Advertisement

ಬುಗಾಟ್ಟಿಚೇರಾನ್‌ ಪ್ರೊಫಿಲೀ ಕಾರು ಬರೋಬ್ಬರಿ 88.23 ಕೋಟಿ ರೂಪಾಯಿಗಳಿಗೆ ಹರಾಜು

06:17 PM Feb 06, 2023 | Team Udayavani |

ಫ್ರಾನ್ಸ್‌: W-16 ಸಿಲಿಂಡರ್‌ ಒಳಗೊಂಡ ಬುಗಾಟ್ಟಿ ಚೇರಾನ್‌ ಪ್ರೊಫಿಲೀ ಆವೃತ್ತಿಯ ಕೊನೆಯ ಸೂಪರ್‌ಕಾರು ಬರೋಬ್ಬರಿ 88.23 ಕೋಟಿ ರೂಪಾಯಿಗಳಿಗೆ (10.7 ಮಿಲಿಯನ್‌ ಡಾಲರ್‌)  ಮಾರಾಟವಾಗುವ ಮೂಲಕ ಜಗತ್ತಿನಲ್ಲೇ ಅತ್ಯಂತ ದುಬಾರಿ ಬೆಲೆಗೆ ಹರಾಜಾದ ಕಾರು ಎಂಬ ವಿಶ್ವದಾಖಲೆಗೆ ಪಾತ್ರವಾಗಿದೆ. .

Advertisement

ಫೆ.1ರಂದು ಫ್ರಾನ್ಸ್‌ನ ಆಟೆಲಿಯರ್‌ ಎಂಬಲ್ಲಿ ಆರ್‌.ಎಂ.ಸೋಥೆಬೈಸ್‌ ಎಂಬ ಕಂಪನಿ ನಡೆಸಿದ ಹರಾಜಿನಲ್ಲಿ ಭಾರೀ ಪೈಪೋಟಿಯ ಮಧ್ಯೆ ಈ ದುಬಾರಿ ಬೆಲೆಗೆ ಮಾರಾಟವಾಗಿದೆ.ಕೇವಲ 2.3 ಸೆಕೆಂಡುಗಳಲ್ಲೇ 100k\h ತಲುಪುವ ಸಾಮರ್ಥ್ಯವಿರುವ ಈ ಸೂಪರ್‌ ಕಾರು 8 ಲೀಟರ್‌ನ ಕ್ವಾಡ್‌ ಟರ್ಬೋ W-16 ಎಂಜಿನ್‌ ಹೊಂದಿದೆ. 7,993 ಸಿಸಿ ಎಂಜಿನ್‌ ಸಾಮರ್ಥ್ಯ ಹೊಂದಿರುವ ಈ ಕಾರು 6,700 rpm ಕೂಡಾ ಹೊಂದಿದೆ.2017 ರಲ್ಲಿ ವಿಶ್ವದಾಖಲೆಯ ಉದ್ದೇಶದಿಂದ ನಡೆಸಿದ ಪರೀಕ್ಷೆಯಲ್ಲಿ 400k\h ವೇಗ ತಲುಪಲು ಈ ಕಾರು ಕೇವಲ 32.6 ಸೆಕೆಂಡುಗಳನ್ನು ತೆಗೆದುಕೊಂಡಿತ್ತು. ಈ ಕಾರು 100 ಕಿ.ಮೀ ದೂರ ಸಾಗಲು 22.5 ಲೀಟರ್‌ ತೈಲ ಉಪಯೋಗಿಸಿಕೊಳ್ಳುತ್ತದೆ ಎಂದು ಬುಗಾಟ್ಟಿ ಕಂಪನಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next