Advertisement

ಶಿಸ್ತಿನಿಂದ ಉತ್ತಮ ಸಮುದಾಯ ನಿರ್ಮಾಣ

09:59 AM Nov 15, 2017 | Team Udayavani |

ಕಲಬುರಗಿ: ಇಂದಿನ ಮಕ್ಕಳು ನಾಳಿನ ಪ್ರಜೆಗಳು ಮಾತ್ರವಲ್ಲ, ಸಮುದಾಯವು ಹೌದು. ಎಲ್ಲ ಮಕ್ಕಳು ಶಿಸ್ತು ಮೈಗೂಡಿಸಿಕೊಂಡಲ್ಲಿ ಉತ್ತಮ ಸಮುದಾಯ ನಿರ್ಮಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಆರ್‌. ವೆಂಕಟೇಶ ಕುಮಾರ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ 1098 ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಡಾ| ಎಸ್‌. ಎಂ.ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ “ಮಕ್ಕಳ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ| ಪಂಡಿತ ಜವಾಹರಲಾಲ್‌ ನೆಹರು ಜನ್ಮದಿನದಂದು ಆಚರಿಸಲ್ಪಡುತ್ತಿರುವ ಮಕ್ಕಳ ದಿನಾಚರಣೆಯು ಮಕ್ಕಳಿಗೆ ಪ್ರಮುಖ ಹಬ್ಬವೆನಿಸಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ ಹಾಗೂ ಡಾನ್‌ಬಾಸ್ಕೋ ಸಂಸ್ಥೆ ನೇತೃತ್ವದಲ್ಲಿ 150ಕ್ಕಿಂತ ಹೆಚ್ಚು ಸಂಭವನೀಯ ಬಾಲ್ಯ ವಿವಾಹವನ್ನು ತಡೆಹಿಡಿಯಲಾಗಿದೆ ಎಂದು ಹೇಳಿದರು.

ಮಕ್ಕಳ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಈಶ್ವರಿ ನಂದೂರ, ಕುಮಾರ ಮಹಾದೇವ, ವೆಂಕಟೇಶ, ವೈಶಾಲಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚ ಅಂಕ ಪಡೆದ ಭಾಗ್ಯಶ್ರೀ ವೀರಭದ್ರಯ್ಯ, ನಾಗೇಶ ಸಿದ್ದವೀರ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವೆಂಕಟೇಶ ರಾಠೊಡ, ಮಹಮ್ಮದ ಫರಾನ್‌ ಧನ್ನಿಶ್‌, ಐಶ್ವರ್ಯ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

Advertisement

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಿ.ವಿ.ರಾಮನ್‌, ಶಿವಶರಣಪ್ಪ, ಭರತೇಶ ಶೀಲವಂತ, ಪೊಲೀಸ್‌ ಇಲಾಖೆಯ ಪಿಎಸ್‌ಐ ಶರಣಬಸಪ್ಪ ಕೊಡ್ಲಾ, ಪಿಎಸ್‌ಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಜಗದೇವಪ್ಪ ಪಾಳಾ, ಪಿಎಸ್‌ಐ ರಾಘವೇಂದ್ರ, ಆರೋಗ್ಯ ಇಲಾಖೆಯ ಫಕೀರಪ್ಪ ದೊಡಮನಿ, ರೇಣುಕಾ, ಶಿಕ್ಷಣ ಇಲಾಖೆಯ ಆಶಾ ದೇಶಪಾಂಡೆ, ಶಿವಲೀಲಾ ಕಲಗುತ್ತಿ, ನಾಗೇಂದ್ರಪ್ಪ ಅವರಾದಿ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಬಸವರಾಜ ಬಿರಾದಾರ, ಶಾಕೀರ ಹುಸೇನ್‌, ರಾಜಶೇಖರಯ್ಯ ಸೇರಿದಂತೆ ವಿಠ್ಠಲ ಚಿಕಣಿ, ಆನಂದರಾಜ್‌, ಪಂಡಿತ ಶಿಂಧೆ, ಹೆಮಚಂದ್ರ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ ಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವರಾಜ ಸಜ್ಜನಶೆಟ್ಟಿ, ಡಾ|ಲಿಂಗರಾಜ ಕೋಣಿನ್‌, ಹೇಮಚಂದ್ರ ಹಾಜರಿದ್ದರು.

ಚೈಲ್ಡ್‌ಲೈನ್‌ ಸೆ ದೋಸ್ತಿ ಎನ್ನುವ 2018ರ ಕ್ಯಾಲೆಂಡರ್‌ ಹಾಗೂ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಇದಕ್ಕೂ ಮುನ್ನ ಕನ್ನಡಭವನದಿಂದ ಡಾ| ಎಸ್‌. ಎಂ.ಪಂಡಿತ ರಂಗಮಂದಿರವರೆಗೆ ಜಾಥಾ ಕಾರ್ಯಕ್ರಮ ಜರುಗಿತು. 

Advertisement

Udayavani is now on Telegram. Click here to join our channel and stay updated with the latest news.

Next