Advertisement

ಪೋಯಿಲೋಡಿ ಕಿಂಡಿ ಅಣೆಕಟ್ಟು ನಿರ್ಮಿಸಿ

10:32 PM Mar 11, 2021 | Team Udayavani |

ಬಂಟ್ವಾಳ: ಹರಿಯುವ ನೀರಿಗೆ ಕಟ್ಟ ಹಾಕಿ ಅಲ್ಲಿನ ನೀರನ್ನು ಕೃಷಿ ಕಾರ್ಯಕ್ಕೆ ಬಳಸುವ ಕಾರ್ಯ ಹೆಚ್ಚಿನ ಕಡೆಗಳಲ್ಲಿ ನಡೆಯುತ್ತಿದ್ದು, ಸರಕಾರವು ಸಣ್ಣ ನೀರಾವರಿ ಇಲಾಖೆಯ ಮೂಲಕ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ಕೃಷಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡುತ್ತಿದೆ. ನಾವೂರು ಗ್ರಾಮದ ಪೊçಲೋಡಿಯಲ್ಲಿ ತೋಡಿಗೆ ಇದೀಗ ತಾತ್ಕಾಲಿಕ ಕಟ್ಟ ಹಾಕುತ್ತಿದ್ದು, ಈ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಕೃಷಿಕರು ಆಗ್ರಹಿಸುತ್ತಿದ್ದಾರೆ.

Advertisement

ಸುಮಾರು 5 ದಶಕಗಳ ಹಿಂದೆ ಕೃಷಿಕರೇ ಸೇರಿ ಕಲ್ಲು, ಮಣ್ಣನ್ನು ಬಳಸಿ ಕಟ್ಟ ನಿರ್ಮಿಸುತ್ತಿದ್ದರು. ಆದರೆ ವಿದ್ಯುತ್‌ ಪಂಪ್‌ಗ್ಳು, ಕೊಳವೆಬಾವಿಗಳು ಬಂದ ಬಳಿಕ ಇಂತಹ ಕಟ್ಟಗಳು ದೂರವಾದವು. ಆದರೆ ಈಗ ಇಂತಹ ಕಟ್ಟಗಳೇ ಅನಿವಾರ್ಯವಾಗಿದ್ದು, ಹೀಗಾಗಿ ಎಲ್ಲ ಕಡೆಯೂ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

10 ಮಂದಿ ಸೇರಿ ಕಟ್ಟ ನಿರ್ಮಾಣ :

ಪೊçಲೋಡಿ ಪ್ರದೇಶದಲ್ಲಿ ತೋಡಿನ ಒಂದು ಬದಿ ನಾವೂರು ಗ್ರಾ.ಪಂ.ಹಾಗೂ ಮತ್ತೂಂದು ಬದಿ ಪಂಜಿಕಲ್ಲು ಗ್ರಾಮ ಪಂಚಾಯತ್‌ಗೆ ಸೇರುತ್ತದೆ. ಹಿಂದೆ ಸುಮಾರು 10 ರೈತರು ಸೇರಿ ಇಲ್ಲಿ ಕಟ್ಟ ನಿರ್ಮಿಸಿ ತಮ್ಮ ತೋಟಕ್ಕೆ ನೀರು ಹರಿಸಿ ಕೊಳ್ಳುತ್ತಿದ್ದರು. ಆದರೆ ಕಾಲಕ್ರಮೇಣ ಅವ ರಿಗೆ ನೀರಿನ ಬೇರೆ ಮೂಲಗಳು ಸಿಕ್ಕಿದ ಪರಿಣಾಮ ಕಟ್ಟ ನಿರ್ಮಿಸುವುದನ್ನೇ ಬಿಟ್ಟು ಬಿಟ್ಟರು.

