗಳ ಕಾಮಗಾರಿ ಮುಗಿಸಿ ಸುಮಾರು 300 ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಗ್ರಾಮೀಣ ಭಾಗದ ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಇದು ಅಲ್ಲದೇ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಮಾಡಲು ಹಗಳಿರುಳು ಶ್ರಮಿಸುತ್ತಾ ಜನರ ಪ್ರೀತಿ, ವಿಶ್ವಾಸ ಸದಾ ಇರಲಿ ಎಂದರು.

ಈ ಸಂದರ್ಭದಲ್ಲಿ ದಡ್ಡಿ ಜಿಪಂ ಸದಸ್ಯೆ ಮನಿಷಾ ಪಾಟೀಲ, ಮಣಗುತ್ತಿ ತಾಪಂ ಸದಸ್ಯ ಸುರೇಶ ಬೆಣ್ಣಿ, ರಮೇಶ ಪಾಟೀಲ, ಪ್ರಮೋದ ರಗಶೆಟ್ಟಿ, ಬಸವರಾಜ ದೇಸಾಯಿ, ಅಶೋಕ ಸಂಸುದ್ದಿ, ವಿಠಲ ಉಕ್ಕೂಜಿ, ಮಹಾನಿಂಗ ಶಿರಗುಪ್ಪಿ, ಎಂ.ಎ.ಪಾಟೀಲ, ಆರ್‌.ಕೆ. ದೇಸಾಯಿ, ಈರಣ್ಣಾ ದೇಸಾಯಿ, ದಯಾನಂದ ಪಾಟೀಲ, ಸುನೀಲ ಹುಕ್ಕೇರಿ, ನೀರಾವರಿ ಇಲಾಖೆಯ ಅಭಿಯಂತ ಸಂಜೇಯ ಮಾಳಗಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next