ಮಡಿಕೇರಿ: ಪ್ರತಿಯೊಬ್ಬರು ಆರೋಗ್ಯ ಸುಧಾರಣೆಗೆ ವಿಶೇಷ ಕಾಳಜಿ ತೋರುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕು ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಕೊಡಗು ಹಾಗೂ ರೋಟರಿ ಸಂಸ್ಥೆ ಹಾಗೂ ಮೈಸೂರು ಜೆ.ಎಸ್.ಎಸ್.ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಾದ್ರೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇ ನಾವು ಎಲ್ಲವನ್ನು ಕಳೆದುಕೊಂಡು ನಿರಾ]ತರಾಗಿದ್ದೇವೆ ಎಂಬ ಮನೋಭಾವ ಹಾಗೂ ನೋವು ಬೇಡ ಎಂದು ದಿಡ್ಡಳ್ಳಿ ನಿರಾಶ್ರಿತರಿಗೆ ಹೇಳಿದರು.
ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ] ಮಹಾಂತ ಸ್ವಾಮೀಜಿ, ಸೋಮವಾರಪೇಟೆ ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಕೆ.ರವಿ, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಮಹಾದೇವಪ್ಪ, ಮೈಸೂರು ಜೆಎಸ್‌ಎಸ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪೂರ್ಣಿಮಾ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೇಖನಾಧರ್ಮಪ್ಪ, ಕುಶಾಲನಗರ ಪ.ಪಂ.ಸದಸ್ಯೆ ರೂಪಾ ಉಮಾಶಂಕರ್, ಹುದುಗೂರು ಅರಣ್ಯಾಧಿಕಾರಿ ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಎಚ್.ವಿ.ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಕೆ.ಸೌಭಾಗ್ಯ ಕಾರ್ಯಕ್ರಮ ನಿರೂಪಿಸಿದರು. ಬಸವರಾಜು ಸ್ವಾಗತಿಸಿದರು. ಶಿವಲಿಂಗ ವಂದಿಸಿದರು. ಶೌರ್ಯಚಕ್ರ ಪುರಸ್ಕೃತ ಎಚ್.ಎನ್.ಮಹೇಶ್, ದಿಡ್ಡಳ್ಳಿ ನಿರಾ]ತ ಪರ ಹೋರಾಟಗಾರರಾದ ಮುತ್ತಮ್ಮ, ಮಲ್ಲಪ್ಪ, ಸ್ವಾಮೀಯಪ್ಪ, ಅಪ್ಪುಕುಟ್ಟಿ ಅವರನ್ನು ಸಮ್ಮಾನಿಸಲಾಯಿತು. ಪುನರ್ವಸತಿ ಕೇಂದ್ರದಲ್ಲಿ ಅತಿಥಿಗಳು ಗಿಡಗಳನ್ನು ನೆಟ್ಟು ನೀರು ಹಾಕಿದರು.
ನಿರಾಶ್ರಿತರು ಹಾಗೂೆ ಸುತ್ತಮುಲಿನ ಜನರು ತಪಾಸಣೆ ಮಾಡಿಸಿಕೊಂಡರು