Advertisement
ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿ ಗಳು, ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಸಹಭಾಗಿತ್ವದಲ್ಲಿ ಇಂತಹದ್ದೊಂದು ವಿನೂತನ ಪ್ರಯೋಗ ನಡೆಸಿ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
Related Articles
Advertisement
ಸವಾಲಿನ ಕೆಲಸ :
“ಮಂಗಳನ ಮಣ್ಣನ್ನು ಬಳಸಿ ಇಟ್ಟಿಗೆ ನಿರ್ಮಾಣ ಮಾಡುವುದು ಸವಾಲಿನ ಕೆಲಸವಾಗಿತ್ತು. ಮಂಗಳನ ಮಣ್ಣಿನಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶವಿದೆ. ಇದು ಜೀವಿಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಆರಂಭದಲ್ಲಿ ನಮ್ಮ ಬ್ಯಾಕ್ಟೀರಿಯಾ ಈ ಮಣ್ಣಿನಲ್ಲಿ ಬೆಳೆಯಲೇ ಇಲ್ಲ, ಈ ಸಂದರ್ಭದಲ್ಲಿ ನಿಕ್ಕೆಲ್ ಕ್ಲೋರೈಡ್ ಬಳಸಿ ಮಂಗಳನ ಮಣ್ಣುನ್ನು ಬ್ಯಾಕ್ಟಿರಿಯಾ ಬೆಳೆಯಲು ಯೋಗ್ಯಗೊಳಿಸಲಾಯಿತು. ಇದು ನಮ್ಮ ಸಂಶೋಧನೆಯ ಮಹತ್ವದ ಘಟ್ಟ’ ಎಂದು ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಐಐಎಸ್ಸಿಯ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಅಲೋಕ್ ಕುಮಾರ್ ವಿವರಿಸಿದ್ದಾರೆ.
ಪ್ರಯೋಗ ಮುಂದುವರಿಯಲಿದೆ :
ಇಟ್ಟಿಗೆಯ ಮೇಲೆ ಮಂಗಳನ ವಾತಾವರಣ ಮತ್ತು ಕಡಿಮೆ ಗುರುತ್ವಕಾರ್ಷಣೆಯ ಪರಿಣಾಮದ ಅಧ್ಯಯನಕ್ಕೆ ಚಿಂತನೆ ನಡೆದಿದೆ. ಭೂಮಿಯ ವಾತಾವರಣಕ್ಕಿಂತ ಮಂಗಳನ ವಾತಾವರಣ ನೂರುಪಟ್ಟು ತೆಳುವಾಗಿದೆ. ಹಾಗೆಯೇ ಶೇ. 95ರಷ್ಟು ಇಂಗಾಲಾಮ್ಲವನ್ನು ಹೊಂದಿವೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಯ ಮೇಲೆ ಕೆಟ್ಟಪರಿಣಾಮ ಬೀರಬಹುದು. ಆದ್ದರಿಂದ ಸಂಶೋಧಕರು ಮಂಗಳ ಗ್ರಹದ ವಾತಾವರಣವನ್ನು ಹೋಲುವ ಚೇಂಬರ್‌ವೊಂದನ್ನು ನಿರ್ಮಿಸಿದ್ದು ಇಲ್ಲಿ ಪ್ರಯೋಗ ಮುಂದುವರಿಯಲಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಇಟ್ಟಿಗೆ ಮಂಗಳನಲ್ಲಿಗೆ :
ಮಂಗಳ ಗ್ರಹದ ಪರಿಸ್ಥಿತಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯ ಮೇಲೆ ನಿಗಾ ಇಡಲು ಉಪಕರಣವೊಂದನ್ನು ನಿರ್ಮಿಸಲಾಗಿದೆ. ಇಸ್ರೋದ ನೆರವಿನೊಂದಿಗೆ ಈ ಇಟ್ಟಿಗೆಯನ್ನು ಮಂಗಳ ಗ್ರಹಕ್ಕೆ ಕಳುಹಿಸಿ ಅಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಪರಿಶೀಲಿಸುವ ಯೋಜನೆ ರೂಪಿಸಲಾಗಿದೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ಇನ್ನೋರ್ವ ವಿಜ್ಞಾನಿ ರಶ್ಮಿ ದೀಕ್ಷಿತ್ ಹೇಳಿದ್ದಾರೆ.