ಪ್ರಸ್ತುತ ಸ್ಥಳೀಯ ಹೆಕ್ಕೊಟ್ಟು ನಿವಾಸಿ ಪ್ಲಾಸಿಡ್‌ ಡಿ’ಸೋಜಾ ಸ್ವಂತ ಖರ್ಚಿನಿಂದ ಗೋಣಿ ಚೀಲಗಳನ್ನು ಬಳಸಿ ಕಟ್ಟ ನಿರ್ಮಿಸುತ್ತಾರೆ.

Advertisement

ಸಮೃದ್ಧ ನೀರು :

ತೋಡಿನಲ್ಲಿ ನೀರು ಹರಿಯುತ್ತಿದ್ದರೂ, ರೈತರು ತಮ್ಮ ತೋಟಗಳಿಗೆ ಕೊಳವೆ ಬಾವಿಯ ಮೂಲಕವೇ ನೀರು ಹಾಕಿದಾಗ ತೋಡಿನಲ್ಲಿ ಹರಿಯುವ ನೀರಿನ ಪ್ರಮಾಣವೂ ಕಡಿಮೆಯಾಗುತ್ತದೆ. ಜನವರಿ-ಫೆಬ್ರವರಿ ಬಂತೆಂದರೆ ಸಾಕು ತೋಡುಗಳು ಬತ್ತಿ ಹೋಗಿರುತ್ತವೆ. ಆದರೆ ಕಿಂಡಿ ಅಣೆಕಟ್ಟುಗಳಿರುವ ತೋಡುಗಳಲ್ಲಿ ಬಿರು ಬೇಸಗೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ನೀರು ಇರುವುದನ್ನು ಕಾಣ ಬಹುದಾಗಿದೆ.

ಕಿಂಡಿ ಅಣೆಕಟ್ಟುಗಳ ಕುರಿತು ರೈತರು ಶಾಸಕರ ಮೂಲಕ ಮನವಿ ನೀಡಬೇಕಾಗುತ್ತದೆ. ಅಣೆಕಟ್ಟಿಗೆ ಅನುದಾನಗಳು ಶಾಸಕರ ಮೂಲಕ ಬರುವುದರಿಂದ ಪ್ರತೀವರ್ಷ ಅವರ ಮೂಲಕವೇ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ. ಬೇಕಾದ ಕಿಂಡಿ ಅಣೆಕಟ್ಟಿನ ಸ್ಥಳ ಪರಿಶೀಲನೆ ನಡೆಸಿ ಯೋಜನಾ ವರದಿ ಸಿದ್ಧಪಡಿಸಬೇಕಾಗುತ್ತದೆ.

-ಶಿವಪ್ರಸನ್ನ ಸಹಾಯಕ ಎಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ.

ಹಿಂದೆ ನಾವು 10 ರೈತರು ಸೇರಿಕೊಂಡು ಕಟ್ಟ ನಿರ್ಮಿಸಿ ನೀರನ್ನು ಉಪಯೋಗಿಸುತ್ತಿದ್ದೆವು. ಆದರೆ ಈಗ ರೈತರಿಗೆ ನೀರಿನ ಬೇರೆ ಮೂಲ ಇರುವುದರಿಂದ ಪ್ಲಾಸಿಡ್‌ ಡಿ’ಸೋಜಾ ಅವರು ತಮ್ಮ ಸ್ವಂತ ಖರ್ಚಿನಿಂದ ಕಟ್ಟ ನಿರ್ಮಿಸುತ್ತಿದ್ದಾರೆ. ಹಿಂದೊಮ್ಮೆ ಕಿಂಡಿ ಅಣೆಕಟ್ಟು ಬೇಕು ಎಂದು ಪಂಜಿಕಲ್ಲು ಗ್ರಾ.ಪಂ.ಗೆ ಮನವಿ ನೀಡಿದ್ದೆವು. -ಮ್ಯಾಕ್ಸಿಂ ಸಿಕ್ವೇರಾ,  ಸ್ಥಳೀಯ ಕೃಷಿಕ.

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next