Advertisement

ಸಸಿ ನೆಟ್ಟು ಉತ್ತಮ ಪರಿಸರ ನಿರ್ಮಿಸಿ

06:36 PM Jun 07, 2021 | Team Udayavani |

ಚಾಮರಾಜನಗರ: ಗಿಡ ಮರಗಳನ್ನು ಬೆಳೆಸಿಪೋಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮಪರಿಸರ ನಿರ್ಮಿಸುವ ಹೊಣೆಗಾರಿಕೆ ಎಲ್ಲರದ್ದಾಗಿದೆಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶಸದಾಶಿವ ಎಸ್‌.ಸುಲ್ತಾನ್‌ ಪುರಿ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾವಕೀಲರ ಸಂಘ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ ಮತ್ತು ನ್ಯಾಯಾಂಗ ಇಲಾಖೆಸಹಯೋಗದಲ್ಲಿ ನಗರದ ನ್ಯಾಯಾಲಯದಆವರಣದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಉದ್ಘಾಟಿಸಿ ಮಾತನಾಡಿದರು.

ನಮ್ಮ ಕರ್ತವ್ಯ: ಅಭಿವೃದ್ಧಿ ನೆಪದಲ್ಲಿ ಮರ ಕಡಿದುಹಾಕಿದರೆ ಪರಿಸರದಲ್ಲಿ ಅಸಮತೋಲನಉಂಟಾಗುತ್ತದೆ. ಮರ ಗಿಡ ಬೆಳೆಸುವುದರ ಮೂಲಕಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣಮಾಡುವತ್ತ ಗಮನ ಹರಿಸಬೇಕು. ಸಸಿ ನೆಟ್ಟು ಅರಣ್ಯಬೆಳೆಸಿ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಪ್ರಮುಖಕರ್ತವ್ಯ ಎಂದು ತಿಳಿಸಿದರು.

ಪರಿಸರ ದಿನ ಆಚರಣೆಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ಪರಿಸರಉಳಿಸುವ ಕಾರ್ಯ ನಿರಂತರವಾಗಿ ಸಾಗಬೇಕುಎಂದು ಸಲಹೆ ಮಾಡಿದರು.

ಪರಿಸರ ಸಂರಕ್ಷಿಸಿ: ಹಿರಿಯ ಸಿವಿಲ್‌ ನ್ಯಾಯಾಧೀಶಗಣಪತಿ ಜಿ.ಬಾದಾಮಿ ಮಾತನಾಡಿ, ಜ್ವಾಲಾಮುಖೀ,ಮಣ್ಣು ಕುಸಿತ, ಜಲ ಪ್ರಳಯ, ಜಾಗತಿಕ ತಾಪಮಾನಏರಿಕೆಯಂತಹ ಅನೇಕ ತೊಂದರೆ ಸಂಭವಿಸಲುಪರಿಸರ ನಾಶವೇ ಪ್ರಮುಖ ಕಾರಣ. ಹೀಗಾಗಿಪರಿಸರ ಸಂರಕ್ಷಿಸಿ ಭೂಮಿ ರಕ್ಷಿಸಬೇಕು ಎಂದರು.ಪರಿಸರ ಪ್ರಾಮುಖ್ಯತೆ ತಿಳಿಸಿ: ಕಾನೂನು ಸೇವೆಗಳಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.ಮನುಷ್ಯ ತನ್ನ ನಿರ್ಲಕ್ಷ್ಯದಿಂದ ಸುತ್ತಮುತ್ತಲಿನಪರಿಸರ ಹಾಳು ಮಾಡುತ್ತಿದ್ದಾನೆ.

Advertisement

ಇದಕ್ಕೆಮುಂದೊಂದು ದಿನ ಬೆಲೆ ತೆರಬೇಕಾಗುತ್ತದೆ. ಅದಕ್ಕೆಈಗಲೇ ಎಚ್ಚೆತ್ತು ಪರಿಸರ ಸಂರಕ್ಷಣೆ ಮಾಡುವುದರಜತೆಗೆ ಮಕ್ಕಳಿಗೂ ಗಿಡ ಮರ ಹಾಗೂ ಪರಿಸರದಪ್ರಾಮುಖ್ಯತೆ ತಿಳಿಸಬೇಕು ಎಂದರು.

ಜೀವಿಸಲು ಅವಕಾಶ ನೀಡಿ: ಪ್ರಧಾನ ಸಿವಿಲ್‌ನ್ಯಾಯಾಧೀಶ ಮಹಮ್ಮದ್‌ ರೋಷನ್‌ ಷಾಮಾತನಾಡಿ, ಪರಿಸರ ನಾಶ ಮಾಡುವುದರಿಂದಭವಿಷ್ಯದಲ್ಲಿ ಸಾಕಷ್ಟು ಅಪಾಯ ಎದುರಿಸಬೇಕಾಗುತ್ತದೆ. ಮರ ಕಡಿದ ಸ್ಥಳದಲ್ಲಿ ಒಂದು ಸಸಿನೆಡಬೇಕು.

ಪ್ರಾಣಿ, ಪಕ್ಷಿ ಇತರೆ ಜೀವ ಸಂಕುಲ ಗಿಡಮರಗಳನ್ನು ನಂಬಿ ಬದುಕುತ್ತವೆ. ಅವುಗಳಿಗೆಜೀವಿಸಲು ಅವಕಾಶ ಮಾಡಿಕೊಡಬೇಕೆಂದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರುಇಂದುಶೇಖರ್‌, ಹೆಚ್ಚುವರಿ ಸಿವಿಲ್‌ನ್ಯಾಯಾಧೀಶರಾದ ಸ್ಮಿತಾ, ಸಾಮಾಜಿಕ ಅರಣ್ಯವಲಯದ ಅಧಿಕಾರಿ ಟಿ.ಆರ್‌. ಅಮೃತಾನ್ಯಾಯಾಂಗ ಇಲಾಖೆ ಮುಖ್ಯ ಆಡಳಿತಾಧಿಕಾರಿಸುರೇಶ್‌, ನ್ಯಾಯಾಂಗ ಇಲಾಖೆ ನೌಕರರಅಧ್ಯಕ್ಷರಾದ ಯಂಕನಾಯಕ, ಪರಿಸರ ಮಂಡಳಿಹರಿಪ್ರಸಾದ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next